ಕರ್ನಾಟಕ ಜನಹಿತ ವೇದಿಕೆ ಜಿಲ್ಲಾಧ್ಯಕ್ಷರಾಗಿ ಬಸವರಡ್ಡಿ ಶಿವನಗೌಡ್ರು
ಕೊಪ್ಪಳ : ೩೦, ಕನ್ನಡ ನಾಡಿನ ನೆಲ, ಜಲ, ರಕ್ಷಣೆಗಾಗಿ ಹೋರಾಟದ ಕೂಗು ಕೇವಲ ರಾಜ್ಯಕ್ಕೆ ಸಿಮೀತವಾಗದೆ ಇಡಿ ದೇಶದಾದ್ಯಂತ ಧ್ವನಿ ಮೊಳಗಬೇಕು ಅನ್ಯ ಬಾಷೆಗರಿಂದ ಕನ್ನಡಿಗರ ಮೇಲೆ ಸದಾ ದಬ್ಬಾಳಿಕೆ ನಡೆಯುತ್ತಿದೆ. ಸ್ವಾಭಿಮಾನದಿಂದ ಬದುಕುತ್ತಿರುವ ಕನ್ನಡಿಗರು ಕನ್ನಡ ಬಾಷೆಗೆ ದಕ್ಕೆಯಾದರೇ ಯಾವುದಕ್ಕೂ ಸಹಿಸಲರರು, ಎಂದು ಕರ್ನಾಟಕ ಜನಹಿತ ವೇದಿಕೆಯ ರಾಜ್ಯ ಪದಾಧೀಕಾರಿ ಕಳಕಪ್ಪ ಪೋತಾ, ಹೇಳಿದರು
.jpg)

ಗದಗ ಜಿಲ್ಲಾ ಅಧ್ಯಕ್ಷ ಯಮನೂರಸಾಬ ನಧಾಪ್ ಮಾತನಾಡಿ ೭ ವರ್ಷಗಳಿಂದ ನಡೆಯುತ್ತಿರುವ ಐ.ಪಿ.ಎಲ್ ಎಂಬ ಕ್ರೀಕೆಟ್ ಬೂತಕ್ಕೆ ಅನೇಕ ಯುವಕರು ಬೆಟ್ಟಿಂಗ್ ಬೂತಕ್ಕೆ ಬಲಿಯಾಗಿ ತಮ್ಮ ಪ್ರಾಣವನ್ನೆ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಸಂಘಟನೆಯ ಹೋರಾಟದ ಮೂಲಕ ಜನರಲ್ಲಿ ಜಾಗೃತಿಗೊಳಿಸಲಾಗುತ್ತದೆ. ಎಂದರು.
ಇದೆ ಸಂದರ್ಭದಲ್ಲಿ ಕರ್ನಾಟಕ ಜನಹಿತ ವೇದಿಕೆಯ ಕೊಪ್ಪಳ ಜಿಲ್ಲಾ ಅಧ್ಯಕ್ಷರನ್ನಾಗಿ ಬಸವರೆಡ್ಡಿ ಶಿವನಗೌಡ್ರುರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧೀಕಾರಿಗಳಾದ ಗವಿಸಿದ್ದಪ್ಪ ಕರ್ಕಿಹಳ್ಳಿ, ರಮೇಶ ಅಬ್ಬಿಗೇರಿ, ಕೆ.ಕೆ. ಸರ್ಕವರ ಚಂದ್ರಯ್ಯ ಹೊಸಮಠ, ಪಂಚಾಕ್ಷರಿ ಶರಣಾಚಾರ್ಯ, ಶಶಿಕುಮಾರ, ಪರಶುರಾಮ ಕಸ್ತೂರಿ, ಮೆಹಮೂದ ಹುಸೇನ್, ಬಿ. ಶ್ರವಣಕುಮಾರ, ಬಸವರಾಜ ಬೆಲ್ಲದ, ಅಮೀತಕುಮಾರ, ಶ್ರೀಕಾಂತ ಅಳ್ಳಳ್ಳಿ, ನಾಗರಾಜ ಚಾಕ್ರಿ, ಸಂತೋಷಕುಮಾರ ಬಣಕಾರ, ಪ್ರಸನ್ನ ಚಲವಾದಿ, ಮೋಹನ ಕುಮಾರ ಮ್ಯಾಗೇರಿ ಸೇರಿದಂತೆ ಇನ್ನೀತರ ಪಧಾಧೀಕಾರಿಗಳು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಕನ್ನಡ ಪರ ಸಂಘಟನೆಗಳಲ್ಲಿ ಅವಿರತ ಹೋರಾಟ ಮಾಡುತ್ತಿರುವ ಕೊಪ್ಪಳ ಜಿಲ್ಲೆಯ ಸಂಘಟನೆಯ ಹೋರಾಟಗಾರ ಗವಿಸಿದ್ದಪ್ಪ ಕರ್ಕಿಹಳ್ಳಿಯವರನ್ನು ಕರ್ನಾಟಕ ಜನಹಿತ ವೇದಿಕೆಯ ರಾಜ್ಯ ಪಧಾದಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿದರು.
0 comments:
Post a Comment
Click to see the code!
To insert emoticon you must added at least one space before the code.