ನಿಮಿತ್ಯ ಡಾ. ವಿಷ್ಣು ಚಲನಚಿತ್ರೋತ್ಸವ
ಕೊಪ್ಪಳ. . ಡಿ.೩೦ರಂದು ಮುಂಜಾನೆ ೧೦ಕ್ಕೆ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ವಿಭಾಚಾರಿಟೇಬಲ್ ಟ್ರಸ್ಟ್ ಅರ್ಪಿಸುವ ಕರ್ನಾಟಕ ಸರಕಾರ ವಾರ್ತಾ ಇಲಾಖೆ, ಡಾ.ವಿಷ್ಣುವರ್ಧನ ಪ್ರತಿಷ್ಠಾನ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕೊಪ್ಪಳ ಜಿಲ್ಲಾ ಬೆಳ್ಳಿಮಂಡಲ ಶಾಖೆ ಸಹಯೋಗದೊಂದಿಗೆ ವಿಷ್ಣು ಅವರ ಅಭಿಮಾನಿ ದಿ.ರಮೇಶ ಅವರ ವೇದಿಕೆಯಲ್ಲಿ
ನಾಟಕಕಾರ ಎಸ್.ವಿ.ಪಾಟೀಲ ಗುಂಡೂರು ಚಿತ್ರೋತ್ಸವ ಉದ್ಘಾಟಿಸುವರು. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಮಾಜಿ ಅಧ್ಯಕ್ಷ, ಹೋರಾಟಗಾರ ಕೆ.ವಾಸುದೇವ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪದವಿ ಕಾಲೇಜಿನ ಪ್ರಾಚಾರ್ಯ ರಾಘವೇಂದ್ರಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರಿಶಂಕರಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಪತ್ರಕರ್ತ ಎಸ್. ಎ. ಗಫಾರ್, ಜಿ.ಪಂ.ಸದಸ್ಯ ವೀರಪ್ಪ ಕುಡಗುಂಟಿ, ರಂಗನಾಥ ಕೋಳೂರು, ವೀರ ಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು, ರಿಧಂ ಡ್ಯಾನ್ಸ್ ಅಕಾಡೆಮಿಯ ಬಸವರಾಜ ಮಾಲಗಿತ್ತಿ, ಚಲನ ಚಿತ್ರ ನಟ ಬಸವರಾಜ ಕೊಪ್ಪಳ, ಗ್ಲೋಬಲ್ ಡ್ಯಾನ್ಸ್ ಅಕಾಡೆಮಿಯ ರಮೇಶ, ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ, ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ
ಇದೇ ಸಂದರ್ಭದಲ್ಲಿ ದಿ.ವಿಷ್ಣು ಮತ್ತು ನಟಿ ವಿದ್ಯಾ ನಟಿಸಿರುವ ಸುಪ್ರಭಾತ ಚಲನಚಿತ್ರ ಪ್ರದರ್ಶನವಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಕಾಡೆಮಿಯ ಬೆಳ್ಳಿಮಂಡಲದ ಜಿಲ್ಲಾ ಸಂಚಾಲಕ ಮಂಜುನಾಥ ಜಿ.ಗೊಂಡಬಾಳ ಮತ್ತು ಜಿಲ್ಲಾ ಸಹ ಸಂಚಾಲಕ ರುದ್ರಪ್ಪ ಭಂಡಾರಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.