ಕೊಪ್ಪಳ ನಗರಸಭೆಯಿಂದ ೨೦೧೦-೧೧ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ೩೦೦ ಫಲಾನುಭವಿಗಳ ಗುರಿಯನ್ನು ನಿಗದಿಪಡಿಸಿ, ಈಗಾಗಲೆ ಫಲಾನುಭವಿಗಳ ಆಯ್ಕೆಯಾಗಿದ್ದು, ಇದುವರೆಗೂ ನೂರಾರು ಫಲಾನುಭವಿಗಳು ಮನೆಗಳನ್ನು ಪ್ರಾರಂಭಿಸಿ, ಆನ್‌ಲೈನ್‌ನಲ್ಲಿ ನಮೂದಿಸದೇ ಇರುವುದು ಕಂಡು ಬಂದಿದ್ದು, ಇಂತಹವರಿಗೆ ಫೆ. ೨೮ ರವರೆಗೆ ಕಾಲಾವಕಾಶ ನೀಡಲಾಗಿದೆ.
೨೦೧೦-೧೧ ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಿ, ಒಟ್ಟು ೩೦೦ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ನಂತರ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಅನುಮೋದನೆಗೊಂಡು, ೩೦೦ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಕರಪತ್ರ ಪ್ರಕಟಿಸಲಾಗಿತ್ತು.
ಇದರಲ್ಲಿ ೩೦೦ ಜನರ ಪೈಕಿ, ೬೦ ಜನ ಮಾತ್ರ ಬ್ಯಾಂಕ್ ಸಾಲ ಹಾಗೂ ಸಹಾಯಧನದೊಂದಿಗೆ ನಿರ್ಮಿಸಿಕೊಂಡಿರುತ್ತಾರೆ. ೯೬ ಜನ ಬ್ಯಾಂಕ್ ಸಾಲವಿಲ್ಲದೇ ಸಹಾಯಧನದೊಂದಿಗೆ ಮನೆ ನಿರ್ಮಿಸಿಕೊಂಡಿರುತ್ತಾರೆ. ಇನ್ನೂ ೧೪೪ ಜನರಿಗೆ ತಿಳುವಳಿಕೆ ನೀಡಿದ್ದರೂ ಅಥವಾ ತಿಳುವಳಿಕೆ ಇದ್ಯಾಗ್ಯೂ ಇಲ್ಲಿಯವರೆಗೆ ನಗರಸಭೆಗೆ ಸಂಪರ್ಕಿಸಿರುವುದಿಲ್ಲ. ಇದನ್ನು ಪರಿಶೀಲಿಸಿದ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದವರು ಅಂತಹವರಿಗೆ ಫೆ.೨೮ ರವರೆಗೆ ಗಡುವು ನೀಡಿ, ಪ್ರಾರಂಭಿಸಲು ಹಾಗೂ ಅದನ್ನು ಆನ್‌ಲೈನ್‌ನಲ್ಲಿ ಕಾಲೋಚಿತಗೊಳಿಸಲು ಸೂಚಿಸಿರುತ್ತಾರೆ. ಅಲ್ಲದೆ ತಪ್ಪಿದಲ್ಲಿ ಅಂತಹ ಫಲಾನುಭವಿಗಳನ್ನು ಕೈಬಿಡಲಾಗುವುದು ಎಂಬ ಸೂಚನೆ ಸಹ ನೀಡಲಾಗಿದೆ. ಇದುವರೆಗೂ ನಗರಸಭೆಯನ್ನು ಸಂಪರ್ಕಿಸದೇ ಇರುವ ಫಲಾನುಭವಿಗಳ ಪಟ್ಟಿಯನ್ನು ನಗರಸಭೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಅಂತಹವರು ಕೂಡಲೇ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ, ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ತಪ್ಪಿದಲ್ಲಿ ಅಂತಹ ಫಲಾನುಭವಿಗಳ ಆಯ್ಕೆಯನ್ನು ರದ್ದುಪಡಿಸಲಾಗುವುದೆಂದು ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.