PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ,ಮೇ.೦೨: ನಮ್ಮ ದೇಶದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ನಮ್ಮ ದೇಶದ  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರನಿಗೆ ಅತ್ಯುನ್ನತ ಸ್ಥಾನ ಇದ್ದು ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರು ಯೋಚನೆ ಮಾಡಿ ಅರ್ಹ ವ್ಯಕ್ತಿಗೆ ಆಯ್ಕೆ ಮಾಡಿಕೊಳ್ಳುವುದು ಮತದಾರನ ಜವಾಬ್ದಾರಿಯಾಗಿದೆ. ಅದನ್ನು ಈ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಮ್ಮ ಮತ ಒಳ್ಳೆಯ   ಅಭ್ಯರ್ಥಿ ಕ್ಷೇತ್ರದ ಜನಸಾಮಾನ್ಯರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವ್ಯಕ್ತಿಯನ್ನು ಆರಿಸಿತರಬೇಕೆಂದು ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಮನವಿ ಮಾಡಿಕೊಂಡರು.
ಅವರು ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ ಗ್ರಾಮಸ್ಥರ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿರುವ ತಮಗೆ ಬೆಂಬಲಿಸುವಂತೆ ಹಾಗೂ ಬಿಎಸ್‌ವೈನವರ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಈ ಚುನಾವಣೆಯಲ್ಲಿ ತಮಗೆ ಆಯ್ಕೆ ಮಾಡುವುದರ ಮೂಲಕ ಅದನ್ನು ಮುಂದುವರೆಸಿಕೊಂಡು ಹೋಗಲು ಒಂದು ಅವಕಾಶ ಕೊಡಬೇಕೆಂದು ಅವರು ಮನವಿ ಮಾಡಿಕೊಂಡರು.
ಮುಂದುವರೆದು ಮಾತನಾಡಿದ ಅವರು, ಕೆಜೆಪಿ ಪಕ್ಷದ್ದು ಅಭಿವೃದ್ದಿ ಪರ ರಾಜಕೀಯವಾಗಿದ್ದು, ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ನಾಡಿನ ಜನರ ಹಿತ ಕಾಪಾಡುವುದೇ ಅವರ ಧ್ಯೇಹವಾಗಿದ್ದು, ಅವರ ಜನಪರ ಕಾರ್ಯಕ್ರಮಗಳಿಗೆ ಜನಮನ್ನಣೆ ಈ ಚುನಾವಣೆಯಲ್ಲಿ ಸಿಗಲಿದೆ. ರಾಜ್ಯದಲ್ಲಿ ಮತ್ತು ಕ್ಷೇತ್ರದಲ್ಲಿ ಈಗ ಬದಲಾವಣೆಯ ಕಾಲ ಬಂದಿದೆ. ಸಾಮಾಜಿಕ ನ್ಯಾಯ ಪಾಲನೆಯಲ್ಲಿ ನಮ್ಮ ಕೆಜೆಪಿ ಪಕ್ಷ ಅತ್ಯಂತ ಕಾಳಜಿವಹಿಸಿದೆ.  ಕೊಪ್ಪಳ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ವೈಯಕ್ತಿಕವಾಗಿ ಸಾಕಷ್ಟು ಜನಸೇವೆ, ಸಾಮಾಜಿಕ ಕಾರ್ಯಚಟುವಟಿಕೆ ಮಾಡಲಾಗಿದ್ದು ಅದನ್ನೇ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮಗೆ ಬೆಂಬಲಿಸಬೇಕೆಂದರು.
ಕ್ಷೇತ್ರದ ಜನತೆಗೆ ಉಚಿತ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕಾರ್ಯ ಚುನಾವಣೆ ನಂತರವೂ ಮುಂದುವರೆಸುವೆ ಬಡ ಹೆಣ್ಣುಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ, ಅರ್ಹ ಯುವಕ/ಯುವತಿಯರಿಗೆ ಕಂಪ್ಯೂಟರ್ ವಿತರಣೆ, ಪ್ರತಿವರ್ಷ ಸಾಮೂಹಿಕ ವಿವಾಹಗಳಿಗೆ ಸಹಾಯ ಮತ್ತು ಪ್ರೋತ್ಸಾಹ ಮಾಡುತ್ತ ಬಂದಿದ್ದು, ಈ ಭಾಗದ ಜನರಿಗೆ ತಿಳಿದ ವಿಷಯವಾಗಿದ್ದು ಇಂತಹ ಅನೇಕ ಜನಪರ, ಜನಸೇವೆ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ಈ ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡುವುದರ ಮೂಲಕ ಸಹಕಾರ ನೀಡಬೇಕೆಂದು ಕೊಪ್ಪಳದ ಜನತೆಗೆ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಮನವಿ ಮಾಡಿಕೊಂಡಿದ್ದಾರೆ. 
ಈ ಸಂದರ್ಭದಲ್ಲಿ ಪಕ್ಷದ ತಾಲೂಕ ಅಧ್ಯಕ್ಷ ಪ್ರಫುಲ್ ಗೌಡ ಪಾಟೀಲ್ ಹುರಕಡ್ಲಿ, ಪ್ರಚಾರ ಸಮಿತಿ ಅಧ್ಯಕ್ಷ ನೇಮರಾಜ ಪಾಟೀಲ್, ಯುವ ನಾಯಕ ವಾಗ್ಮಿ ಮೆಹಬೂಬ ಮುಲ್ಲಾ ಹನಮಸಾಗರ, ಮುಖಂಡರಾದ ಈಶ್ವರ ಎನ್, ಶ್ಯಾಮೀದ್ ಸಾಬ ಕಿಲ್ಲೇದಾರ, ಸಿ.ಎಸ್.ಡಂಬಳ, ಮಹೆಬೂಬ ಬಹದ್ದೂರಬಂಡಿ, ಮಲ್ಲಿಕಾರ್ಜುನ ವದಗನಾಳ, ಬಸವರಾಜ ಬಳ್ಳಾರಿ ಅಳವಂಡಿ, ಪರಸಪ್ಪ ಲಮಾಣಿ, ಲಕ್ಷ್ಮಣ ಕವಲೂರು, ಯಮನೂರಪ್ಪ, ಹನುಮಂತ ಕಲಿಕೇರಿ ಹಾಗೂ ಬಿ.ಕೆ.ಹಿರೇಮಠ ಅಗಳಕೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


Advertisement

0 comments:

Post a Comment

 
Top