ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಮೂಲಭೂತ ಬೇಡಿಕೆಗಳಾದ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಸೇವೆ ಖಾಯಂ ಗೊಳಿಸುವುದು, ನೇರೆ ರಾಜ್ಯದಲ್ಲಿ ನೀಡುವ ವೇತನದಂತೆ ರಾಜ್ಯದಲ್ಲಿ ರೂ.೨೫,೦೦೦.೦೦ ಮಾಸಿಕ ವೇತನ ನೀಡುವುದು ವಯೋಮಿತಿ ಮೀರುವುವವರಿಗೆ ನೇಮಕಾತಿಯಲ್ಲಿ ಆಧ್ಯತೆ ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಬಿಡುಗಡೆ ಮಾಡುವುದು ಮೊದಲಾದ ವಿಷಯಗಳನ್ನು ಕುರಿತು ಚರ್ಚಿಸಲು ಸೆಪ್ಟಂಬರ್ ೧ರಂದು ಡಿ.ವೈ.ಎಫ್.ಆಯ್. ಸಂಘಟನೆಯು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಆಯೋಜಿಸಿದೆ. ಸಮಾವೇಶದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು. ಕಾರಣ ಎಲ್ಲಾ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಕಡ್ಡಾಯವಾಗಿ ಭಾಗವಹಿಸಲು ಜಿಲ್ಲಾ ಅತಿಥಿ/ಅರೆಕಾಲಿಕ ಸಂಘ (ರಿ) ಹಾಗೂ ರಾಜ್ಯ ಸಂಚಾಲಕರಾದ ವೀರಣ್ಣ ಸಜ್ಜನರ ಇವರು ತಿಳಿಸಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸುವ ಅತಿಥಿ ಉಪನ್ಯಾಸಕರು ಅಗಸ್ಟ್ ೩೧ರಂದು ಕೊಪ್ಪಳ ರೈಲು ನಿಲ್ದಾಣದಿಂದ ಸಂಜೆ ಹೊರಡುವ ಹಂಪಿ ಎಕ್ಸಪ್ರೆಸ್ ರೈಲು ಮೂಲಕ ಹೋಗಬೇಕಾಗುವದು. ಕಾರಣ ಅಂದು ಸಂಜೆ ೭.೦೦ ಗಂಟೆಗೆ ಕೊಪ್ಪಳ ರೈಲು ನಿಲ್ದಾಣದಲ್ಲಿ ಹಾಜರಾಗಿ ಉಚಿತ ಜಾಥಾ ಪಾಸ್ ಪಡೆಯಲು ಕೊರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರವಿ ಹಿರೇಮಠ ಮೊ. ನಂ:೯೭೪೦೦೩೫೫೬೨ ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಸಮಾವೇಶ ಸೇರುವ ಸ್ಥಳ : ಸೆನ್‌ಟ್ ಹಾಲ್, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು.
0 comments:
Post a Comment
Click to see the code!
To insert emoticon you must added at least one space before the code.