PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ-ಕಿನ್ನಾಳ ರೈಲ್ವೆ ಗೇಟ್ ೬೪ ರಸ್ತೆ ತಡೆ ಹೋರಾಟಕ್ಕೆ ಜನಬೆಂಬಲ: ಕೂಡಲೇ ಅನುಮತಿ ಕೊಡಬೇಕು ಇಲ್ಲವಾದರೆ ತೀವ್ರಸ್ವರೂಪದ ಹೋರಾಟದ ಎಚ್ಚರಿಕೆ
ಕೊಪ್ಪಳ, ಅ. ೧. ಹೋರಾಟ ಸಮಿತಿ ಗೌರವ ಅಧ್ಯಕ್ಷರಾದ ಹೆಚ್.ಎಸ್ ಪಾಟೀಲ, ಮಾತನಾಡಿ ಈ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನೆ ಕೂಡಲು ಸಾಧ್ಯವಿಲ್ಲ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು, ತುರ್ತಾಗಿ ಸೇತುವೆ ನಿರ್ಮಾಣಕ್ಕೆ ಅನುಮತಿಯನ್ನು, ಅನುದಾನವನ್ನು ಕೊಡಬೇಕು ಇಲ್ಲವಾದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದರು.
ಅವರು ಹೋರಾಟ ಸಮಿತಿಯಿಂದ ಕಿನ್ನಾಳ ಗೇಟ್ ಬಳಿ ಹಮ್ಮಿಕೊಂಡಿದ್ದ ರಸ್ತಾ ರೋಖೋ ಹೋರಾಟದಲ್ಲಿ ಮಾತನಾಡಿದರು. ಸಮಿತಿಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ೨೦ ಹಳ್ಳಿಗಳನ್ನು, ೨೦ ಬಡಾವಣೆಗಳನ್ನು ಹೊಂದಿರುವ ಕಿನ್ನಾಳ ಗೇಟ್ ಅತ್ಯಂತ ಅವಶ್ಯವಾಗಿದೆ, ಭಾರತ ಆಹಾರ ನಿಗಮದ ಗೋದಾಮು, ಕಿನ್ನಾಳ ಹಿರೇಹಳ್ಳ ಅಣೆಕಟ್ಟು, ಹಾಸ್ಟೆಲ್‌ಗಳು, ಮುಸ್ಲಿಂ ಖಬರಸ್ತಾನ, ಪ್ರಖ್ಯಾತ ಶಿಲ್ಪಕಲಾ ಗ್ರಾಮ ಕಿನ್ನಾಳ ಇರುವದರಿಂದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಹೋರಾಟ ಸಮಿತಿ ಗೌರವ ಅಧ್ಯಕ್ಷರಾದ ವೀರುಪಾಕ್ಷಪ್ಪ ಅಗಡಿ, ಉಪಾಧ್ಯಕ್ಷ ಸಂಗಪ್ಪ ವಕ್ಕಳದ, ಕಾರ್ಯಧ್ಯಕ್ಷರಾದ ಜಾಕೀರ್ ಹುಸೇನ್ ಕಿಲ್ಲೇದಾರ, ಪ್ರಶಾಂತ ರಾಯ್ಕರ್, ಖಜಾಂಚಿ ಯಲ್ಲಪ್ಪ ಕಾಟ್ರಳ್ಳಿ, ಹೋರಾಟ ಸಮಿತಿಯ ಪದಾಧಿಕಾರಿಗಳಾದ ಮಂಜುನಾಥ ಗೊಂಡಬಾಳ, ರಾಮಣ್ಣ ಕಲ್ಲನವರ್, ಪರಮಾನಂದ ಯಾಳಗಿ, ದೇವೇಂದ್ರಪ್ಪ ಡೊಳ್ಳಿನ್, ಗಿರೀಶ ಕಣವಿ, ಸಜ್ಜಾದ್ ಹುಸೇನ್, ದೇವಪ್ಪ ಕಟ್ಟಿಮನಿ, ವೀರಪ್ಪ ಕವಲೂರ, ದೇವಪ್ಪ ಅರಕೇರಿ, ಮಲ್ಲಣ್ಣ ಗುತ್ತೆದಾರ, ರವಿ ಎಲಿಗಾರ, ಎಸ್.ಬಿ. ವಸ್ತ್ರದ, ಶರಣು ಡೊಳ್ಳಿನ್, ರಾಜಶೇಖರ ಪುರಾಣಿಕ್ ಮಠ, ಶ್ರೀನಿವಾಸ ನರಗುಂದ, ಸುನೀಲ್ ಕರಮುಡಿ,  ಶಂಕ್ರಯ್ಯ ಅಬ್ಬಿಗೇರಿಮಠ, ಸೋಮಲಿಂಗಪ್ಪ ಮೇಣಸಿನಕಾಯಿ, ಸತೀಶ ಮುರಾಳ, ಗವಿಶಿದ್ದಪ್ಪ ಕರ್ಕಿಹಳ್ಳಿ, ಯಶವಂತ ಮೇತ್ರಿ, ಸಿದ್ದನಗೌಡ ಪಾಟೀಲ, ದುರಗೇಶಪ್ಪ ಹುಲಿಗೆಜ್ಜಿ, ಮಡಿವಾಳಪ್ಪ ಮಡಿವಾಳರ, ದೌವಲತ್ ಪಾಷಾ, ವೆಂಕಟೇಶ ಬೆಲಂಕೊಂಡಿ, ಕೆ.ಕೆ.ಡಂಬಳ, ಶ್ರೀಶೈಲ ಬಡಿಗೇರಿ, ಜಹೀರ್ ಅಲಿ, ಕಾಂತೇಗೌಡ್ರ ಪೋಲಿಸ್ ಪಾಟೀಲ, ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಹೋಆಟವನ್ನು ಬೆಂಬಲಿಸಿ ಮಾತನಾಡಿದ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಕೇಂದ್ರ ಸರಕಾರ ಎಲ್ಲಾ ಅಗತ್ಯ ಗೇಟ್‌ಗಳಿಗೆ ತನ್ನ ಪಾಲಿನ ಹಣಕಾಸಿನ ನೆರವನ್ನು ಮಾಡುತ್ತದೆ ಅದಕ್ಕೆ ಕಾಂಗ್ರೆಸ್ ವತಿಯಿಂದಲು ಒತ್ತಾಯ ಮಾಡಲಾಗುವದು, ಪ್ರತ್ಯೇಕ ನಿಯೋಗದ ಮೂಲಕವು ಆಗ್ರಹಪಡಿಸಲಾಗುವದು, ಗೇಟ್ ೬೪ ತುಂಬಾ ಅಗತ್ಯವಾಗಿದೆ, ರಾಜ್ಯ ಸರಕಾರ ಕೂಡಲೇ ತನ್ನ ಪಾಲನ್ನು ನೀಡಬೇಕು ಇಲ್ಲವಾದರೆ ಹೋರಾಟ ಅನಿವಾರ್ಯ ಎಂದರು. ಜಿಲಾ ಪಂಚಾಯತ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ನಾಗರಹಳ್ಳಿ, ವೈಜನಾಥ ದಿವಟರ್, ಬಿ.ಎಸ್.ಆರ್. ಕಾಂಗ್ರೇಸ್ ಮುಖಂಡ ಕೆ.ಎಂ. ಸೈಯದ್, ಜೆಡಿಎಸ್ ಮುಖಂಡ ಗವಿಸಿದ್ದಪ್ಪ ಮುಂಡರಗಿ, ಬಸವರಾಜ ಮಡಿವಾಳರ, ಪ್ರಭು ಪಾಟೀಲ, ಅರ್ಜುನ್‌ಸಾ ಕಾಟವಾ, ಶಕುಂತಲಾ ಹುಡೇಜಾಲಿ, ನಾಗರಾಜ ಬಳ್ಳಾರಿ, ಬಸವರಾಜ ನರೇಗಲ್ ಇತರರು ಹೋರಾಟವನ್ನು ಬೆಂಬಲಿಸಿದರು.

01 Oct 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top