- ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ (೨೦೧೨-೧೩) ಸ್ನಾತಕೋತ್ತರ ಮತ್ತು ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಖಾಲಿ ಉಳಿದ ಸೀಟುಗಳ ಭರ್ತಿಗಾಗಿ ಪ್ರವೇಶ ಪಡೆಯುವ ದಿನಾಂಕವನ್ನು ಸೆಪ್ಟೆಂಬರ್ ೧೦ ರವರೆಗೆ ವಿಸ್ತರಿಸಲಾಗಿದೆ ಎಂದು ಕುಲಸಚಿವ ಪ್ರೊ.ಜಿ.ಆರ್,ನಾಯಿಕ ಅವರು ತಿಳಿಸಿದ್ದಾರೆ.
ಕನ್ನಡ, ಹಿಂದಿ, ಉರ್ದು, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಹಿಳಾ ಅಧ್ಯಯನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕಂಪ್ಯೂಟರ್ ಸೈನ್ಸ್, ಬಯೋಇನ್ಫಾರ್‍ಮೆಟಿಕ್ಸ್, ಬಯೋಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್, ಫಾರ್ಮಾಸುಟಿಕಲ್ಸ್ ಕೆಮಿಸ್ಟ್ರಿ, ಫುಡ್ ಪ್ರೊಸೆಸಿಂಗ್, ಎಂಎಡ್, ವಿಷಯಗಳ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸೀಟುಗಳು ಲಭ್ಯವಿವೆ. ಮೊದಲು ಬಂದವರಿಗೆ ಆದ್ಯತೆ ಅನುಸಾರ ಉಳಿಕೆ ಸೀಟುಗಳಿಗೆ ಪ್ರವೇಶ ನೀಡಲಾಗುವುದು.
ಮಹಿಳಾ ವಿಶ್ವವಿದ್ಯಾಲಯದ ಯಾವುದೇ ವಿಭಾಗಗಳಲ್ಲಿ ಪ್ರವೇಶ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತು ಅರ್ಜಿ ಸಲ್ಲಿಸದೇ ಇರುವವರು ಕೂಡಾ ಯಾವುದೇ ವಿಭಾಗದ ಖಾಲಿ ಇರುವ ಸೀಟುಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪ್ರವೇಶ ಪಡೆಯಲು ಇಚ್ಚಿಸುವವರು ಆಯಾ ವಿಭಾಗಗಳ ಮುಖ್ಯಸ್ಥರುಗಳನ್ನು ಭೇಟಿಯಾಗಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ ಎಂದು ಪ್ರೊ.ನಾಯಿಕ ಅವರು ವಿವರಿಸಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸದೇ ಇರುವವರು ರೂ. ೫೦೦/- ಶುಲ್ಕದೊಂದಿಗೆ ಸ್ಥಳದಲ್ಲಿಯೇ ವಿವರಣಾ ಪುಸ್ತಿಕೆ ಖರೀದಿಸಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ- ೦೮೩೫೨-೨೨೯೦೫೪ ಸಂಪರ್ಕಿಸಬಹುದಾಗಿದೆ
0 comments:
Post a Comment
Click to see the code!
To insert emoticon you must added at least one space before the code.