PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ :  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೮೮.೬೬% ರಷ್ಟು ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುವ ಕಾತರಕಿ ಗುಡ್ಲಾನೂರಿನ ಮಂಜುಳಾ ಪತ್ತಾರರಿಗೆ ಹೆಚ್‌ಆರ್‌ಜಿ ಎಎಸ್‌ಪಿಎಲ್ ಸಂಸ್ಥೆಯ ಸಿಇಓ ಹೆಚ್.ಜಿ.ಗುರುದತ್ತರು ಧನಸಹಾಯ ಮಾಡಿ ಪ್ರೋತ್ಸಾಹಿಸಿದರು. ಮಂಜುಳಾ ಪತ್ತಾರರ ಮನೆಗೆ ಬೇಟಿ ನೀಡಿದ ಹೆಚ್.ಜಿ.ಗುರುದತ್ತರು - ಮಂಜುಳಾ  ಅಂಗವೈಕಲ್ಯವಿದ್ದರೂ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ ಮೂಲಕ ಎಲ್ಲರಿಗೂ ಸ್ಪೂರ್ತಿದಾಯಕವಾಗಿದ್ದಾರೆ. ಶಿಕ್ಷಣದಿಂದಲೇ ಉನ್ನತಿ ಸಾಧ್ಯ ಐಎಎಸ್ ಮಾಡುವ ಗುರಿ ಹೊಂದಿರುವ ಮಂಜುಳಾರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅವಶ್ಯಕವಾದ ಎಲ್ಲ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎ.ವಿ.ಉಪಾದ್ಯಾಯ,ರಾಜು ಹಲಗೇರಿ,ಸಿರಾಜ್ ಬಿಸರಳ್ಳಿ,ಮಂಜುಳಾ ಪತ್ತಾರ ಅಣ್ಣ,ತಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

22 May 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top