PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜು. ೩೦ : ೮ನೇ ಬಾರಿಗೆ ನಡೆಯಲಿರುವ ಕೊಪ್ಪಳ ಜಿಲ್ಲಾ ಉತ್ಸವದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಸಿರಿಗನ್ನಡ ಪುಸ್ತಕ ಮಳಿಗೆ ಹಾಗೂ ಕೊಪ್ಪಳ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆ ವತಿಯಿಂದ ಬರುವ ಆಗಷ್ಟ ೨೩, ೨೪, ೨೫ ಮೂರು ದಿನಗಳ ಕಾಲ ನಡಯಲಿರುವ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಲೇಖಕರ ಮತ್ತು ಸಾಹಿತಿಗಳ ಪುಸ್ತಕ ಪ್ರದರ್ಶನ ಕರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರದರ್ಶನಕ್ಕೆ ಬರುವ ಪುಸ್ತಕಗಳಲ್ಲಿ ಆಯ್ದ ಉತ್ತಮ ಕೃತಿಗಳಿಗೆ ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು. 
ಪ್ರತಿಭಾನ್ವಿತ ಉದಯೋನ್ಮುಖ ಲೇಖಕರನ್ನು ಪ್ರೋತ್ಸಹಿಸುವ ಹಿನ್ನೆಲೆಯಲ್ಲಿ ಅವರ ಕೃತಿಗಳು ಸಾರ್ವಜನಿಕರಿಗೆ ತಲುಪುವ ಮತ್ತು ಸಾಹಿತ್ಯಾಸಕ್ತರನ್ನು, ಓದುಗರನ್ನು, ಪುಸ್ತಕಪ್ರಿಯರನ್ನು ಸೆಳೆಯುವ ನಿಟ್ಟಿನಲ್ಲಿ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ಲೇಖಕರು, ಸಾಹಿತಿಗಳು ೨೦೦೭ರಿಂದ ಪ್ರಕಟವಾದ ತಮ್ಮ ಯಾವುದೆ ಪ್ರಕಾರದ ಸಾಹಿತ್ಯ ಕೃತಿಯ ೩ ಪ್ರತಿಗಳೊಂದಿಗೆ ತಮ್ಮ ಸಂಪೂರ್ಣ ಮಾಹಿತಿಯನ್ನು ಆಗಸ್ಟ ೨೧ರೊಳಗಾಗಿ ಕನ್ನಡ ಪುಸ್ತಕ ಪ್ರಧಿಕಾರ ಸಿರಿಗನ್ನಡ ಪುಸ್ತಕ ಮಳಿಗೆ, ಸಾಹಿತ್ಯ ಭವನ ಆವರಣ, ಅಶೋಕ ವೃತ್ತ ಕೊಪ್ಪಳ ಈ ವಿಳಾಸಕ್ಕೆ ಕಳುಹಿಸಿಕೊಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೨೪೨೮೬೩೦೫೦, ೯೦೩೫೭೩೫೫೭೩ಗೆ ಸಂಪರ್ಕಿಸಬಹುದಾಗಿದೆ ಎಂದು ಸಿರಿಗನ್ನಡ ಪುಸ್ತಕ ಮಳಿಗೆಯ ಜಿಲ್ಲಾ ಪ್ರತಿನಿಧಿ ವೈ. ಬಿ. ಜೂಡಿ ತಿಳಿಸಿದ್ದಾರೆ.

29 Jul 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top