PLEASE LOGIN TO KANNADANET.COM FOR REGULAR NEWS-UPDATES

  ಕೊಪ್ಪಳ ಜಿಲ್ಲಾ ಪಂಚಾಯತಿಯ ಹಿಟ್ನಾಳ್ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಮೇಶ್ ಹಿಟ್ನಾಳ್ ೬೫೮೨ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  ಜಿ.ಪಂ. ಸದಸ್ಯರಾಗಿದ್ದ ಕೆ. ರಾಘವೇಂದ್ರ ಹಿಟ್ನಾಳ್ (ಕೊಪ್ಪಳ ಹಾಲಿ ಶಾಸಕರು) ಅವರ ರಾಜೀನಾಮೆಯಿಂದ ತೆರವಾಗಿದ್ದ ಹಿಟ್ನಾಳ್ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ಕಳೆದ ಸೆ. ೨೯ ರಂದು ಮತದಾನ ನಡೆದಿತ್ತು.  ಬಿಜೆಪಿ ಅಭ್ಯರ್ಥಿಯಾಗಿ ನಿಂಗನಗೌಢ ಭೀಮನಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ರಮೇಶ್ ಹಿಟ್ನಾಳ್ ಅವರು ಚುನಾವಣಾ ಕಣದಲ್ಲಿದ್ದರು.  ಕೊಪ್ಪಳ ತಹಸಿಲ್ದಾರರ ಕಚೇರಿಯಲ್ಲಿ ಮಂಗಳವಾರ ನಡೆದ ಒಟ್ಟು ೧೦ ಸುತ್ತಿನ ಮತ ಎಣಿಕೆಯಲ್ಲಿ, ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್‌ನ ಕೆ. ರಮೇಶ್ ಹಿಟ್ನಾಳ್ ಅವರು ಅಂತಿಮವಾಗಿ ೧೧೫೮೭ ಮತಗಳನ್ನು ಗಳಿಸಿದರೆ, ಬಿಜೆಪಿ ಅಭ್ಯರ್ಥಿ ನಿಂಗನಗೌಢ ಭೀಮನಗೌಡ ಅವರು ಒಟ್ಟು ೫೦೦೫ ಮತಗಳನ್ನು ಪಡೆದುಕೊಂಡರು.  ಒಟ್ಟು ೧೬೫೮೨ ಮತಗಳು ಚಲಾವಣೆಗೊಂಡಿದ್ದವು.   ಕಾಂಗ್ರೆಸ್ ಅಭ್ಯರ್ಥಿ ಕೆ. ರಮೇಶ್ ಹಿಟ್ನಾಳ್ ಅವರು  ಬಿಜೆಪಿ ಅಭ್ಯರ್ಥಿಗಿಂತ ೬೫೮೨ ಹೆಚ್ಚು ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಮಂಜುನಾಥ್ ಅವರು ಘೋಷಿಸಿದರು.  ಕೊಪ್ಪಳ ತಹಸಿಲ್ದಾರ್ ಚಂದ್ರಕಾಂತ್ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ತಾ.ಪಂ. ಚಿಕ್ಕಡಂಕನಕಲ್ ಕ್ಷೇತ್ರ : ಕಾಂಗ್ರೆಸ್‌ನ ಶಾರದಾ ಹನುಮಗೌಡ ಆಯ್ಕೆ
  ಗಂಗಾವತಿ ತಾಲೂಕು ಪಂಚಾಯತಿಯ ಚಿಕ್ಕಡಂಕನಕಲ್ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಶಾರದಾ ಹನುಮಗೌಡ ಅವರು ಬಿಜೆಪಿಯ ಯಂಕಮ್ಮ ಷಣ್ಮುಕಪ್ಪ ಅವರಿಗಿಂತ ೧೦೧೬ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
  ಗಂಗಾವತಿ ತಹಸಿಲ್ದಾರರ ಕಚೇರಿಯಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಶಾರದ ಹನುಮಗೌಡ ಅವರು ೨೬೫೨, ಬಿಜೆಪಿಯ ಯಂಕಮ್ಮ ಷಣ್ಮುಕಪ್ಪ- ೧೬೫೬ ಮತ್ತು ಸಿಪಿಐ(ಎಂ) ಅಭ್ಯರ್ಥಿ ಲಲಿತಾ ಬಾಳಪ್ಪ ಅವರು ೧೩೨ ಮತಗಳನ್ನು ಪಡೆದುಕೊಂಡರು.  ಒಟ್ಟು ೪೪೧೦ ಮತಗಳು ಚಲಾವಣೆಗೊಂಡಿದ್ದವು.   ನವಲಿಯ ಸರ್ಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ಶ್ರೀನಿವಾಸ ಗೌಡ ಅವರು ಚುನಾವಣಾದಿಕಾರಿಯಾಗಿ ಹಾಗೂ ಚಿಕ್ಕಡಂಕನಕಲ್ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಗುರುನಾಥ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು
01 Oct 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top