ಕೊಪ್ಪಳ, ೨೨ : ಇದೇ ದಿ. ದಿನಾಂಕ ೨೪-೦೫-೨೦೧೩, ಶುಕ್ರವಾರ ಮುಂಜಾನೆ ೧೦ ಗಂಟೆಗೆ, ಗದಗ ರಸ್ತೆಯ ಗೌರಾ ಸಿಮೆಂಟ್ಸ್ ಆವರಣದಲ್ಲಿ ಕೊಪ್ಪಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನೀಡಿದ ಜನರ ತೀರ್ಪನ್ನು ಒಪ್ಪಿಕೊಂಡು, ಮತ್ತೆ ಪಕ್ಷ ಸಂಘಟನೆಗಾಗಿ ಸಜ್ಜಾಗಲು ಬಿ.ಜೆ.ಪಿ. ಆತ್ಮಾವಲೋಕನ ಸಭೆ ಮತ್ತು ಚುನಾವಣೆಯಲ್ಲಿ ದುಡಿದ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಾದ ಹೆಚ್.ಗಿರೇಗೌಡ್ರ, ಲೋಕಸಭಾ ಸದಸ್ಯರಾದ ಶಿವರಾಮೆಗೌಡ್ರ, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ, ವಿಧಾನಸಭೆ ಅಭ್ಯರ್ಥಿಯಾಗಿದ್ದ ಸಂಗಣ್ಣ ಕರಡಿ, ನಗರಸಭಾ ಸದಸ್ಯ ಅಪ್ಪಣ್ಣ ಪದಕಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹನುಮಂತಪ್ಪ ಅಂಗಡಿ, ಬಿಜೆಪಿ ನಗರ ಅಧ್ಯಕ್ಷ ಸದಾಶಿವಯ್ಯ ಹಿರೇಮಠ, ಗ್ರಾಮಾಂತರ ಘಟಕದ ಅದ್ಯಕ್ಷ ಫಕೀರಪ್ಪ ಆರೇರ್, ಟಿ.ಎ.ಪಿ.ಸಿ.ಎಂ. ಅಧ್ಯಕ್ಷ ಸಿ.ಎನ್.ಪಾಟೀಲ್, ಎ.ಪಿ.ಎಂ.ಸಿ.ಅಧ್ಯಕ್ಷ ಡಿ.ಮಲ್ಲಣ್ಣ, ಪಿ.ಎಲ್.ಡಿ.ಬ್ಯಾಂಕ ಅಧ್ಯಕ್ಷ ವಿರೇಶ ಲಕ್ಷಾಣಿ, ಮುಖಂಡರಾದ ಸಂಗಪ್ಪ ವಕ್ಕಳದ, ಡಾ|| ಕೆ.ಜಿ.ಕುಲಕರ್ಣಿ, ರಾಘವೇಂದ್ರ ಪಾನಗಂಟಿ, ವಿ.ಎಂ. ಭೂಸನೂರಮಠ, ಮಾಜಿ ನಗರಸಭಾ ಅಧ್ಯಕ್ಷರಾದ ಗವಿಸಿದ್ಧಪ್ಪ ಕಂದಾರಿ ಹಾಗೂ ಚಂದ್ರಶೇಖರ ಕವಲೂರು, ಗುರುನಗೌಡ್ರ ಹಲಗೇರಿ ಪೀರಾ ಹುಸೇನ ಹೊಸಳ್ಳಿ, ನಗರಸಭೆ ಸದಸ್ಯರು, ತಾಲೂಕ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಎಲ್ಲಾ ಮೋರ್ಚಾಗಳ ಅದ್ಯಕ್ಷರು ಮತ್ತು ಪದಾಧಿಕಾರಿಗಳು, ಭೂತ್ ಮಟ್ಟದ ಕಾರ್ಯಕರ್ತರು, ಹಾಗೂ ಮುಖಂಡರು ಭಾಗವಹಿಸಲಿದ್ದು, ಭಾರತೀಯ ಜನತಾ ಪಕ್ಷದ ಎಲ್ಲ ಪದಾಧಿಕಾರಿಗಳು, ಅಭಿಮಾನಿಗಳು ಈ ಸಭೆಯಲ್ಲಿ ಭಾಗವಹಿಸಿ, ಮತ್ತೆ ಪಕ್ಷ ಸಂಘಟನೆಗೆ ತಯಾರಾಗಲು ಸಲಹೆ, ಸೂಚನೆಗಳನ್ನು ನೀಡಬೇಕೆಂದು ಬಿ.ಜೆ.ಪಿ. ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.