PLEASE LOGIN TO KANNADANET.COM FOR REGULAR NEWS-UPDATES

 ಗಂಗಾವತಿಯ ಎಮ್.ಎನ್.ಎಂ. ಬಾಲಕಿಯರ ಸರ್ಕಾರಿ ಬಾಲಕಿಯರ ಸ.ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಅ. ೨೬ ಕ್ಕೆ ಮುಂದೂಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ನಾಟಕ (ಹಿಂದಿ ಅಥವಾ ಇಂಗ್ಲೀಷ್), ಭರತನಾಟ್ಯ, ತಬಲ ಸೋಲೋ, ಕೊಳಲು, ಶಾಸ್ತ್ರೀಯ ಸಂಗೀತ, ವೀಣಾ, ಆಶುಭಾಷಣ, ಕುಚುಪುಡಿ ನೃತ್ಯ, ಗಿಟಾರ್ ಸೋಲೋ, ಹಾರ್ಮೋನಿಯಂ ಸೇರಿದಂತೆ ಒಟ್ಟು ಹದಿನಾರು ಸ್ಪರ್ಧೆಗಳನ್ನು ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಸಂಘಟಿಸಲಾಗುವುದು. ಈ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕಿನ ಯುವಕ-ಯುವತಿಯರ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ವಯೋಮಿತಿಯ ಧೃಢೀಕರಣ ಪತ್ರದೊಂದಿಗೆ ನೋಂದಣಿಯಾಗಿರಬೇಕು. ಅ.೨೬ ರೊಳಗಾಗಿ ಗಂಗಾವತಿಯ ಎಮ್.ಎನ್.ಎಮ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯ ಸಂಘಟಕರಲ್ಲಿ ತಮ್ಮ ಹೆಸರು ನೋಂದಾಯಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಾದ ಗಂಗಾವತಿ ತಿಪ್ಪಯ್ಯ ಸ್ವಾಮಿ ಹಿರೇಮಠ ಮೊ.೯೦೦೮೩೬೩೬೭೦, ಕೊಪ್ಪಳ ಎನ್.ಎಸ್.ಪಾಟೀಲ್ ಮೊ.೯೯೮೦೮೫೨೭೩೫, ಯಲಬುರ್ಗಾ ಹನುಮಂತಪ್ಪ ಮೊ.೮೯೭೦೨೮೮೮೫೭, ಕುಷ್ಟಗಿ ಮಲ್ಲಿಕಾರ್ಜುನ ಮೊ.೯೬೬೩೦೫೮೬೬೦ ಹಾಗೂ ಸಂಘಟಕರಾದ ಸಿಮಹಾಲಕ್ಷ್ಮಿ ಮೊ.೯೯೮೬೫೮೩೮೪೫, ಜಾಕೀರ ಹುಸೇನ್ ಮೊ.೯೪೮೧೨೯೨೬೧೬, ವ್ಯವಸ್ಥಾಪಕ ರಾಮಕೃಷ್ಣ ಮೊ.೯೯೭೨೮೦೧೫೦೫, ಕೆ.ಎಂ.ಪಾಟೀಲ್ ಮೊ.೯೯೪೫೫೫೫೩೨೦ ಹಾಗೂ ಇಲಾಖೆಯ ದೂರವಾಣಿ ಸಂಖ್ಯೆ: ೦೮೫೩೯-೨೦೧೪೦೦ ಸಂಪರ್ಕಿಸಬಹುದಾಗಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. 

23 Oct 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top