PLEASE LOGIN TO KANNADANET.COM FOR REGULAR NEWS-UPDATES


 ನಗರದ ಶ್ರೀಗವಿಸಿದ್ದೇಶ್ವರ ಆಯುರ್ವೇದ ಮಹಾ ವಿದ್ಯಾಲಯದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯತ್ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಏಡ್ಸ ನಿಯಂತ್ರಣ ಘಟಕ,  ಗೋಪಿ ಬ್ಲಡ್ ಬ್ಯಾಂಕ್ ಗಂಗಾವತಿ ಹಾಗೂ ಇತರೇ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ  ವಿಶ್ವ ರಕ್ತದಾನಿಗಳ ದಿನಾಚರಣೆ  ಕಾರ್ಯಕ್ರಮ  ಜರುಗಿತು. 
             ಉದ್ಘಾಟಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ  ಡಾ. ಶ್ರೀಕಾಂತ ಬಾಸೂರು ನೆರವೇರಿಸಿ  ಮಾತನಾಡಿ ಅನ್ನದಾನ, ನೇತ್ರದಾನಕ್ಕಿಂತ ರಕ್ತದಾನವು ಶ್ರೇಷ್ಠವಾಗಿದೆ.  ಆಪಘಾತಕ್ಕೆ ಒಳಗಾದ ಮತ್ತು ಇತರೇ ಆಘಾತದಲ್ಲಿರುವ ರೋಗಿಗಳಿಗೆ ರಕ್ತದಾನ ಮಾಡುವದರ ಮೂಲಕ ಅವರ ಜೀವವನ್ನು ಉಳಿಸುವಂತ ಕಾರ್ಯವು  ರಕ್ತದಾನದ ಮೂಲಕ ನಡೆಯಬೇಕಾಗಿದೆ. ಈ ದಿಸೆಯಲ್ಲಿ ಯುವಕರು ಮುಂದಾಗಬೇಕೆಂದರು. ವೇದಿಕೆಯ ಮೇಲೆ ಡಾ.ಎಸ್.ಬಿ.ದಾನರೆಡ್ಡಿ, ಡಾ.ಬಸವರಾಜ ಸವಡಿ, ಡಾ.ಕೆ.ಬಿ. ಹಿರೇಮಠ ಉಪಸ್ಥಿತರಿದ್ದರು. 
           ಈ ಸಂದರ್ಭದಲ್ಲಿ  ೧೩೦ ಯುವಕರು ರಕ್ತದಾನ ಮಾಡಿದರು.  
            ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದಂತಹ ೮ ಜನರನ್ನು  ಈ ಸಂರ್ದದಲ್ಲಿ ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಎಲ್ಲ ಕಾರ್ಯಕ್ರಮಾನುಷ್ಠಾನ ಅಧಿಕಾರಿಗಳು, ತಾಲೂಕಾ ಆರೋಗ್ಯ ಅಧಿಕಾರಿಗಳು, ಡ್ಯಾಪ್ಕೂ ಸಿಬ್ಭಂಧಿಯವರು, ಇತರೇ ಸಂಘಸಂಸ್ಥೆಗಳ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು. ಆರಂಬದಲ್ಲಿ ಜಾಥಾ ನೆಡಸಲಾಯಿತು.

Advertisement

0 comments:

Post a Comment

 
Top