PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಲೋಕಸಭಾ ವ್ಯಾಪ್ತಿಯ ಗ್ರಾಮೀಣಾಭಿವೃದ್ಧಿಗೆ ೪೦ ಕೋಟಿ ರೂ. ಶೀಘ್ರವೇ ಬಿಡುಗಡೆಗೊಳಿಸಬೇಕೆಂದು ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರಲ್ಲಿ ಮನವಿ ಮಾಡಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಅಂಗವಿಕಲರಿಗೆ ವಾಹನ ಸೌಲಭ್ಯ, ಆರೋಗ್ಯ, ನಿರುದ್ಯೋಗ ನಿವಾರಣೆಗೆ ಎಸ್.ಸಿ./ಎಸ್.ಟಿ. ಸ್ಲಂಗಳ ಅಭಿವೃದ್ಧಿಗಾಗಿ ಕ್ಷೇತ್ರ ವ್ಯಾಪ್ತಿಯ ಸಂಪೂರ್ಣ ಅಭಿವೃದ್ಧಿಗೆ ಆದಷ್ಟು ತೀವ್ರಗತಿಯಲ್ಲಿ ಅನುದಾನ ನೀಡುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಅವರು ಇಂದು ಇಲ್ಲಿನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸ್ಲಂ ಮೋರ್ಚಾದ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಎಲ್ಲಾ ಮೋರ್ಚಗಳ ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತಮ್ಮ ಗೆಲುವಿಗೆ ಕಾರಣರಾಗಿದ್ದಾರೆ ನಾನು ಅವರ ಋಣ ತೀರಿಸಲಾಗದು ಎಂದು ಉದ್ಘರಿಸಿದರು. ದೇಶದಲ್ಲಿ ವಂಶಪರಂಪರೆಯ ರಾಜಕೀಯಕ್ಕೆ ಮಂಗಳ ಹಾಡಿ ಬಿಜೆಪಿ ಪಕ್ಷವು ಅದ್ಬುತವಾಗಿ ಜಯ ಸಾಧಿಸಿ ನರೇಂದ್ರ ಮೋದಿಯವರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಯುವಕರ ಪಡೆಯ ಶ್ರಮ ಬಹಳ ಇದೆ ಎಂದ ಅವರು ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಪ್ರಯತ್ನ ಸ್ಲಂ ಮೋರ್ಚಾ ಕಾರ್ಯಕರ್ತರು ಮಾಡಬೇಕು. ಆಯಾ ವ್ಯಾಪ್ತಿಯ ವಾರ್ಡಗಳ ಸ್ವಚ್ಛತೆಗೆ ಆಧ್ಯತೆ ನೀಡಬೇಕು. ನಿರುದ್ಯೋಗ ಯುವಕರಿಗೆ ಅಲ್ಪ ಪ್ರಮಾಣದ ಉದ್ಯೋಗ ಕಲ್ಪಿಸಲು ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದ ಅವರು ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು. ಕ್ಷೇತ್ರದಲ್ಲಿ ನನ್ನನ್ನು ಆಯ್ಕೆಗೊಳಿಸುವ ಮೂಲಕ ಜವಬ್ದಾರಿ ನೀಡಿದ್ದು ನಿಮ್ಮಷ್ಟೆ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ನಿಷ್ಟೆ ಪ್ರದರ್ಶಿಸುವ ಮೂಲಕ ನಿಮ್ಮ ಋಣ ತೀರಿಸುತ್ತೇನೆ ಎಂದರು. ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಮಾತನಾಡಿ, ಇಡೀ ದೇಶದಲ್ಲಿ ಭಾರತೀಯ ಜನತಾ ಪಕ್ಷವು ಗೆಲುವಿನ ಮುಖಾಂತರ ಬಲಾಧ್ಯ ಪಡೆದಿದೆ. ಹಣದಿಂದ ರಾಜಕೀಯ ಮಾಡುವವರನ್ನು ದೂರ ಸರಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುವವರನ್ನು ಅಧಿಕಾರಕ್ಕೆ ತಂದು ಮತದಾರರು ಮೋದಿಯವರನ್ನು ಪ್ರಧಾನಿಯನ್ನಾಗಿಸಿದ್ದಾರೆ. ಮೋದಿಯವರು ಕೂಡ ಬಡ ಕುಟುಂಭದಿಂದಲೇ ಬಂದವರು. ಅವರು ಆದರ್ಶಗಳನ್ನು ಸ್ಲಂ ಮೋರ್ಚಾ ಪದಾಧಿಕಾರಿಗಳು ಅನುಕರಿಸಿ ಜಿಲ್ಲೆಯಲ್ಲಿ ಕಾರ್ಯಕರ್ತರು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಚಟುವಟಿಕೆಯಲ್ಲಿ ತೋಡಗಿಸಿಕೊಳ್ಳಬೇಕೆಂದರು.
ಬಿಜೆಪಿ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಕೆ. ಅಂಬಣ್ಣ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋಚಾ ಪದಾಧಿಕಾರಿಗಳು ಅತ್ಯಂತ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿಗೆ ಅತಿಹೆಚ್ಚು ಮತಗಳು ಬರಲು ಕಾರಣಿಕರ್ತರಾಗಿದ್ದಾರೆ ಯಾವುದೇ ಕಾರಣಕ್ಕೂ ಪಕ್ಷದ ಹಿರಿಯರು ಸ್ಲಂ ಮೋರ್ಚಾ ಪದಾಧಿಕಾರಿಗಳನ್ನು ಕಾರ್ಯಕರ್ತರನ್ನು ಕಡೆಗಣಿಸಬಾರದು ಪಕ್ಷದ ಹಿರಿಯರು ಸಂಸದರು ವಹಿಸಿಕೊಟ್ಟ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುವದಾಗಿ ಅಧ್ಯಕ್ಷ ಕೆ. ಅಂಬಣ್ಣ ಗಂಗಾವತಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಸಂಸದ ಸಂಗಣ್ಣ ಕರಡಿಯವರಿಗೆ ಜಿಲ್ಲಾ ಸ್ಲಂ ಮೋರ್ಚಾ ಪದಾಧಿಕಾರಿಗಳು ಅದ್ದೂರಿಯಿಂದ ಸನ್ಮಾನಿಸಿದರು. ಇವರೊಂದಿಗೆ ವಿವಿಧ ಮೋರ್ಚಗಳ ಪದಾಧಿಕಾರಿಗಳು ಅಭಿಮಾನಿಗಳು ಸಂಸದರನ್ನು ಸನ್ಮಾನಿಸಿದರು. 
ಕಾರ್ಯಕ್ರಮದಲ್ಲಿ ಸ್ಲಂ ಮೋರ್ಚಾ ರಾಜ್ಯಾಧ್ಯಕ್ಷ ವಿರೇಶ ಅಚ್ಚಳಗಿರಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ, ನವೀನ ಗುಳಗಣ್ಣನವರ್, ಅಪ್ಪಣ್ಣ ಪದಕಿ, ಕೋಟ್ರೇಶ ಶೇಡ್ಮಿ, ಮೋರ್ಚಾ ಪ್ರ. ಕಾ. ದೇವರಾಜ ಹಾಲಸಮುದ್ರ, ವಿರೇಶ ಉಳೆಕಲ್, ನರಸಿಂಗ್‌ರಾವ್ ಕುಲಕರ್ಣಿ, ಪ್ರಭು ಗಾಳಿ, ಅರುಣ್‌ಕುಮಾರ, ಶಾಮ್ಲಾ ಕೋನಾಪುರ, ಪರಮಾನಂದ ಯಾಳಗಿ ಸೇರಿದಂತೆ ಸ್ಲಂ ಮೋರ್ಚಾ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top