PLEASE LOGIN TO KANNADANET.COM FOR REGULAR NEWS-UPDATES


  -ಸಹಿಆಂದೋಲನ ಕಾರ್ಯಕ್ರಮ.
ಕೊಪ್ಪಳ :   ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಿಟ್ನಾಳ ಗ್ರಾಮ ಪಂಚಾಯತಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು  ಯುನಿಸೇಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗೂ ಗ್ರಾಮ ಪಂಚಾಯತ ಹಿಟ್ನಾಳ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು. ಜೊತೆಗೆ ವಿಶ್ವ ಮಕ್ಕಳ ಹಕ್ಕುಗಳ ಒಡಂಬಡಿಕೆ ಮಾಸಾಚರಣೆ, ವಿಶ್ವ ಏಡ್ಸ ದಿನಾಚರಣೆ, ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ಸಹಿ ಆಂದೋಲನ ಕಾರ್ಯಕ್ರಮವನ್ನು ಆನಂದ ಹಳ್ಳಿಗುಡಿ ನೇತೃತ್ವದಲ್ಲಿ ಯಶಸ್ವಿಗೋಳಿಸಲಾಯಿತು.
ಜಿಲ್ಲಾ ಪಂಚಾಯತ ಸದಸ್ಯರಾದ ರಾಘವೇಂದ್ರ ಹಿಟ್ನಾಳ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಾಬುಸಾಬ್ ಸೈಯದ್‌ಸಾಬ  ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ರಾಘವೇಂದ್ರ ಹಿಟ್ನಾಳ ರವರು ಪಾಲಕರಿಗೂ ಕೂಡಾ ಮಕ್ಕಳ ಹಕ್ಕುಗಳ ಬಗ್ಗೆ ಪಂಚಾಯತಿ ಹಾಗೂ ಸಂಬಂದ ಪಟ್ಟ ಇಲಾಖೆಯವರು ಗ್ರಾಮ ಸಭೆಗಳನ್ನುನೆಡೆಸಿ ಪಾಲಕರಿಗೂ ಕೂಡಾ ಅರಿವು ಮೂಡಿಸಬೇಕೆಂದು ಕರೆನೀಡಿದರು. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾಯೋಜನೆಯ ಕಾರ್ಯಗಳನ್ನು ಶ್ಲಾಗಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮೂಹ ಸಂಪನ್ಮೂಲ ಸಮನ್ವಯಾಧಿಕಾರಿ ಉಮೇಶ ಬಾಬು ಸುರ್ವೆ ಇಲಾಖೆಯ ಯೋಜನೆಗಳು ಫಲಕಾರಿಯಾಗಬೇಕಾದರೆ ಸಂಘಟನಾ ಕಾರ್ಯದೊಂದಿಗೆ ಸಮುದಾಯದವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ತಿಳಿಸಿದರು. ಮಕ್ಕಳು  ತಮ್ಮ ಎಲ್ಲಾ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳುವಂತೆ ತಿಳಿಸಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ಸೂಚಿಸಿದರು. 
ಬೇವಿನಹಳ್ಳಿ ಶಾಲೆ ಸಹ ಶಿಕ್ಷಕರಾದ ಲೋಕೇಶರವರು ಮಕ್ಕಳ ಹಕ್ಕುಗಳು, ಕಿಶೋರಿಯರ ಶಿಕ್ಷಣದ ಬಗ್ಗೆ ಸಭೆಗೆ ವಿವರಿಸಿದರು. ನಂತರದಲ್ಲಿ ಮಕ್ಕಳು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿ ಗ್ರಾಮ ಪಂಚಾಯತಿ ವ್ಯಾಪ್ತಿ ಶಾಲೆಬಿಟ್ಟಮಕ್ಕಳ ಬಗ್ಗೆ, ಆಗಿರುವ ಬಾಲ್ಯವಿವಾಗಳ ಕುರಿತು ಗ್ರಾಮ ಪಂಚಾಯತಿ ಕೈಗೊಂಡಿರುವ ಕ್ರಮಗಳೇನು? ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯಹಬ್ಬ ಆಚರಣೆಗಳಲ್ಲಿ ಜನಪ್ರತಿನಿಧಿಗಳು ಯಾಕೆ ಗೈರುಹಾಜರಾಗುತ್ತಾರೆ? ಎಂದು ಸಭೇಗೆ ಪ್ರಶ್ನಸಿದರು. ಜನಪ್ರತಿನಿದಿಗಳು ಉತ್ತರಿಸಿ ಬರುವ ದಿನಗಳಲ್ಲಿ ಈ ರೀತಿ ಯಾಗದಂತೆ ನೋಡಿಕೊಳ್ಳುವದಾಗಿ ಭರವಸೆ ಇತ್ತರು. ಮುಂದುವರೆದು ಶಾಲಾ ಮಕ್ಕಳು ತಮ್ಮ ಶಾಲೆಯಲ್ಲಿ ಅಗತ್ಯ ಸೌಲಭ್ಯಗಳಾದ ಶಾಲಾ ಹೆಣ್ಣುಮಕ್ಕಳ ಶೌಚಾಲಯ ದುರಾವಸ್ಥೆ, ಕುಡಿಯುವ ನೀರಿನ  ಸೌಲಭ್ಯ, ಆಟದ ಮೈದಾನ ಮತ್ತು ಆಟೋಪಕರಣಗಳು, ಅನಗತ್ಯ ಗೈರುಹಾಜರಾಗುತ್ತಿರುವ ಶಿಕ್ಷಕರಕುರಿತು ಕ್ರಮಕೈಗೊಳ್ಳುವಂತೆ ಹಾಗೂ ಶಾಲೆಯಲ್ಲಿರುವ ದುರಸ್ಥೆಗಳನ್ನು ಪೂರ್ಣಗೋಳಿಸಿಕೊಡನಬೇಕೆಂದು ಸಭೆಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಆಭಿವೃದಿ ಅಧಿಕಾರಿಗಳಾದ ಮಂಜುಳಾ ಮುದಗಲ್, ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಪಾರ್‍ವತಮ್ಮ ಉಪ್ಪಾರ, ಸದಸ್ಯರು ಗ್ರಾಮ ಪಂಚಾಯತಿ ವ್ಯಾಪ್ತಿ ಶಾಲೆ ಎಸ್.ಡಿ.ಎಂ.ಸಿ ಆದ್ಯಕ್ಷರು, ಸದಸ್ಯರು ಶಾಲಾ ಮುಖ್ಯೋಪಾದ್ಯಾಯರು, ಅಂಗನವಾಡಿ ಮೇಲ್ವಿಚಾರಕಿ ಮತ್ತು ಶಿಕ್ಷಕಿಯರು, ಕರುಣಾ ಟ್ರಸ್ಟನ ಪ್ರತಿನಿಧಿಗಳು ಊರಿನ ಗುರುಹಿರಿಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು. 
ಯುನೆಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಸಮುದಾಯ ಸಂಘಟಕರು ಆನಂದ ಹಳ್ಳಿಗುಡಿ ಕಾರ್ಯಕ್ರಮ ನಿರೂಪಿಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಮುದಾಯದವರು ಮುಂದಾಗಲು ಕರೆನಿಡಿದರು. ಉಮೇಶಬಾಬು ಸುರ್ವೆ ಅವರು ವಂದಿಸಿದರು.

30 Nov 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top