ಬೆಂಗಳೂರು, ಅ.31: ಸಾಹಿತಿ ಬೊಳುವಾರ್ ಮುಹಮ್ಮದ್ ಕುಂಞಿ, ಪ್ಯಾರಾಲಿಂಪಿಕ್ಸ್ ಸಾಧಕ ಗಿರೀಶ್ ಗೌಡ ಹಾಗೂ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ರಮೇಶ್ ಕಲ್ಲಡ್ಕ ಸಹಿತ 57 ಮಂದಿ ಸಾಧಕರಿಗೆ ಮತ್ತು 7 ಸಂಘ ಸಂಸ್ಥೆಗಳಿಗೆ 2012ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನಿಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ನವೆಂಬರ್ 1ರ ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿ ವಿಜೇತರಿಗೆ ತಲಾ ಒಂದು ಲಕ್ಷ ರೂ. ನಗದು, 20 ಗ್ರಾಂ ಚಿನ್ನ ಹಾಗೂ ಫಲಕ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಪ್ರಶಸ್ತಿ ವಿಜೇತರ ವಿವರ:
ಸಂಗೀತ-ನೃತ್ಯ
ಮೈಸೂರು ಮಹಾದೇವಪ್ಪ - ಮಂಡ್ಯ
ನಂದಿನಿ ಈಶ್ವರ್ - ಮೈಸೂರು
ಹನುಮಂತಪ್ಪ ಬಸಪ್ಪ ತಿಮ್ಮಾಪುರ - ಹಾವೇರಿ
ಸಾಹಿತ್ಯ
ಎಚ್.ಎಸ್.ರಾಘವೇಂದ್ರರಾವ್ - ಚಿತ್ರದುರ್ಗ
ಬೊಳುವಾರ್ ಮುಹಮದ್ ಕುಂಞಿ - ದಕ್ಷಿಣ ಕನ್ನಡ
ನಿರಂಜನ ವಾಲಿಶೆಟ್ಟರ್ - ಧಾರವಾಡ
ಸತ್ಯಾನಂದ ಪಾತ್ರೋಟ - ಬಾಗಲಕೋಟೆ
ಜಾಣಗೆರೆ ವೆಂಕಟರಾಮಯ್ಯ - ತುಮಕೂರು
ಜಾನಪದ
ವೆಂಕಪ್ಪ ಅಂಬಾಜಿ ಸುಗತೇಕರ - ಬಾಗಲಕೋಟೆ
ಯಲ್ಲವ್ವ ಬಸಪ್ಪ ಮಾದರ - ಬೆಳಗಾವಿ
ನಗಾರಿ ಸಿದ್ದಯ್ಯ - ರಾಮನಗರ
ಡಾ.ವೇಮಗಲ್.ಡಿ. ನಾರಾಯಣಸ್ವಾಮಿ - ಕೋಲಾರ
ಪಾಲಂದಿರ ದೇವಯ್ಯ - ಮಡಿಕೇರಿ
ಶಿವರುದ್ರಪ್ಪ ರೇವಣಸಿದ್ದಪ್ಪ ಮುದೋಳ - ಬಾಗಲಕೋಟೆ
ಪುಂಡಲೀಕ ಪೂಜಾರಿ - ಗುಲ್ಬರ್ಗ
ರಮೇಶ್ ಕಲ್ಲಡ್ಕ - ದಕ್ಷಿಣ ಕನ್ನಡ
ಸಂಗಪ್ಪ ಫಕೀರಪ್ಪ ಊಗಾರ - ಬಾಗಲಕೋಟೆ
ರಂಗಭೂಮಿ
ಚಿಂದೋಡಿ ಬಂಗಾರೇಶ್ - ದಾವಣಗೆರೆ
ಎನ್.ಎಸ್.ಮೂರ್ತಿ - ತುಮಕೂರು
ಅಲ್ತಾಫ್ - ರಾಯಚೂರು
ಎ.ಕೆ.ಸುಂದರ್‌ರಾಜ್ - ಬೆಂಗಳೂರು
ಲಲಿತ ಕಲೆ-ಶಿಲ್ಪಕಲೆ
ಪ.ಸ.ಕುಮಾರ್ - ಮೈಸೂರು
ಕೆ.ಎನ್.ರಾಮಚಂದ್ರನ್ - ಬಳ್ಳಾರಿ
ಕೃಷ್ಣಪ್ಪ ರಾಮಪ್ಪ ಬಡಿಗೇರ - ಬಾಗಲಕೋಟೆ
ಕ್ರೀಡೆ
ಎಚ್.ಎನ್.ಗಿರೀಶ್ - ಹಾಸನ
ಪ್ರಕಾಶ್ ಗುರುಸಿದ್ದಪ್ಪ ಯರಗಟ್ಟಿ -ಮಹಾರಾಷ್ಟ್ರ
ಯಕ್ಷಗಾನ
ಗೋಡೆ ನಾರಾಯಣ ಹೆಗಡೆ - ಉತ್ತರ ಕನ್ನಡ
ರಾಧಾಭಾಯಿ ಮಾರುತಿ ಮಾದರ - ಬೆಳಗಾವಿ
ಶಿಕ್ಷಣ
ಪ್ರೊ.ಭಾಷ್ಯಂಸ್ವಾಮಿ - ಮಂಡ್ಯ
ಡಾ.ಬಿ.ಕೆ.ಹಿರೇಮಠ - ಬಾಗಲಕೋಟೆ
ಚಲನಚಿತ್ರ- ಕಿರುತೆರೆ
ಎಸ್.ಡಿ.ಅಂಕಲಗಿ - ಬೆಂಗಳೂರು
ಬಿ.ಜಯ - ಚಾಮರಾಜನಗರ
ವಿಜ್ಞಾನ-ತಂತ್ರಜ್ಞಾನ
ಜಿ.ಎಸ್. ಪರಮಶಿವಯ್ಯ - ತುಮಕೂರು
ಡಾ. ಸಾಗರ್ ದುಗಾಣಿ - ಬೆಳಗಾವಿ
ಸಂಕೀರ್ಣ
ಡಾ.ಆರ್.ಎಲ್.ಕಶ್ಯಪ್ - ಬೆಂಗಳೂರು
ಪ್ರೊ. ಎನ್.ಜಿ.ಕರೂರ್ - ಬಿಜಾಪುರ
ಹಿರೇಮಗಳೂರು ಕಣ್ಣನ್ - ಚಿಕ್ಕಮಗಳೂರು
ಪ್ರೊ. ಸಿ.ವಿ.ಕೇರಿಮನಿ - ಗದಗ
ಸುಧಾಕರ್ ಚತುರ್ವೇದಿ - ಬೆಂಗಳೂರು
ಯೋಗ
ಸಿ.ವಿ.ರುದ್ರಾರಾಧ್ಯ - ಶಿವಮೊಗ್ಗ
ಅಮ್ಮೀನಗೌಡ ಶಿವನಗೌಡ - ಹಾವೇರಿ
ಡಾ. ಈಶ್ವರ್ ಮೆಣಸಿನ ಕಾಯಿ - ಧಾರವಾಡ
ಮಾಧ್ಯಮ
ವಿ.ಸತ್ಯನಾರಾಯಣ - ಶಿವಮೊಗ್ಗ
ಎಸ್.ಕೆ.ಶೇಷಚಂದ್ರಿಕಾ - ಶಿವಮೊಗ್ಗ
ಗೋಪಾಲ ಪ್ರಹ್ಲಾದ್ ರಾವ್ ನಾಯ್ಕಾ - ಬಿಜಾಪುರ
ವಿ. ಶಿವಾನಂದನ್ - ಗುಲ್ಬರ್ಗ
ಎಸ್.ಶಾಂತರಾಮ್ - ಬೆಂಗಳೂರು
ಸಮಾಜ ಸೇವೆ
ತಾತ್ಯರಾವ್ ಕಾಂಬ್ಳೆ - ಬೀದರ್
ಪಿ.ಎನ್.ಬೆಂಜಮಿನ್ - ಬೆಂಗಳೂರು
ಅರವಿಂದ ಸೀತಾರಾಮನ್ - ಬೆಂಗಳೂರು
ಬಸವಲಿಂಗ ಪಟ್ಟದೇವರು - ಬೀದರ್
ಕೃಷಿ
ವಸಂತ ನಾರಾಯಣ ಕುಲಕರ್ಣಿ - ಬೆಳಗಾವಿ
ಹೊರನಾಡು/ಹೊರದೇಶ
ಡಾ.ಲಿಂಗಣ್ಣ ಕಲಬುರ್ಗಿ - ನ್ಯೂಜಿಲ್ಯಾಂಡ್
ಪುಟ್ಟಸ್ವಾಮಿ ಗುಡಿಗಾರ್ - ಗೋವಾ
ಉಮಾಪತಿ - ಹೊಸದಿಲ್ಲಿ
ಪರಿಸರ
ಶಂಕರ ಕುಂಬಿ - ಧಾರವಾಡ
ಡಾ.ಎಚ್.ಸಿ.ಶರತ್ ಚಂದ್ರ - ಮೈಸೂರು
ಸಂಘ-ಸಂಸ್ಥೆಗಳು
ಅರುಣೋದಯ ಸಂಸ್ಥೆ - ಗದಗ
ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆ - ಬೆಂಗಳೂರು
ರಂಗಶ್ರೀ - ಬೆಂಗಳೂರು
ಕರ್ನಾಟಕ ಎಂಜಿನಿಯರ್ಸ್ ಅಕಾಡಮಿ - ಬೆಂಗಳೂರು
ನ್ಯೂ ಹೊರೈಜನ್ ಎಜುಕೇಷನಲ್ ಮತ್ತು ಕಲ್ಚರಲ್ ಟ್ರಸ್ಟ್ - ಬೆಂಗಳೂರು
ಸ್ಫೂರ್ತಿಧಾಮ - ಉಡುಪಿ
ಮೊಗವೀರ ವ್ಯವಸ್ಥಾಪಕ ಮಂಡಳಿ - ಮುಂಬೈ
0 comments:
Post a Comment
Click to see the code!
To insert emoticon you must added at least one space before the code.