PLEASE LOGIN TO KANNADANET.COM FOR REGULAR NEWS-UPDATES


ಕಾರು ಚಾಲಕನ ಕೊಲೆಗೈದು ಕಾರಿನಲ್ಲಿದ್ದವರ ಚಿನ್ನಾಭರಣ ಹಾಗೂ ನಗದನ್ನು ಲೂಟಿ ಮಾಡಿದ ಘಟನೆ ಇಂದು ಕೊಪ್ಪಳ ತಾಲೂಕಿನ ಬೂದಗುಂಡ ಕ್ರಾಸ್ ಬಳಿ ನಡೆದಿದೆ.

ಇಂದು ಬೆಳಗ್ಗಿನ ಜಾವ 4:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರು ಚಾಲಕ ಕಿರಣ್ ಎಂಬವರನ್ನು ಹತ್ಯೆಗೈದ ದರೋಡೆಕೋರರು 53 ಸಾವಿರ ರೂ. ನಗದು ಹಾಗೂ ಕಾರಿನಲ್ಲಿದ್ದ ಮಹಿಳೆಯೋರ್ವರ ಮಾಂಗಲ್ಯ ಸರವನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.
ಬೂದಗುಂಡ ಕ್ರಾಸ್ ಬಳಿ ಕಾರು ನಿಲ್ಲಿಸಿದ್ದ ಸಂದರ್ಭ ಈ ಕೃತ್ಯ ನಡೆಸಲಾಗಿದೆ ಎನ್ನಲಾಗಿದೆ. ಕಾರು ಬಳಿ ಆಗಮಿಸಿದ ಇಬ್ಬರು ದರೋಡೆಕೋರರ ತಂಡ ದರೋಡೆಗೆ ಯತ್ನಿಸಿದ್ದು, ಇದಕ್ಕೆ ಪ್ರತಿರೋಧ ಒಡ್ಡಿದ ಕಾರು ಚಾಲಕನನ್ನು ದರೋಡೆಕೋರರ ತಂಡ ಚೂರಿಯಿಂದ ಇರಿದು ಕೊಲೆ ನಡೆಸಿತು ಎನ್ನಲಾಗಿದೆ. ಈ ಬಗ್ಗೆ ಮುನಿರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 Aug 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top