PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ ಅಗಷ್ಟ ೨೮, ತಾಲೂಕಿನ ಕುನಕನೂರ ಗ್ರಾಮವು ಸುಮಾರು ಇಪ್ಪೈದರಿಂದ ಮೂವತ್ತು ಸಾವಿರ ಜನ ಸಂಖ್ಯೆಯನ್ನು ಹೊಂದಿದ್ದು ನಗರಗಳಂತೆ ೧೩ ವಾರ್ಡುಗಳನ್ನೋಳಗೊಂಡ ೪೦ ಜನ ಗ್ರಾಮ ಪಂಚಾಯತ ಸದಸ್ಯರನ್ನು ಹೊಂದಿದೆ. ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ಗ್ರಾಮ ಪಂಚಾಯತ ಎಂದು ಗುರುತಿಸಿಕೊಂಡಿದೆ. ಹಾಗೂ ಬಸ್. ಖಪೋ, ನ್ಯಾಷನಲ್ ಹೈವೆ, (೬೯ ಎನ್.ಹೆಚ್) ಹೊಂದಿರುತ್ತದೆ. ಜವಾಹರ ನಮೋದಯ, ಮುರಾರ್ಜಿ ದೇಸಾಯಿ, ವಸತಿ ಶಾಲೆ ವಿದ್ಯಾಲಯ  ಪದವಿ ಪೂರ್ವ ಕಾಲೇಜುಗಳು, ಐಟಿಐ, ಕಂಪ್ಯೂಟರ, ಡಿಪ್ಲೋಮಾ, ಇಂಜನಿಯರಿಂಗ್, ವಿವಿಧ ವೃತ್ತಿ ಕಾಲೇಜುಗಳು, ಸರಕಾರಿ & ಖಾಸಗಿ ಪ್ರಾಥಮಿಕ ಪ್ರೌಢ, ಪದವಿ ಕಾಲೇಜು ಒಟ್ಟು ೨೬ ವಿದ್ಯಾ ಆರೋಗ್ಯ ಇಲಾಖೆಯ ವಸತಿ ಗೃಹಗಳಿವೆ. ದೂರವಾಣಿ ಕೇಂದ್ರ ತಾಲೂಕ ಖಾದಿಕೇಂದ್ರ ನಿಗಮ, ಅಗ್ನಿ ಶಾಮಕ ದಳದ ಕಾರ್ಯಾಲಯ ಅಂಗನವಾಡಿ ಕಾರ್ಯಕರ್ತೆಯವರ ತರಬೇತಿ ಕೇಂದ್ರ, ಸಹಕಾರ ಪತ್ತಿನ ಬ್ಯಂಕ, ಸಿಂಡಿಕೇಟ್ ಬ್ಯಾಂಕ್, ಎಸ್.ಬಿ.ಹೆಚ್, ಪಿಜಿಬಿ ಬ್ಯಾಂಕುಗಳನ್ನು ಹೊಂದಿದೆ. ಗ್ರಾನೈಟ್ ಕಂಪನಿಗಳನ್ನು ಹೊಂದಿದೆ. ಪೊಲೀಸ್ ಸ್ಟೇಷನ್ ಹಾಗೂ ಪೊಲೀಸ್ ವಸತಿ ಗೃಹ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ವ್ಯಾಪಾರ  ಕೇಂದ್ರ ಸ್ಥಳವಾಗಿದೆ. ಈಗಾಗಿ ರಸ್ತೆ ವಿಧ್ಯುತ್ ಮತ್ತು ಸ್ವಚ್ಚತೆ ನಿರ್ವಹಣೆಯನ್ನು ಪಂಚಾಯತಿಯಿಂದ ನಿರ್ವಹಣೆ ಮಾಡುವುದು ಅಸಾಧ್ಯವಾದ ಮಾತು. ಕಾರಣ ದಯಾಪರರಾದ ತಾವು ನಮ್ಮ ಗ್ರಾಮ ಪಂಚಾಯತಿಯನ್ನು ಪುರಸಭೆಯೆಂದು ಘೋಷಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.  
ಈ ಸಂದರ್ಭದಲ್ಲಿ ಗ್ರಾ, ಪಂ ಅಧ್ಯಕ್ಷರಾದ ನಾಗರತ್ನ ಕಲ್ಮನಿ, ಉಪಾಧ್ಯಕ್ಷರಾದ ಶಾರದಾ ದಿವಟರ, ದಸ್ಯರುಗಳಾದ ರಾಮಣ್ಣ ಕಡೆಮನಿ, ರಾಮಣ್ಣ ಕಲಾಲ್, ಗೋವಿಂದರಾವ್ ಕುಲಕರ್ಣಿ, ರಮೇಶ ಶಾಸ್ತ್ರೀ, ನೀಲಕಂಟಪ್ಪ ಬಣ್ಣದಬಾವಿ, ರುದ್ರಾಕ್ಷಿ ಜಂಬಣ್ಣ, ರಾಮನ್ಣ ಯಡ್ಡೋಣಿ, ವೆಂಕಟೇಶ ಭೋವಿ, ದುರಗಪ್ಪ ಬಜೆಂತ್ರಿ, ನಿಂಗಪ್ಪ ಗೊರ್ಲೆಕೊಪ್ಪ, ದೇವಪ್ಪ ರಾಟಿಮನಿ, ಕಾರ್ಯದರ್ಶಿ ಜಮಲಸಾಭ್. ಮತ್ತು ಹಿರಿಯರಾದ ಸತ್ಯನಾರಾಯಣಪ್ಪ ಹರಪನಳ್ಳಿ, ಕಾಶಿಮಸಾಬ್ ತಳಕಲ್, ಶಿವು ನಾಗಲಾಪೂರ, ಶೇಖರಪ್ಪ ವಾರದ, ಬಸವರಾಜ ಬೆದವಟ್ಟಿ, ಸಿದ್ದಯ್ಯ ಕಳ್ಳಿಮಠ, ಕರಬಸಯ್ಯ ಬಿನ್ನಾಳ, ದ್ಯಾಮಣ್ಣ ಜಮಖಂಡಿ ಮುಂತಾದವರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top