PLEASE LOGIN TO KANNADANET.COM FOR REGULAR NEWS-UPDATES



 ಮೇ ೩೦: ಮುಂದುವರೆದ ಸಮಾಜವೆಂದು ನಮ್ಮನ್ನು ಸಮಾಜದಲ್ಲಿಯೇ ತುಳಿತಕೊಳಪಡುತ್ತಿರುವ ಸಮುದಾಯದಿಂದ ಸಮಾಜದ ಮುಕ್ತಿಗೆ ಲಿಂಗ ಪೂಜೆ ಬಿಡಿಸಬೇಕಾದ ಅನಿವಾರ್ಯತೆ ಬಂದಿದೆ ಇದು ಅತ್ಯಂತ ನೋವಿನ ಹಾಗೂ ಖೇಧದ ಸಂಗತಿ ಎಂದು ಸುಕ್ಷೇತ್ರ ತಂಗಡಗಿಯ ಅಪ್ಪಣ್ಣ ದೇವರ ಮಹಾಸಂಸ್ಥಾನದ ಪೀಠಾಧೀಶ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿ ತಿಳಿಸಿದರು.
          ಅವರು ಶುಕ್ರವಾರ ಸಮೀಪದ ಭಾಗ್ಯನಗರ ನಿಜಸುಖಿ ಹಡಪದ ಅಪ್ಪಣ್ಣ ಹಾಗೂ ನಿಜಮುಕ್ತಿ ಲಿಂಗಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮತನಾಡಿ, ಈ ಹಿಂದೆ ೧೨ ನೇ ಶತಮಾನ ಹಾಗೂ ಅದರಾಚೆಯೂ ಸಮಾಜಕ್ಕೆ ಸಾಕಷ್ಟು ತುಳಿತಕ್ಕೊಳಪಟ್ಟಿತ್ತು. ಅಂದರಂತೆ ಬಸವಣ್ಣನವರ ಕಾಲದಲ್ಲಿ ಎಲ್ಲರನ್ನು ಸಮಾನ ದೃಷ್ಠಿಯಿಂದ ಕಾಣಲಾಗುತ್ತಿತ್ತು. ಅಲ್ಲಿಯೂ ಅನ್ಯಾಯವಾಗಿದೆ. ಆದರೆ ಈಗ ಸುಕ್ಷೇತ್ರ ತಂಗಡಗಿಯಲ್ಲಿ ಅಪ್ಪಣ್ಣನವರ ಮೂರ್ತಿ ಪ್ರತಿಷ್ಟಾಪನೆಗೆ ಸಾಕಷ್ಟು ಸಂಕಷ್ಟಗಳು ಎದುರಾಗಿವೆ. ಮೂರ್ತಿ ತಯಾರಾಗಿದ್ದು ಪ್ರಾಧಿಕಾರ ಅದರ ಪ್ರತಿಷ್ಟಾಪನೆಗೆ ಹಿಂದೆಟು ಹಾಕುವಂತೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ನಡೆಸಿವೆ. ಅದಕ್ಕೆ ಮುಂದುವರೆದ ಜಾತಿ ವರ್ಗ ಹಾಗೂ ರಾಜಕೀಯ ಪೀತುರಿ ಇದ್ದು ಇದರಿಂದ ಅಧಿಕಾರಿಗಳು ತಟಸ್ಥಕ್ಕೆ  ಕಾರಣವಾಗಿದೆ. ಹೀಗಿದ್ದು ಲಿಂಗಾಯತರು ನಾವು ಎಂದು ಏಕೆ ಹೇಳಿಕೊಳ್ಳಬೇಕು. ಶರಣ ಬಸವಣ್ಣ, ನೀಲಮ್ಮನವರ ಸಮಕಾಲಿನ ಅಪ್ಪಣ್ಣನವರಿಗೆ ಆ ಸ್ಥಳದಲ್ಲಿ ಅವಕಾಶವಿಲ್ಲವೆಂದ ಮೇಲೆ ಇಂದು ಬಸವ ಕೇಂದ್ರ, ಬಸವದಳ, ಬಸವ ಸಮುದಾಯ, ಬಸವ ಟ್ರಸ್ಟ್ ಇವೆಲ್ಲಾ ಏನು ಮಾಡುತ್ತಿವೆ. ಮಾತೆ ಮಹಾದೇವಿಯವರಿಗೆ ಈ ಕುರಿತು ಗಂಟೆಗಟ್ಟಲೇ ವಿವರಿಸಿದ್ದೇನೆ. ಇವರೆಲ್ಲಾ ಇದ್ದು ನಮಗೇನು ಪ್ರಯೋಜನ. ಇವರೆಲ್ಲಾ ಬಸವಣ್ಣನವರನ್ನು ಒಪ್ಪಿಕೊಂಡಂತೆ ಅವರ ತತ್ವಗಳನ್ನೇಕೆ ಇವರು ಅಪ್ಪಿಕೊಂಡಿಲ್ಲ.ಂದರೆ ಅವರೇಲ್ಲಾ ಸುಳ್ಳು ಎಂಬಂರ್ಥವಲ್ಲವೇ? ಈ ಆಡಂಭೀಕರಣ ನಮಗೆ ಬೇಕಿಲ್ಲಾ ನಮ್ಮ ಸಮಾಜಕ್ಕೆ ಕನಿಷ್ಟ ಸೌಜನ್ಯ, ಸೌಲಭ್ಯವಿಲ್ಲದಂತಾಗಿದ್ದು ಅಲ್ಪಸಂಖ್ಯಾತ ಬಡ ಸಮಾಜವಾಗಿರುವುದಕ್ಕೆ ನೋವು ನುಂಗಲಾರದ ತುತ್ತಾಗಿದೆ. ಇದರಿಂದಾಗಿ ಸಮಾಜ ಭಾಂದವರು ಹಿಂದೆ ಕಲ್ಯಾಣದ ಕ್ರಾಂತಿಯಂತೆ ಇನ್ನು ಮುಂದೆ ಹೋರಾಟದ ಮೂಲಕವೇ ಸಮಾಜದ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕು. ಸಮಾಜದ ಮಕ್ಕಳಿನ ಭವಿಷ್ಯತ್ತಿನ ಹಿತದೃಷ್ಠಿಯಿಂದ ಶೈಕ್ಷಣಿಕ, ಭೌತಿಕ, ಸಾಮಾಜಿಕ ಹಾಗೂ ರಾಜಕೀಯ ಹಿತದೃಷ್ಟಿಯಿಂದ ತಮ್ಮ ಜಾತಿಯನ್ನು ಪ್ರತ್ಯೇಕವಾಗಿ ಕ್ಷೌರೀಕ ಇಲ್ಲವೇ ಅಡಪದ ಎಂದು ದಾಖಲಿಸಿ ಶೈಕ್ಷಣಿಕ ಪ್ರಗತಿಯಿಂದ ಸಮಾಜ ಅಭಿವೃದ್ಧಿ ಹೊಂದಬೇಕಿದೆ ಎಂದರು.
‘ಹಡಪ’ ಎಂದರೆ ಚೀಲ ಎಂದರ್ಥ. ಅದು ಜೊಳಿಗೆ, ಹೊಟ್ಟೆ ಪ್ರತಿಯೊಂದಕ್ಕು ಅರ್ಥವಾಗಲಿದೆ. ಒಟ್ಟು ಚೀಲ ತುಂಬಿಸುವುದೇ ಕಾಯಕ ಅಂದ ಮೇಲೆ ಎಲ್ಲರೂ ಹಡಪಿಗಳೇ ಎಂದರ್ಥ. ಬೆಳಿಗ್ಗೆ ನಮ್ಮ ಮುಖ ನೋಡದವರು ೩ ತಿಂಗಳು ಹಾಗೇ ಇರಲಿ. ಅಂತವರ ಮುಖವನ್ನು ಅವರ ಹೆಂಡತಿಯು ನೋಡಲಾಗದಂತಾಗುತ್ತಾರೆ. ನಮ್ಮ ಜನತೆಗೆ ೨೦ ರೂ. ನೀಡಿ ಕ್ಷೌರ ಮಾಡಿಸಿಕೊಳ್ಳದವರು. ಮನೆಯಲ್ಲಿ ತಾವೇ ಮಾಡಿಕೊಳ್ಳುವವರಿಗೆ ಏನೆಂದು ಕರೆಯಬೇಕು. ಕಿಳಿರಿಮೆಯನ್ನು ಸಮಾಜದ ಜನತೆ ಇನ್ನುಮುಂದೆ ಬಿಟ್ಟುಹಾಕಿ ಹೋರಾಟದ ಮೂಲಕ ಮುಖ್ಯವಾಹಿನಿ ಬರಬೇಕೆಂದು ಅವರಿಲ್ಲಿ ಸಮಾಜದ ಜನತೆಗೆ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಸಮಾಜ ಅಭಿವೃದ್ಧಿಗೆ ಶೈಕ್ಷಣಿಕ ಪ್ರಗತಿ ಅತ್ಯವಶ್ಯವಾಗಿದೆ. ಸಮಾಜದ ಅಭಿವೃದ್ಧಿಗೆ ತಾವು ಬೆನ್ನೆಲುಭಾಗಿ ನಿಲ್ಲುವುದಾಗಿ ಅವರಲ್ಲಿ ಭರವಸೆ ನೀಡಿದರು. ಕಾರ್ಯಕ್ರಮ ಪೂರ್ವದಲ್ಲಿ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದೇವಸ್ಥಾನದ ಅಡಿಗಲ್ಲು ಸಮಾರಂಭ ನೇರವೇರಿಸಿದರು. ಭಾಗ್ಯನಗರ ಗ್ರಾ.ಪಂ. ಅಧ್ಯಕ್ಷ ಹೊನ್ನೂರಸಾಬ ಬೈರಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾಗ್ಯನಗರ ಶಂಕರಾಚಾರ್ಯ ಮಠದ ಶಿವಪ್ರಕಾಶನಂದ ಸ್ವಾಮಿ, ದದೇಗಲ್ ಸಿದ್ಧಾರೂಢಮಠದ ಆತ್ಮಾನಂದ ಭಾರತಿ ಸ್ವಾಮಿಗಳು ಸಾನಿಧ್ಯವಹಿಸಿದ್ದು,  ಜಿ.ಪಂ.ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ಸಿ.ಎಫ್.ನಾವಿ,  ಸೇರಿದಂತೆ ಭಾಗ್ಯನಗರ ಗ್ರಾ.ಪಂ. ಸರ್ವ ಸದಸ್ಯರು ಹಾಗೂ ವಿವಿಧ ಸಮುದಾಯದ ಸಂಘ, ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಡಪದ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಬೇವಿನಹಳ್ಳಿ, ಮಂಜುನಾಥ ಹಂದ್ರಾಳ, ನಿಂಗಪ್ಪ ಹಂದ್ರಾಳ, ಎಸ್.ಜಿ.ಹಡಪದ. ಭಾಗ್ಯನಗರದ ಹ.ಅ. ಸಮಾಜದ ಅಧ್ಯಕ್ಷ ಮಹೇಶ ಮಾದಿನೂರು, ಕಾರ್ಯದರ್ಶಿ ಉಮೇಶ ಮುದೋಳ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಇತರೆ ತಾಲೂಕ, ಹೋಬಳಿ ಹಾಗೂ ಗ್ರಾಮ ಮಟ್ಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
         ಅನ್ನಪೂರ್ಣಮ್ಮ ಮನ್ನಾಪೂರ ಪ್ರಾರಂಭದಲ್ಲಿ ಪ್ರಾರ್ಥಿಸಿದರೆ, ಎಸ್.ಜಿ. ಕಟ್ಟಿಮನಿ ಸ್ವಾಗತಿಸಿದರು. ವಿರೇಶ ಹುಲ್ಲೂರು ನಿರೂಪಿಸಿದರೆ ಮಂಜುನಾಥ ಅಂದ್ರಾಳ ಕೊನೆಯಲ್ಲಿ ವಂದಿಸಿದರು.

Advertisement

0 comments:

Post a Comment

 
Top