
ಕೊಪ್ಪಳ :- ೩೧ ರಂದು ಬುಧವಾರ ಬೆಳಿಗ್ಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಮಾಜಿ ಪ್ರಧಾನಿ ದಿ. ಶ್ರೀಮತಿ ಇಂದಿರಾಗಾಂಧಿಯವರ ೨೮ನೇ ಪುಣ್ಯ ತಿಥಿಯನ್ನು ಆಚರಿಸಲಾಯಿತು. ಶ್ರೀಮತಿ ಇಂದಿರಾಗಾಂದಿಯವರು ನಾಡು ಕಂಡ ಒಬ್ಬ ಮಹಾನ ನಾಯಕಿ ಇವರ ಆಡಳಿತದಲ್ಲಿ ಭಾರತ ದೇಶವು ತೀವ್ರ ಅಭಿವೃದ್ದಿ ಹೊಂದಿದ ರಾಷ್ಟ್ರವಾಗಿ ನಿರ್ಮಾಣ ಗೊಂಡಿತು. ಇವರ ೨೦ ಅಂಶದ ಕಾರ್ಯಕ್ರಮಗಳು ದೇಶದ ಅಭಿವೃದ್ದಿಗೆ ಸಹಕಾರಿಯಾಗಿದೆ. ದೇಶದಿಂದ ಗರೀಬಿ ಹಠಾವೋ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದರು. ವಿಜ್ಞಾನ, ತಂತ್ರಜ್ಞಾನದಲ್ಲಿ ಭಾರತವನ್ನು ವಿಶ್ವದ ಮುಂಚೂಣಿಯಲ್ಲಿ ತಂದರು. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದರು. ಉಳ್ಳವನೆ ಒಡೇಯನೆಂಬ ಕಾನೂನನನ್ನು ಜಾರುಗೊಳಿಸಿ ಬಡವರಿಗೆ ಭೂಮಿಯನ್ನು ಕೊಡಮಾಡಿದರು. ಇವರ ಅಧಿಕಾರದ ಅವಧಿಯಲ್ಲಿ ಭಾರತ ದೇಶವು ಒಂದು ಸಂಪತ್ತಭರಿತ ರಾಷ್ಟ್ರವಾಗಿ ಮಾರ್ಪಡುಗೊಂಡಿತು. ಇವರ ತತ್ವ ಸಿದ್ದಾಂತಗಳು ಇಂದಿನ ರಾಜಕಾರಣಿಗಳು ತಮ್ಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಮಾತನಾಡಿ ಅರ್ಜುನಸಾ ಕಾಟವರಾವರು ಶ್ರೀಮತಿ ಇಂದಿರಾ ಗಾಂಧಿಯವರು ಬಡ ಹಿತಪರ ಕಾಳಜಿ ಹೊಂದಿದ್ದರು ಎಂದು ಹೇಳಿದರು
ಎಸ್.ಬಿ.ನಾಗರಳ್ಳಿ, ಜುಲ್ಲುಖಾದರಿ, ಮರ್ದಾನಲಿ ಅಡ್ಡೆವಾಲೆ, ಸಿದ್ದಲಿಂಗಯ್ಯ ಹಿರೇಮಠ, ಮಾನ್ವಿ ಪಾಷಾ, ಇಂದಿರಾ ಭಾವಿಕಟ್ಟಿ, ಮಂಜುನಾಥ ಗಾಳಿ, ಶಕುಂತಲಾ ಹುಡೆದಜಾಲಿ, ಅಜ್ಜಪ್ಪ, ಕೃಷ್ಣಾ ಇಟ್ಟಂಗಿ, ಗಾಳೇಪ್ಪ ಪೂಜಾರ, ಧಾರವಾಡ ರಫಿ, ವೈಜನಾಥ ದಿವಟರ್, ನಾಗರಾಜ ಬಳ್ಳಾರಿ, ಅಕ್ತರ್ ಪಾರುಕಿ, ಮಹಿಬೂಬರಗಂಜಿ, ಸರೋಜಾ ಬಾಕಳೆ, ಹಲೀಮಾಬಿ, ಶಿವಾನಂದ ಹೊದ್ಲುರು, ಸುರೇಶ ದಾಸರಡ್ಡಿ, ಸುಮಲತಾ ಕರ್ಲಿ, ಹಾರೂನಖಾನ್, ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ್ ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.