ಪ್ರಸಕ್ತ ಸಾಲಿನ ಡಿ.ಇಡಿ ಮತ್ತು ಡಿ.ಪಿಇಡಿ ಕೋರ್ಸ್‌ಗಳಿಗೆ ದಾಖಲು ಮಾಡಿಕೊಳ್ಳುವ ಅವಧಿಯನ್ನು ಜು. ೩೧ ರವರೆಗೆ ವಿಸ್ತರಿಸಲಾಗಿದೆ.
ಪ್ರಥಮ ವರ್ಷದ ಡಿ.ಇಡಿ ಮತ್ತು ಡಿ.ಪಿಇಡಿ ಕೋರ್ಸ್‌ಗಳಿಗೆ ದಾಖಲು ಮಾಡಿಕೊಳ್ಳಲು ಜು. ೨೫ ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿತ್ತು. ಇದೀಗ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಧಿಕಾರಿಗಳ ಸೂಚನೆಯಂತೆ ಈ ಅವಧಿಯನ್ನು ಜು. ೩೧ ರವರೆಗೆ ವಿಸ್ತರಿಸಲಾಗಿದ್ದು, ಆದರೆ ಕೌನ್ಸಿಲಿಂಗ್ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇರುವ ಅಭ್ಯರ್ಥಿಗಳು ಸಹ, ಇದೀಗ ಡಯಟ್‌ನಲ್ಲಿ ನೋಂದಣಿ ಮಾಡಿಸಿದಲ್ಲಿ, ಅಂತಹ ಅಭ್ಯರ್ಥಿಗಳು ಸಹ ಕೌನ್ಸಿಲಿಂಗ್ ಅವಧಿಯಲ್ಲಿ ಮೂಲ ದಾಖಲೆಗಳನ್ನು ಹಾಜರುಪಡಿಸಿ, ದಾಖಲಾತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳು, ಕೊಪ್ಪಳ ಸರ್ಕಾರಿ ಶಿಕ್ಷಣ ತರಬೇತಿ ಸಂಸ್ಥೆಯ ನೋಡಲ್ ಅಧಿಕಾರಿಗಳು- ೯೮೮೦೭೪೦೫೫೮ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಮುನಿರಾಬಾದ್‌ನ ಡಯಟ್ ಉಪನಿರ್ದೇಶಕರು ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.