PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,


 : ಕೃಷಿ ಮಾರುಕಟ್ಟೆ ಸಮಿತಿಗಳು ರೈತರ ಪರವಾಗಿದ್ದು ಅವರ ಬೆಳವಣಿಗೆಗೆ ವರ್ತಕರ ಅಥವಾ ವ್ಯಾಪಾರಸ್ಥರ ಪಾತ್ರವೂ ಬಹಳ ಅಗತ್ಯ. ಅಲ್ಲದೇ ಕೊಪ್ಪಳದ ವರ್ತಕರು ತುಂಬಾ ಪಾರದರ್ಶಕವಾಗಿ ವ್ಯವಹಾರ ನಡೆಸುವವರಾಗಿದ್ದಾರೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ನಿಯೋಜಿತ ಅಭ್ಯರ್ಥಿ ಕರಡಿ ಸಂಗಣ್ಣ ಅಭಿಪ್ರಾಯ ಪಟ್ಟರು.
ಅವರು ೨೬.೦೪.೧೩ ರಂದು ಕೊಪ್ಪಳ ನಗರದ ಗಂಜ್‌ನಲ್ಲಿ ಬಿ.ಜೆ.ಪಿ. ಪ್ರಚಾರ ಸಭೆಯ ವೇಳೆ ಭಾಗವಹಿಸಿ ಈ ಮೇಲಿನಂತೆ ಮಾತನಾಡಿದರು.
ಕೊಪ್ಪಳದ ಎ.ಪಿ.ಎಂ.ಸಿ.ಯಲ್ಲಿ ಈಗಾಗಲೇ ಮೂಲಭೂತ ಸೌಕರ್ಯಗಳಾದ ಗುಣಮಟ್ಟದ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣವಾಗಿವೆ. ಇದಲ್ಲದೇ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹಮಾಲರಿಗೆ ನಿವೇಶನ ಹಂಚಿಕೆ ಪ್ರಗತಿಯಲ್ಲಿದೆ. ಉತ್ತಮ ಸರಕಾರಿ ಮಾರುಕಟ್ಟೆ ನೀಡಲಿಕ್ಕೂ ಈಗಾಗಲೇ ಆದ್ಯತೆ ನೀಡಲಾಗಿದೆ. ಹುಲಿಗಿಯಲ್ಲಿ ಗೋದಾಮು ನಿರ್ಮಿಸಲಾಗಿದೆ. ಬೆಟಗೇರಿಯಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣವಾಗಿದೆ. ಅಲ್ಲದೇ ಎಲೆಕ್ಟ್ರಾನಿಕ್ ತೂಕದ ಮೂಲಕ ನಡೆಯುವ ಮಾರುಕಟ್ಟೆ ವ್ಯವಹಾರ ಹಮಾಲರಿಗೆ ಮತ್ತು ರೈತರಿಗೆ ಬಹಳ ಸಹಕಾರಿಯಾಗಿದೆ ಎಂದು ಹೇಳಿದರು.
ಬಿ.ಜೆ.ಪಿ. ಸರಕಾರವು ರೈತರ ಪರವಾಗಿದ್ದು, ರೈತರಿಗಾಗಿಯೇ ವಿಶೇಷ ಕೃಷಿ ಬಜೆಟ್ ಮಂಡನೆ ಮಾಡಿದೆ. ಕೊಪ್ಪಳದಲ್ಲಿ ರೈತರ ಬಾಳನ್ನು ಹಸನಾಗಿಸಲು ೪೦ ಸಾವಿರ ಎಕರೆಯ ಸಿಂಗಟಾಲೂರ ಏತ ನೀರಾವರಿ ಯೋಜನೆ, ಬೆಟಗೇರಿ ಏತ ನೀರಾವರಿ ಯೋಜನೆ, ಬಹಾದ್ಧೂರ ಬಂಡಿ ಏತ ನೀರಾವರಿ ಯೋಜನೆಯಂತಹ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರು ಆರ್ಥಿಕವಾಗಿ ಸಬಲರಾಗಲು ಸಹಾಯಕವಾಗಿದೆ. ರೈತರು ಸಬಲರಾದರೆ ವ್ಯಾಪಾರವು ಅಭಿವೃದ್ಧಿ ಹೊಂದುತ್ತದೆ. ರೈತರು ಮತ್ತು ವರ್ತಕರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಪರಸ್ಪರ ಅವಲಂಬಿತರು. ಇವರೀರ್ವರ ಅಭಿವೃದ್ಧಿಗಾಗಿ ಬಿ.ಜೆ.ಪಿ. ಸರಕಾರ ಹಲವು ಯೋಜನೆಗಳ ಅನುಷ್ಟಾನ ತಂದಿದೆ. ಮತ್ತಷ್ಟು ಅಭಿವೃದ್ಧಿಗಳಿಗಾಗಿ, ಅಭಿವೃದ್ಧಿಪರ ಧೋರಣೆಗಳಿರುವ ಬಿ.ಜೆ.ಪಿ.ಗೆ ಮತ ಹಾಕಿ ಬಹುಮತದಿಂದ ಗೆಲ್ಲಿಸಲು ಕರಡಿ ಸಂಗಣ್ಣ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಈರಣ್ಣ ಬುಳ್ಳಾ ಇವರ ಅಂಗಡಿಯಲ್ಲಿ ನಡೆದ ಬಿ.ಜೆ.ಪಿ. ಪ್ರಚಾರಸಭೆಯಲ್ಲಿ ರಾಮಣ್ಣ, ಮಹಿಬೂಬ್‌ಸಾಬ್ ಇವರ ನೇತೃತ್ವದಲ್ಲಿ ಹಲವಾರು ಹಮಾಲರು ಬಿ.ಜೆ.ಪಿ.ಯನ್ನು ಸೇರಿ, ಕರಡಿ ಸಂಗಣ್ಣನವರ ಗೆಲುವಿಗೆ ಶ್ರಮಿಸುವ ಭರವಸೆ ನೀಡಿದರು.
ನಂತರ ಎ.ಪಿ.ಎಂ.ಸಿ. ವರ್ತಕರ ಅಂಡಿಗಳಿಗೆ ತೆರಳಿ ಮತ ಯಾಚಿಸಲಾಯಿತು. ಮತ ಯಾಚನೆಯ ಸಂದರ್ಭದಲ್ಲಿ ಈರಣ್ಣ ಬುಳ್ಳಾ, ಎ.ಪಿ.ಎಂ.ಸಿ. ನಿರ್ದೇಶಕ ಕಮಲ್ ಜಾಂಗಡಾ, ಲತೀಫ ಗೊಂಡಬಾಳ, ಗೌಸ್ ಗೊಂಡಬಾಳ, ಮಲಿಕ್‌ಸಾಬ್, ಬಸವರಾಜ ಗಂಗಾವತಿ, ಪಂಪಣ್ಣ ಹೊಸಳ್ಳಿ, ಹೇಮಣ್ಣ, ಶ್ರೀನಿವಾಸ ಶ್ರೇಷ್ಠಿ, ವಿರುಪಣ್ಣ ಕೆಂಗೇರಿ, ಮಹ್ಮದ್‌ಸಾಬ್ ಬಹಾದ್ಧೂರ ಬಂಡಿ, ಈರಣ್ಣ ಕೊಳ್ಳಿ, ಪರಮೇಶ ಚಕ್ಕಿ, ಲಿಂಗಯ್ಯ ಚೌಕಿಮಠ, ಸತೀಶ ಕೊತಬಾಳ, ವೆಂಕಟೇಶ ಇಂದರಗಿ, ಶ್ರೀನಿವಾಸ ಮೆಣೆದಾಳ, ಬಸವರಾಜ ತಂಬ್ರಳ್ಳಿ, ಶ್ರೀನಿವಾಸ ಕಂಪ್ಲಿಕರ್, ಮಾಜಿ ಎ.ಪಿ.ಎಂ.ಸಿ. ನಿರ್ದೇಶಕರ ಭೋಜಪ್ಪ ಕುಂಬಾರ, ನಾಗರಾಜ ಗಾರವಾಡಮಠ, ನೇಮಿರೆಡ್ಡಿ ಮೇಟಿ, ಖಾಜಾ ಹುಸೇನ ರೇವಡಿ, ಚಂದುಸಾಬ, ಮಹೇಶ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

27 Apr 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top