PLEASE LOGIN TO KANNADANET.COM FOR REGULAR NEWS-UPDATES


 ವಿಶ್ವದಾದ್ಯಂತ ಹರಡಿರುವ ಈ ಪಿಡುಗನ್ನು ಹೋಗಲಾಡಿಸಲು ಅನೇಕ ತಿಳುವಳಿಕೆಯ ಕಾರ್ಯಕ್ರಮ ನಡೆಯುತ್ತಿದ್ದು ಮಣಿಪಾಲದ ಸ್ಯಾಂಡ್ ಹಾರ್ಟ್ ಕಲಾವಿದರು ಮರಳ ಕಲಾಕೃತಿಯನ್ನು ರಚಿಸುವ ಮೂಲಕ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಈ ಮೂಲಕ ಜಾಗೃತಿ ಮೂಡಿಸಿದರು

ಮಣಿಪಾಲ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ್ , ವೆಂಕಿ ಪಲಿಮಾರು ಇವರನ್ನು ಒಳಗೊಂಡ ತಂಡ ಬೆಳಿಗ್ಗೆಯಿಂದಲೇ ಉಡುಪಿಯ ಮಲ್ಪೆ ಕಡಲ ಕಿನಾರೆಯಲ್ಲಿ ಈ ಬೃಹತ್ ಮರಳ ಕಲಾಕೃತಿಯನ್ನು ರಚಿಸಲು ಪ್ರಾರಂಭಿಸಿದ್ದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಇದು ಪೈನಲ್ ಟಚ್ ಪಡೆದುಕೊಂಡಿತು.

 ಸಾಕಷ್ಟು ಪ್ರವಾಸಿಗರು ಮಲ್ಪೆ ಬೀಚ್ ಸೌಂದರ್ಯ ಸವಿಯಲು ಬರುವುದರಿಂದ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಈ ಮೂಲಕ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ಈ ಮರಳ ಕಲಾಕೃತಿಯನ್ನು ಈ ಕಲಾವಿದರು ರಚಿಸಿದರು. ಡ್ರಾಗನ್ ಒಳಗೊಂಡ ಈ ಮರಳಕಲಾಕೃತಿಯಲ್ಲಿ ಮನುಷ್ಯ ಏಡ್ಸ್‌ಗೆ ತುತ್ತಾಗಿ ಹೇಗೆ ತನ್ನ ಜೀವನವನ್ನು ಹಾಳುಮಾಡುತ್ತಾನೆ ಹಾಗೂ ಏಡ್ಸ್ ತಡೆಗಟ್ಟಲು ಇರುವ ತಿಳುವಳಿಕೆಯನ್ನು ಮರಳ ಕಲಾಕೃತಿಯಲ್ಲಿ ತೋರಿಸಲಾಗಿದೆ.
world aids day
30 Nov 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top