PLEASE LOGIN TO KANNADANET.COM FOR REGULAR NEWS-UPDATES

      ೧೨ನೇ ಶತಮಾನದಲ್ಲಿ ಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿದ್ದ ಶರಣ ದಂಪತಿಗಳಾದ ಹಡಪದ ಅಪ್ಪಣ್ಣ ಮತ್ತು ಧರ್ಮ ಪತ್ನಿ ಲಿಂಗಮ್ಮ ನವರ ಜೀವನ ಸಾಧಕರಿಗೆ ಸ್ಪೂರ್ತಿ ಸೆಲೆ ಎಂದು ನಗರದ ಹುಡ್ಕೋ ಕಾಲೋನಿಯಲ್ಲಿ ವಿಶ್ವಗುರು ಬಸವೇಶ್ವರ ಚಾರಿಟೆಬಲ್ ಟ್ರಸ್ಟ್‌ನ ಮಾಸಿಕ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ನವರು ಎಂಬ ವಿಷಯ ಕುರಿತು ಮಾತನಾಡಿದ ಶ್ರೀಮತಿ ಲಲಿತಾ ಕಡಿ ಹೇಳಿದರು

 ಮುಂದುವರೆದು ಮಾತನಾಡಿದ ಅವರು ಶರಣರ ಪರಂಪರೆ ಇಡೀ ಜಗತ್ತಿನಲ್ಲಿಯೇ ವಿಶಿಷ್ಠವಾದದ್ದು, ಅಸಮಾನತೆ, ಜಾತಿ ವ್ಯವಸ್ಥೆ ವಿರುದ್ದ ಜನಾಂದೋಲನವಾಗಿ ಗುರು ಬಸವಣ್ಣನವರೊಂದಿಗೆ ಸಾವಿರಾಸು ಲಕ್ಷಾಂತರ ಜನ ಸಹಕಾರ ನೀಡಿದರು. ಅಂತವರಲ್ಲಿ ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ನವರು ಮಾದರಿಯಾಗಿದ್ದಾರೆ. ಬೆಡಗಿನ ವಚನಗಳು ಮತ್ತು ಲಿಂಗಾಂಗ ಯೋಗದದ ಬಗ್ಗೆ ಸಾಕಷ್ಟು ವಚನಗಳನ್ನು ರಚಿಸಿದ್ದಾರೆ. ಆವಚನಗಳನ್ನು ನಾವು ಅಭ್ಯಾಸಿಸಿ ಆಚರಣೆಗೆ ತರುವ ಕಾರ್ಯ ಆಗಬೇಕಾಗಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಸದಸ್ಯೆ ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿ ವಹಿಸಿದ್ದರು, ಶ್ರೀಮತಿ ಶೇಖಮ್ಮ ಹಡಪದ ವೇದಿಕೆಯ ಮೇಲಿದ್ದರು, ಕುಮಾರಿ ವರ್ಷಿಣಿ ಸಂಕ್ಲಾಪುರು ವಚನ ಗಾಯನವನ್ನು ಮಾಡಿದರು. ಶ್ರೀಮತಿ ಅರ್ಚನಾ ಸ್ವಾಗತಿಸಿದರು, ಶಿವಕುಮಾರ ಕುಕನೂರು ಪ್ರಾಸ್ಥಾವಿಕ ಮಾತನಾಡಿದರು, ಶ್ರೀಮತಿ ಶರಣಮ್ಮ ಕಲ್ಮಂಗಿ ನಿರೂಪಿಸಿದರು, ರಾಜೇಶ ಸಸಿಮಠ ವಂದಿಸಿದರು.

23 Jul 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top