PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ದೇಶ ಸೇವೆ ಮಾಡಲು ಯುವಕರು ಮುಂಗಾಗಬೇಕೆಂದು ನಗರದ ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ಕರೆ ನೀಡಿದರು.
    ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಕಾರ್ಗೀಲ್ ವಿಜಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಯೋಧರರಿಗೆ ನಮನ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಇಂದಿನ ದಿನಮಾನಗಳಲ್ಲಿ ದೇಶ ಸೇವೆ ಮಾಡುವ ಮನೋಭಾವನೆ ಯುವಕರಲ್ಲಿ  ಕಡಿಮೆ ಯಾಗುತ್ತಿದ್ದು,ಜೊತೆಗೆ ಯೋಧರಾಗಿ ನೇಮಕವಾಗುವರ ಸಂಖ್ಯೆಯು ಕೂಡಾ ಕಡಿಮೆಯಾಗಿದೆ.ದೇಶ ಸೇವೆ ಕೇವಲ ಯೋಧರ ಕೆಲಸವಲ್ಲ ಅದು ದೇಶದ ಪ್ರತಿಯೋಬ್ಬ ಪ್ರಜೆಯ ಕಾರ್ಯವಾಗಿದೆ.ಯೋಧರ  ಕಾರ್ಯಗಳ ಕುರಿತು ಜಾಗೃತಿ ಮೂಡಿಸು ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ನಡೆಸಬೇಕು  ಎಂದು ಹೇಳಿದರು.
     ನಂತರ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಗಂಗಾದರ ಕಾತರಕಿ ಮಾತನಾಡುತ್ತ,ದೇಶ ಸೇವೆಯನ್ನು ಮಾಡಿ ವೀರ ಮರಣವನ್ನಪ್ಪಿದ ಯೋದರರನ್ನು ಸರ್ಕಾರ ಗೌರವದಿಂದ ನೊಡಬೇಕು ಜೊತೆಗೆ ಮರಣ ಹೊಂದಿರುವ ಯೋಧರ ಕುಟುಂಬಕ್ಕೆ ನೇರವು ನೀಡುವುದರೋಂದಿಗೆ ಅವರ ಸಂಪೂರ್ಣ ಜವಾಬ್ದಾರಿಯನ್ನು ನೊಡಿಕೊಳ್ಳಬೇಕು ಅಂದಾಗ ಮಾತ್ರ ಯುವರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಯೋಧರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
    
      ಕಾರ್ಯಕ್ರಮದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಶಿಕ್ಷಕರಾದಸಾವಿತ್ರಿದಾಸ್,ವಿಜಯಾ, ಭಾರತಿ,ಮೋಹಿನಪಾಷಾಬಿ,ವಿಜಯಲಕ್ಷ್ಮೀ,ಗೌಸಿಯಾ,ರಾಜೇಶ್ವರಿ,ಗಂಗಮ್ಮ,ಅಂಬಕ್ಕ, ರತ್ನಾ,ಶಂಕ್ರಮ್ಮ ಬಂಗಾರಶೆಟ್ರು ಮುಂತಾದವರು ಹಾಜರಿದ್ದರು.ವಿರುಪಾಕ್ಷಪ್ಪ ಬಾಗೋಡಿ ಕಾರ್ಯಕ್ರಮವನ್ನು ನಿರೂಪಿಸಿದರು.ನಾಗಪ್ಪ ನರಿ ಸ್ವಾಗತಿಸಿ,ಶ್ರೀನಿವಾಸ ಎಲ್ಲರಿಗೂ ವಂದಿಸಿದರು.

26 Jul 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top