ಕೊಪ್ಪಳದ ವಿವಿಧೆಡೆ ಇಂದು ಲೋಕಾಯುಕ್ತ ಅಧಿಕಾರಿಗಳು ಸರಕಾರಿ ಅಧಿಕಾರಿಯ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯಿತಿ ಸಹಾಯಕ ಸಾಂಖಿಕ ಅಧಿಕಾರಿ ಬಸನಗೌಡ ಅವರಿಗೆ ಸೇರಿದ ಗದಗ ರಸ್ತೆಯಲ್ಲಿರುವ ನಿವಾಸ, ಕಚೇರಿ, ಮಳಿಗೆ ಹಾಗೂ ಕುಕನೂರು ಗ್ರಾಮದಲ್ಲಿರುವ ಅವರ ಸಹೋದರನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ರಾಯಚೂರು ಲೋಕಾಯುಕ್ತ ಎಸ್ಪಿ ಎ.ಎಚ್.ಚಿಪ್ಪಾರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಬಸನಗೌಡರ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ವಾರ್ಷಿಕ ಆದಾಯ ೪೫ ಲಕ್ಷ ರೂಪಾಯಿಗಳಿದ್ದು, ಬಸನಗೌಡರು ೧ ಕೋಟಿ ೨೦ ಲಕ್ಷ ರೂಪಾಯಿ ಆದಾಯ ಹೊಂದಿದ್ರು. ಆದಾಯಕ್ಕಿಂತ ಪ್ರತಿಶತ ೧೮೭ ರಷ್ಟು ಅಧಿಕ ಆದಾಯ ಹೊಂದಿದ್ದಾರೆ. ಎರಡು ಜೆಸಿಬಿ, ೨ ಲಕ್ಷದ ೪೫ ಸಾವಿರ ರೂಪಾಯಿ ಹಾಗೂ ವಾಣಿಜ್ಯ ಮಳಿಗೆಯೊಂದರ ದಾಖಲಾತಿಗಳು ದಾಳಿ ಸಂದರ್ಭದಲ್ಲಿ ದೊರಕಿವೆ. ದಾಖಲಾತಿ ಪರಿಶೀಲನೆ ಕಾರ್ಯ ಮುಂದುವರಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.