PLEASE LOGIN TO KANNADANET.COM FOR REGULAR NEWS-UPDATES

ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ಕಲಂ ಅನ್ವಯ ನಿಗದಿಗೊಳಿಸಲಾದ  ಮೀಸಲಾತಿ ಉಲ್ಲಂಘಿಸಿ ನಡೆಸುತ್ತಿರುವ ನೇಮಕಾತಿಗಳನ್ನು ನಿಲ್ಲಿಸಬೇಕು ಮತ್ತು ಹೀಗಾಗಲೆ ಆಗಿರುವ ನೇಮಕಾತಿಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಯುವ ಘಟಕ, ಕೊಪ್ಪಳ ವತಿಯಿಂದ ಡಾ.ರಜಾಕ್ ಉಸ್ತಾದ್ ನೇತೃತ್ವದಲ್ಲಿ ಅಶೋಕ ಸರ್ಕಲ್ ಸಮೀಪದ ಸಾಹಿತ್ಯ ಭವನದ ಹತ್ತಿರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 
            ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಜಾಕ್ ಉಸ್ತಾದ್-  ನಮ್ಮವರೇ ಅಧ್ಯಕ್ಷರಾಗಿರುವ ಸಂಸ್ಥೆಗಳು ಸೇರಿದಂತೆ ಇತರ 12 ಇಲಾಖೆಗಳಲ್ಲಿ ಸಾವಿರಾರು ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆ ಮತ್ತು ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಗಳಲ್ಲಿ  ನಮ್ಮ ಹೈದ್ರಾಬಾದ್ ಕರ್ನಾಟಕಕ್ಕೆ  371ಜೆ ಕಲಂ ಅನ್ವಯ  ದೊರೆಯಬೇಕಾದ ಯಾವುದೇ ಹುದ್ದೆಗಳನ್ನು ಮೀಸಲಾಗಿಟ್ಟಿಲ್ಲ. ಮತ್ತು ನೀಡಿಲ್ಲ. ನಮ್ಮ ಜನಪ್ರತಿನಿಧಿಗಳು ಸಹ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ.  
              ಸಿಎಂ ಸಿದ್ದರಾಮಯ್ಯನವರು ಹೈದ್ರಾಬಾದ್ ಕರ್ನಾಟಕಕ್ಕೆ  ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ. ನೇಮಕಾತಿಗಳನ್ನು ರದ್ದುಗೊಳಿಸಬೇಕು. 371ಜೆ ಅನ್ವಯ  ನಮ್ಮ ಪಾಲನ್ನು ನೀಡಬೇಕೆಂದು ಆಗ್ರಹಿಸಿದರು. 
        ನಂತರ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳರೊಂದಿಗೆ  ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಆಗಿರುವ ಅನ್ಯಾಯ ವನ್ನು ಸರಿಪಡಿಸಲಾಗುವುದು. ಮತ್ತು ದಿ. 3-3-2014ರಂದು ಮುಖ್ಯಮಂತ್ರಿಗಳನ್ನು ಹೋರಾಟಗರಾರರೊಂದಿಗೆ ಜೊತೆಯಲ್ಲಿಯೇ  ಭೇಟಿಯಾಗಿ ಸೂಕ್ತ ಕೈಗೊಳ್ಳಲು ಒತ್ತಾಯಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.                               
             ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಠ್ಠಪ್ಪ ಗೋರಂಟ್ಲಿ ಸೇರಿದಂತೆ ಇತರರು ಮಾತನಾಡಿದರು. ಹೋರಾಟದಲ್ಲಿ ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರ,ರಾಜಾಬಕ್ಷಿ ಎಚ್.ವಿ,.ರಮೇಶ ತುಪ್ಪದ, ಮಂಜುನಾಥ ಅಂಗಡಿ  ಜಗದೀಶಗೌಡ,ಶಿವಾನಂದ ಹೊದ್ಲೂರ,ಕಲಿಮುದ್ದೀನ್,




ಜಿಎಸ್.ಗೋನಾಳ,ರಾಜಶೇಖರ ಅಂಗಡಿ  ಸಂದ್ಯಾ ಮಾದಿನೂರ, ಸರೋಜಾ ಬಾಕಳೆ ಸೇರಿದಂತೆ ಹಲವಾರು ಸಂಘಟನೆಯವರು  ಉಪಸ್ಥಿತರಿದ್ದರು.

28 Feb 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top