PLEASE LOGIN TO KANNADANET.COM FOR REGULAR NEWS-UPDATES

 : ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದ ಆವರಣದಲ್ಲಿ ಏ.೨೬ ರಂದು ಸಂಜೆ ೫.೩೦ ಕ್ಕೆ  ಲಿಂ.ಡಾ|| ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯ ಸ್ಮರಣೋತ್ಸವ, ಡಾ|| ಪಂಡಿತ ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಘ ಹಿರೇಬಗನಾಳ ಇದರ ೭ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಿರೇಬಗನಾಳ ಜಾಹಗೀರ ಮಠದ ಲಿಂ.ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದ್ವಿತೀಯ ವರ್ಷದ ಪುಣ್ಯ ಸ್ಮರಣೋತ್ಸವ ಶಾರದಮ್ಮ ಹಿರೇಮಠ ಮಕ್ಕಳು ಹಾಗೂ ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರಿಂದ ಸಂಗೀತ ಸಂಜೆ, ಧಾರ್ಮಿಕ-ಸಾಂಸ್ಕೃತಿಕ ಸನ್ಮಾನ ಸಭೆಯನ್ನು ಆಯೋಜಿಸಲಾಗಿದೆ. 
ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗನ ಶ್ರೀ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರ, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಚೈತನ್ಯಾನಂದ ಸ್ವಾಮಿಜಿ ವಹಿಸಲಿದ್ದಾರೆ. 
ಕಾರ್ಯಕ್ರಮದ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್.ವೀರಣ್ಣ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಸರಕಾರಿ ಸಹಕಾರಿ ಗೃಹ ಮಂಡಳಿ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ, ಕುಷ್ಟಗಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಿಗೇರಿ, ಮಹಾರಾಷ್ಟ್ರ ಬ್ಯಾಂಕ್‌ನ ಮ್ಯಾನೇಜರ ಬಿ.ಎಸ್.ಹಿರೇಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ, ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಮಂಜುನಾಥ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಹಕಾರಿ ಸೇವಾ ಬ್ಯಾಂಕ್‌ನ ಅಧ್ಯಕ್ಷರಾದ ಜಿ.ಎಸ್.ಗೋನಾಳ, ಸಂಪಾದಕ ಕೆ.ಎಫ್.ಮುದ್ದಾಬಳ್ಳಿ, ನಿವೃತ್ತ ಡೆಪ್ಯೂಟಿ ತಹಶೀಲ್ದಾರ ರಾಮಣ್ಣ ವೇಮಲಿ, ಸಾಹಿತಿ ಬಸವರಾಜ ಶೀಲವಂತರ, ನ್ಯಾಯವಾದಿ ವಿ.ಎಸ್.ಕಟ್ಟಿ, ನಂದಿಶ್ವರ ಶಾಲಾ ಸಮಿತಿಯ ಅಧ್ಯಕ್ಷ ಶಿವಪ್ಪ ಶೆಟ್ಟರ್, ನಿವೃತ್ತ ಶಿರಸ್ತೆದಾರ ವೆಂಕಟರಾವ್ ಕುಲಕರ್ಣಿ ಅವರು ಆಗಮಿಸಲಿದ್ದಾರೆ. 
ಸನ್ಮಾನ : ಈ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಹೆಚ್.ಎಸ್.ಪಾಟೀಲ್, ಸಂಗೀತ ಶಿಕ್ಷಕ ಅಂಬಣ್ಣ ಕೊಪ್ಪರದ, ಜಾನಪದ ಗಾಯಕ ಸಿ.ಎಂ.ನರಸಿಂಹ ಮೂರ್ತಿ, ಬಳ್ಳಾರಿ ಡಿಡಿಪಿಐ ಕಛೇರಿಯ ವಿಷಯ ಪರಿವೀಕ್ಷಕ ಶಬ್ಬೀರ್ ಅಹ್ಮದ್ ಅವರಿಗೆ ಸನ್ಮಾನಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಯಕ್ರಮ ಸಂಯೋಜಕರಾದ ಮಹಾಂತೇಶ್ವರ ಶಾಸ್ತ್ರಿಗಳು ಕೂಟನೂರು, ಗೋವಿಂದರಾಜ ಗಿಣಿಗೇರ ಹಾಗೂ ಸಿದ್ದಯ್ಯ ಹಿರೇಮಠ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

25 Apr 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top