PLEASE LOGIN TO KANNADANET.COM FOR REGULAR NEWS-UPDATES

 ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ವತಿಯಿಂದ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ಖ್ಯಾತ ಶಿಲ್ಪ ಕಲಾವಿದರು, ಆಂಜನೇಯ ಭಕ್ತರಾದ ಪ್ರಕಾಶ ಶಿಲ್ಪಿಯವರ ನೇತೃತ್ವದಲ್ಲಿ ೨೭೦೦ ನೇ ದಿನದ ಮೂರ್ತಿ ಸೇವೆ ನಡೆಯಿತು.
  ಕೊಪ್ಪಳದ ಪ್ರಕಾಶ ಶಿಲ್ಪಿಯವರು ಕೈಗೊಂಡಿರುವ ಆಂಜನೇಯ ಮೂರ್ತಿ ಸೇವಾ ವೃತ ೨೭೦೦ ನೇ ದಿನಕ್ಕೆ ತಲುಪಿದ್ದರಿಂದ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಶಿಖಾರಿಪುರದ ಶ್ರೀ ಭ್ರಾಂತೇಶ ದೇವಸ್ಥಾನ, ಹಾವೇರಿ ಜಿಲ್ಲಾ ಕದರಮಂಡಲಗಿ ಶ್ರೀ ಕಾಂತೇಶ ದೇವಸ್ಥಾನ ಹಾಗೂ ಸಾತೇನಹಳ್ಳಿಯ ಶ್ರೀ ಶಾಂತೇಶ ದೇವಸ್ಥಾನಗಳಲ್ಲಿ ಒಂದೇ ದಿನ ಮೂರು ಮೂರ್ತಿಗಳನ್ನು ಕೆತ್ತಿ ಆಯಾ ದೇವಸ್ಥಾನಗಳಲ್ಲಿ ಪೂಜೆ ಮಾಡಿಕೊಂಡು ಬರಲಾಯಿತು,  
ದೇವಸ್ಥಾನದ ಕೆಲಸ ಭರದಿಂದ ಸಾಗಿದ್ದು ಈಗ ಮೂರು ಬೃಹತ್ ಆಂಜನೇಯ ಮೂರ್ತಿಗಳು (ಭ್ರಾಂತೇಶ, ಕಾಂತೇಶ, ಶಾಂತೇಶ) ನಿರ್ಮಾಣಗೊಳ್ಳುತ್ತಿವೆ, ವಿಶ್ವದಲ್ಲಿಯೇ ಈ ತರಹದ ಕಾಯಕ ಬೇರೆಲ್ಲೂ ಕಾಣಸಿಗುವದಿಲ್ಲ. ಇಲ್ಲಿ ಇರುವ ಸುಮಾರು ೨೮೦೦ ಆಂಜನೇಯ ಮೂರ್ತಿಗಳು ಮಡಿಯಿಂದ ಹಾಗೂ ಬಿಡುವಿಲ್ಲದೇ ಒಂದೇ ಸಮಯದಲ್ಲಿ ಸಿದ್ಧವಾಗುತ್ತದೆ, ಅದಕ್ಕೆ ಒಂದರಿಂದ ಮೂರು ಗಂಟೆ ಸಮಯ ತಗಲುತ್ತದೆ, ಪ್ರತಿ ೪೮ ದಿಕ್ಕೆ ಒಮ್ಮೆ ಮಂಡಲ ಪೂಜೆ ಮಾಡಲಾಗುತ್ತದೆ, ಅಂದು ಎಲ್ಲಾ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ.
ಟ್ರಸ್ಟ್ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ, ಅಶೋಕ ಬಜಾರಮಠ, ಟ್ರಸ್ಟ್ ಪ್ರಮುಖರಾದ ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ, ಟ್ರಸ್ಟ್ ಸದಸ್ಯರಾದ ನಿಂಗಪ್ಪ ನಿಟ್ಟಾಲಿ, ಪರಮೇಶ ಚಕ್ಕಿ, ವಿರೇಶ ಚೋಳಪ್ಪನವರ, ಶಿವಾಜಿ ಜಾದವ, ಪ್ರಕಾಶಶೆಟ್ಟಿ, ಪ್ರಕಾಶ ಎಮ್ಮಿಗನೂರ, ಅಮರೇಶ ಚಿಲಕಮುಖಿ, ಪ್ರಹಲಾದಪ್ಪ ಪಿನ್ನಾಪತಿ, ಮಂಜುನಾಥ ಆನಂದಕರ್ ಇತರರು ಇದ್ದರು.

Advertisement

0 comments:

Post a Comment

 
Top