ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಮಿತವ್ಯಯಕರ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಲಬುರ್ಗಿ, ಬೀದರ, ಯಾದಗಿರಿ, ಬಳ್ಳಾರಿ, ಹೊಸಪೇಟೆ ಮತ್ತು ವಿಜಾಪುರ ನಗರ ಸಾರಿಗೆಗಳಲ್ಲಿ ಪ್ರಯಾಣಿಸಲು ನಗರ ಸಾರಿಗೆ ಒಂದು ದಿನದ ಬಸ್ ಪಾಸ್‌ನ್ನು ಜಾರಿಗೊಳಿಸಿದೆ.
ಸಂಸ್ಥೆಯ ವ್ಯಾಪ್ತಿಯಲ್ಲಿನ ಗುಲಬರ್ಗಾ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹೊಸಪೇಟೆ ಮತ್ತು ವಿಜಾಪುರ ವಿಭಾಗಗಳ ವಿವಿಧ ಮಾರ್ಗಗಳಲ್ಲಿ ಗ್ರಾಮಾಂತರ ದೈನಿಕ ಪಾಸುಗಳನ್ನು ಸಹ ಜಾರಿಗೊಳಿಸಲಾಗಿದೆ. ಗ್ರಾಮಾಂತರ ದೈನಿಕ ಬಸ್ ಪಾಸ್‌ಗಳನ್ನು ನಿರ್ವಾಹಕರ ಮೂಲಕ ಪಡೆಯಬಹುದಾಗಿದೆ. ಪಾಸ್‌ನ್ನು ಪಡೆದ ಪ್ರಯಾಣಿಕರು ಆ ದಿನದ ಮಧ್ಯರಾತ್ರಿಯವರೆಗೂ ನಗರ ಸಾರಿಗೆ ವಾಹನಗಳಲ್ಲಿಯೂ ಸಹ ಪ್ರಯಾಣಿಸಬಹುದಾಗಿದೆ.
ಕಲಬುರ್ಗಿ, ಬೀದರ, ಬಳ್ಳಾರಿ ನಗರ ಸಾರಿಗೆ ದೈನಿಕ ಬಸ್ ಪಾಸ್ ದರ ೨೦ ರೂ., ವಿಜಾಪುರ ನಗರ ಸಾರಿಗೆ ದೈನಿಕ ಬಸ್ ಪಾಸ್ ದರ ೨೫ ರೂ., ಹೊಸಪೇಟೆ, ಯಾದಗಿರಿ, ಕೊಪ್ಪಳ, ಸೇಡಂ ನಗರ ಸಾರಿಗೆಯ ದೈನಿಕ ಬಸ್ ಪಾಸ್ ದರ ೧೫ ರೂ.ಗಳನ್ನು ನಿಗದಿಗೊಳಿಸಲಾಗಿದೆ. ಒಂದು ದಿನದ ಪಾಸ್‌ಗಳನ್ನು ಸಾರ್ವಜನಿಕರು ಪಡೆಯಲು ಅನುಕೂಲವಾಗುವಂತೆ ನಿರ್ವಾಹಕರ ಇಟಿಎಂ ಮುಖಾಂತರ ವಿತರಿಸಲಾಗುವುದು. ಸಾರ್ವಜನಿಕರು ಈ ಸೌಲಭ್ಯದ ಲಾಭ ಪಡೆಯಬೇಕೆಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.