PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಡಿಪ್ಲೋಮಾ ವಿದ್ಯಾರ್ಥಿಗಳು ಪ್ರತಿ ವರ್ಷ ಪರೀಕ್ಷೆ ಫಲಿತಾಂಶ ಬಂದ ತಕ್ಷಣವೇ ಸುಮಾರು ವರ್ಷಗಳಿಂದ ಕ್ಯಾರಿ ಓವರ್ ಸಿಸ್ಟಮ್ ೪,೬,೮,೧೦, ವಿಷಯಗಳಿಗೆ ರಿಯಾಯಿತಿ ಕೊಡುತ್ತಿದ್ದು ಈ ಶೈಕ್ಷಣಿಕ ವರ್ಷಗಳಿಂದ ೩ ಸೆಮಿಸ್ಟರ್ ಮತ್ತು ೫ ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪ್ರವೇಶಕ್ಕೆ ಕೇವಲ ೪ ವಿಷಯಗಳಲ್ಲಿ ಅನುತ್ತೀರ್ಣ ಆದವರಿಗೆ ಮಾತ್ರ ಅವಕಾಶ ನೀಡಿದ್ದು ನಾಲ್ಕು ವಿಷಯಕ್ಕಿಂತ ಹೆಚ್ಚಿನ ವಿಷಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅವಕಾಶ ಇಲ್ಲದಿರುವುದಕ್ಕೆ ೨ ವರ್ಷ ಡಿಪ್ಲೋಮ ಕೋರ್ಸ ಮುಗಿಸಿ ಕಾಲೇಜು ಬಿಟ್ಟು ಹೊರಗಡೆ ಕೆಲಸಕ್ಕೆ ಹೋಗುವ ಪರಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ೩ ವರ್ಷಗಳಲ್ಲಿ ಒಟ್ಟು ೩೯ ವಿಷಯಗಳನ್ನು ಕಲಿಯಬೇಕಾಗಿರುವುದರಿಂದ ಆ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ, ೩ ವರ್ಷದಲ್ಲಿ ೩೯ ವಿಷಯಗಳನ್ನು ಓದಿ ಪರೀಕ್ಷೆ ಬರೆಯಲು ಸಾಮರ್ಥ್ಯ ವಿರುವುದಿಲ್ಲ ಅಲ್ಲದೇ ಬಹುತೇಕ ಸರಕಾರಿ/ ಖಾಸಗಿ ಡಿಪ್ಲೋಮಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಬ್ರಾಂಚ್ ತಕ್ಕಂತೆ ಮೂಲಭೂತ ಸೌಲಭ್ಯಗಳಿಲ್ಲ. ಅರ್ಹತೆಯುಳ್ಳ ಉಪನ್ಯಾಸಕರು ಇಲ್ಲ. ಇತ್ಯಾದಿ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೊಂದರೆಯನ್ನು ಅನುಭವಿಸುತ್ತಿದ್ದು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ  ಪದವಿ ವಿದ್ಯಾರ್ಥಿಗಳಿಗೆ ಜಾರಿಗೆ ಇರುವ ಸಮಿಸ್ಟರ್ ನಿಯಮದಂತೆ ಡಿಪ್ಲೋಮ ವಿದ್ಯಾರ್ಥಿಗಳಿಗೂ ಜಾರಿಗೆ ಮಾಡಬೇಕೆಂದು ಒತ್ತಾಯಿಸಿ ದಿನಾಂಕ ೨೨/೦೭/೨೦೧೩ ರಂದು ಕೊಪ್ಪಳದ ಡಿ.ಸಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದು ಪ್ರತಿ ಭಟನೆಯು ನಗರದ ಸಾಹಿತ್ಯ ಭವನದಿಂದ ಪ್ರಾರಂಭವಾಗುತ್ತಿದ್ದು ಜಿಲ್ಲೆಯ ಹಾಗೂ ತಾಲೂಕಿನ ಡಿಪ್ಲೋಮಾ ವಿದ್ಯಾರ್ಥಿಗಳು ಬೆಳಿಗ್ಗೆ ೧೦:೩೦ ಕ್ಕೆ ನಗರದ ಸಾಹಿತ್ಯ ಭವನದ ಹತ್ತಿರ ಇರಬೇಕು ಎಂದು ಎಸ್.ಎಫ್.ಐ. ಜಿಲ್ಲಾ ಸಮಿತಿ ಕೋರಿದೆ

Advertisement

0 comments:

Post a Comment

 
Top