PLEASE LOGIN TO KANNADANET.COM FOR REGULAR NEWS-UPDATES

              
ಕೊಪ್ಪಳ :  ಶ್ರೀಮಂತಿಕೆ, ಹಣ ಹಾಗೂ ಅಧಿಕಾರದ ವ್ಯಾಮೋಹದಲ್ಲಿ ಬಳಲಿದ ಎಷ್ಟೋ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನೀಯರ್, ರಾಜಕಾರಣಿಯರನ್ನಾಗಿ ಮಾಡಬೇಕೆನ್ನುವ  ಹೆಬ್ಬಯಕೆಯಿಂದಾಗಿ ವಿದೇಶಕ್ಕೆ ಕಳುಹಿಸುತ್ತಿದ್ದಾರೆ.   ಇದರಿಂದಾಗಿ ಅವರ ಬದುಕಿಗೆ ಆಸರೆ ಇಲ್ಲದೇ ವ

ಯೋವೃದ್ಧರು ಅನಾಥರಾಗಿದ್ದಾರೆ.  ಇದೆಂತಹ  ಜೀವನ ?  ಈ ತರಹದ ಜೀವನದಲ್ಲಿ  ಸುಖ-ಶಾಂತಿ ಇದೇನಾ ? ಸಂತೃಪ್ತಿ ಇದೇನಾ? ನೆಮ್ಮದಿ ಇದೇನಾ?  ಈ ಕುರಿತು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ಏಕೆಂದರೆ ಬದುಕಿನಲ್ಲಿ ಹಣವೇ ಮುಖ್ಯ  ಅಲ್ಲ.  ವೈಭವ ಹಾಗೂ ವೈಭೋಗದ  ಆ ಬದುಕು ನಿಜವಾದ ಬದುಕಲ್ಲ. ಆ ಬದುಕು ಕತ್ತಲಿನ ಬದುಕಾಗಿದೆಯೆಂದು ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಮುಖಂಡರು ಆದ ವೈ.ಎನ್.ಗೌಡರ ನುಡಿದರು.
                    ಅವರು ಶ್ರೀಗವಿಮಠದಲ್ಲಿ ೫೪ ನೇಯ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ಮಾತನಾಡಿ ನಮ್ಮ ಆತ್ಮದಲ್ಲಿ  ಅಜ್ಞಾನದ ಅಂಧಕಾರ ಹೋಗಲಾಡಿಸಲಾರದೇ ಆತ್ಮಕ್ಕೆ ಪರಮಾತ್ನನ ದಿವ್ಯದರ್ಶನ ಆಗಲಿಕ್ಕೆ ಸಾಧ್ಯವಿಲ್ಲ. ಯಾವಾಗ ಆತ್ಮ ಬೆಳಕಿನಡೆಗೆ ಸಾಗುತ್ತದೆಯೋ ಆವಾಗ ಪರಮಾತ್ನನ ದಿವ್ಯದರ್ಶನವಾಗುತ್ತದೆ. ಆ ದಿವ್ಯದರ್ಶನ ಆಗುವದು ಕೂಡಾ ಆತ್ಮ ಸಾಕ್ಷಾತ್ಕಾರ ಆದಾಗ ಮಾತ್ರ ಪರಮಾತ್ನನ ದಿವ್ಯದರ್ಶನ ಸಾಧ್ಯವಾಗುತ್ತದೆ.  ಅದರ ಜೊತೆಗೆ ಅಂತರಂಗ ಬಹಿರಂಗಗಳೆರಡು ಶುದ್ಧಿಯಾಗುತ್ತವೆ. ಎಲ್ಲಿಯವರೆಗೆ ಅಂತರಂಗ ಬಹಿರಂಗ ಶುದ್ಧಿಯಾಗುವದಿಲ್ಲವೋ ಅಲ್ಲಿಯವರೆಗೆ ಆತ್ಮ ಸಾಕ್ಷಾತ್ಕಾರ ಸಾಧ್ಯವಿಲ್ಲ, ಮೈಮನ ಪುನೀತವಾಗುವದಿಲ್ಲ, ಈ ದೇಹ ಬಸವಣ್ಣನ ಕಲ್ಪನೆಯಂತೆ ದೇಗುಲ ಆಗಲು ಸಾಧ್ಯವಿಲ್ಲವೆಂದರು. ಇದೇ ವೇದಿಕೆಯಲ್ಲಿ  ಕುಕನೂರನ ಪತ್ರಕರ್ತ ಅಲ್ಲಾವುದ್ಧೀನ ಯಮ್ಮಿ ವಿರಚಿತ ಗವಿಶ್ರೀ ಪ್ರವಚನಸಾರ ಗ್ರಂಥ ಬಿಡುಗಡೆಯಾಯಿತು.  ಗವಿಶ್ರೀ ಪ್ರವಚನಸಾರ ಗ್ರಂಥ ಕುರಿತು ಅಲ್ಲಾವುದ್ಧೀನ ಯಮ್ಮಿ ಮಾತನಾಡಿ ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿಗಳು ಕುಕನೂರಿನಲ್ಲಿ ಐದು ದಿನಗಳವರೆಗೆ ನಡೆಸಿದ ಪ್ರವಚನ ಉತ್ತಮವಾಗಿತ್ತು. ಲಕ್ಷ ಭಕ್ತರ ಮನ ಮುಟ್ಟಿದೆ. ಲಕ್ಷ ಭಕ್ತರು ಶ್ರೀಗಳ  ಪ್ರವಚನ ಆಲಿಸಿ ಆಸ್ವಾದಿಸಿ ಆತ್ಮಾನಂದ ಪಟ್ಟಿದ್ದಾರೆ. ಈ ಪ್ರವಚನ ಸಾರವನ್ನು ಪೂಜ್ಯರಿಗೆ ತೋರಿಸಿ ಆಶಿರ್ವಾದ ಪಡೆದು ಐದು ಕಂತುಗಳಲ್ಲಿ ಬರೆದೆನು. ಈ ಗ್ರಂಥಕ್ಕೆ ಯಲಬುರ್ಗಾ ಮಾಜಿ ಶಾಸಕರಾದ ಈಶಣ್ಣ ಗುಳಗಣ್ಣನವರ್ ಅವರ ಪುತ್ರರಾದ ನವೀನ್ ಗುಳಗಣ್ಣನವರ್ ಆಸಕ್ತಿ ವಹಿಸಿ ಗವಿಶ್ರೀ ಪ್ರವಚನ ಮಾಲಿಕೆಯ ಗ್ರಂಥ ದಾಸೋಹಿಗಳಾಗಿದ್ದಾರೆ. ಅವರಿಗೂ ನಾನು ಋಣಿಯಾಗಿರುವೆ. ನಾನು ಕೇವಲ ನೆಪ ಮಾತ್ರ ಶ್ರೀಗಳೇ ಇದಕೆಲ್ಲ ಹಿರಿದಾದ ಪಾತ್ರವೆಂದರು. ಅಧ್ಯಕ್ಷತೆಯನ್ನು ಶ್ರೀಮತಿ ಗಂಗಮ್ಮ ಈಶಣ್ಣ ಗುಳಗಣ್ಣನವರ್ ವಹಿಸಿದ್ದರು. ನವೀನ ಗುಳಗಣ್ಣನವರ್ ಮಾತನಾಡಿದರು.  ಟಿ. ಸೋಮಶೇಖರ ಇಟಗಿ ಇವರಿಂದ ಸಂಗೀತ ಸೇವೆ , ಶಿವರಡ್ಡೆಪ್ಪ ಗೂಳಪ್ಪ ಕರಮುಡಿ ಇವರಿಂದ ಕಾರ್ಯಕ್ರಮದ ಭಕ್ತಿಸೇವೆ ಜರುಗಿತು. ನಿರೂಪಣೆ ಶರಣಬಸಪ್ಪ ಬಿಳಿಯಲಿ ನೆರವೇರಿಸಿದರು. ಪೂಜ್ಯ ಶಿಶ್ರೀಗಳು ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು. 
02 Mar 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top