PLEASE LOGIN TO KANNADANET.COM FOR REGULAR NEWS-UPDATES








 ದೇಶದಲ್ಲಿ ಅಭಿವೃದ್ದಿಯನ್ನು ಅರ್ಥವಾಗಿಸಿದ್ದು ಬಿ.ಜೆ.ಪಿ ಅಟಲ್‌ಜಿ ನೇತೃತ್ವದಲ್ಲಿ ಎನ್.ಡಿ.ಎ ಅಧಿಕಾರಕ್ಕೆರಿದಾಗ ವಿಶ್ವಾಸದ ಹೊಸ ಶಕೆ ಪ್ರಾರಂಭವಾಯಿತು ಅಧಿಕಾರೀಶಾಹಿ ಹಿಡಿತದಲ್ಲಿ ದಿಕ್ಕು ತಪ್ಪಿದ್ದ ಪ್ರಗತಿಯ ದಾರಿ, ಅಭಿವೃದ್ದಿಯ ಹೆದ್ದಾರಿಯಾಗಿ ನಳನಳಿಸಿತು ಸಂಪನ್ಮೂಲ ವ್ಯೆಯವಾಗದೆ ಸದುಪಯೋಗವಾಯಿತು ಅಭಿವೃದ್ದಿಯ ಸಂಕಲ್ಪದೊಂದಿಗೆ ದುಡಿಯುವ ಕೈಗಳಿಗೆ ಕೆಲಸ, ಹಸಿದವರಿಗೆ ಅನ್ನಭಾಗ್ಯ ದೊರಕಿತ್ತು ಯೋಜಿತ ಅಭಿವೃದ್ದಿ, ಉದ್ಯೋಗ ಸೃಷ್ಠಿ, ಸರ್ವರಿಗೂ ಸಮಪಾಲು ವಿಕಾಸದ ಮೂಲ ಮಂತ್ರವಾಯಿತು. ಎಂದು ಬಿ.ಜೆ.ಪಿ ಯ ಲೋಕಸಭಾ ಅಭ್ಯರ್ಥಿಯಾದ ಕರಡಿ ಸಂಗಣ್ಣ ನವರು ಹೇಳಿದರು.    
ಕೊಪ್ಪಳ ನಗರದ ಕೋಟೆ ಏರಿಯಾ, ದಿಡ್ಡಿಕೇರಿ, ಮಿಟ್ಟಿಕೇರಿ, ಹಮಾಲರ ಕಾಲೋನಿಯಲ್ಲಿ ವಿವಿದಡೆ ಪ್ರಚಾರಸಭೆಗಳನ್ನು ಕೈಗೊಂಡು ಅವರು ಮಾತನಾಡಿದರು.    
ಹಿಂದಿನ ಬಿ ಜೆ ಪಿ ಸರಕಾರದ ಅವಧಿಯಲ್ಲಿ ಸೂರು ರಹಿತರಿಗೆ ವಾಜಪೇಯಿ ನಗರ ಆಶ್ರಯ ಮನೆ ಮಂಜೂರಾಗಿದ್ದು ಮನೆಗಳ ನಿರ್ಮಾಣ ಕಾಮಗಾರಿ ಸ್ಥಗಿತವಾಗಿದೆ ಕೊಪ್ಪಳ ನಗರ ಹಾಗೂ ಭಾಗ್ಯನಗರದಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ ೫೪ ಕೋಟಿ ಅನುಧಾನ, ನಗರೋತ್ಪಾನ ಯೋಜನೆಯಡಿ ೩೦ ಕೋಟಿ ಅನುಧಾನ, ನಗರದ ಮುಖ್ಯ ರಸ್ತೆ ಎನ್ ಹೆಚ್ -೬೩ ನಿರ್ಮಾಣ ಕಾಮಗಾರಿ, ಕೋಟೆ, ಹುಲಿಕೇರಿ, ಅಭಿವೃದ್ದಿಯಂತಹ ಮಹತ್ವರವಾದ ಯೋಜನೆಗಳನ್ನು ನೋಡಿ ಬಿಜೆಪಿಯನ್ನು ಬೆಂಬಲಿಸಿ ಎಂದು ಹೇಳಿದರು. 
ನಗರ ಸಭೆ ಮಾಜಿ ಅಧ್ಯಕ್ಷರಾದ ಗವಿಸಿದ್ದಪ್ಪ ಕಂದಾರಿ ಮಾತನಾಡಿ ಕೊಪ್ಪಳ ನಗರದ ಪರಿಶಿಷ್ಠಜಾತಿ/ ಪರಿಶಿಷ್ಠ ಪಂಗಡದ ಜನರಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭವನ, ಡಾ.ಜಗಜೀವನರಾವ್ ಭವನ ಮತ್ತು ಮಹರ್ಷಿ ವಾಲ್ಮೀಕಿ ಭವನಗಳ ತಲಾ ೧ ಕೋಟಿ ಅನುಧಾನ ಕಾಮಗಾರಿಗಳು ಇನ್ನೂ ಕುಂಟುತ್ತಲೆ ಸಾಗಿವೆ ಯುವಕರಿಗೆ ಜಿಲ್ಲಾ ಕ್ರಿಡಾಂಗಣ ಮಂಜೂರು ಮಾಡಿಸಿರುವುದು ಕರಡಿ ಸಂಗಣ್ಣನವರ ಅಭಿವೃದ್ದಿಪರ ಇರುವ ಕಾಳಜಿ ತೋರಿಸುತ್ತದೆ ಎಂದು ಹೇಳಿದರು.  
ನಗರಸಭೆಯ ಸದಸ್ಯರಾದ ಅಪ್ಪಣ್ಣ ಪದಕಿ ಮಾತನಾಡಿ ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಬಂದು ೧೦ ತಿಂಗಳು ಕಳೆದರು ಇಲ್ಲಿಯವರೆಗೂ ಯಾವುದೆ ಅನುಧಾನ ಬಿಡುಗಡೆಯಾಗಿಲ್ಲ. ಬಿಜೆಪಿ ಸರಕಾರದಲ್ಲಿ ತಂದತಹ ಯೋಜನೆಗಳಿಗೆ ಭೂಮಿ ಪೂಜೆ ಮಾಡುತ್ತಿದ್ದಾರೆ ಎಂದು ಲೆವಡಿ ಮಾಡಿದರು. 
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರಾದ ಚಂದ್ರು ಕವಲೂರು, ಮುಖಂಡರಾದ ಸದಾಶಿವಯ್ಯ ಹಿರೇಮಠ, ಸಿದ್ದಣ್ಣ ವಾರದ್, ಈಶಪ್ಪ ಹುದ್ದಳ್ಳಿ, ರವೀಂದ್ರ ವಕೀಲರು, ಬಾಬಾ ಅರಗಂಜಿ, ದೌಲತ್ ಸಿಕ್ಕಲಗಾರ, ಪುಟ್ಟರಾಜ ಬೆವಿನಹಳ್ಳಿ, ಪ್ರಬುರಾಜ ಕಿಡದಾಳ, ನಗರಸಭೆ ಸದಸ್ಯರಾದ ಶಿವು ಜಂಗ್ಲಿ, ಮಲ್ಲಣ್ಣ, ನಿರ್ಮಲಾ ಕಾರಟಗಿ, ಬಸವರಾಜ ಮಿಠಾಯಿ, ಇನ್ನೂ ಅನೇಕ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಭಾಗವಹಿಸಿದ್ದರು.   

29 Mar 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top