ಕೊಪ್ಪಳ ಃ- ಪ್ರತಿಯೊಬ್ಬರು ತಾವು ಪಡೆದುಕೊಳ್ಳುವ ಶಿಕ್ಷಣದಿಂದ ಸಮಾಜ ಸರ್ವತೋಮುಖ ಅಭಿವೃದ್ದಿಗಾಗಿ ಅಥವಾ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಅವರ ಬಾಳು ಬೆಳಗುವ ದಾರಿದೀಪವಾಗಬೇಕು, ಹೊರತು ಶಿಕ್ಷಣ ಕೇವಲ ಹಣಗಳಿಕೆಗೆ ಸೀಮಿತವಾಗಬಾರದು ಎಂದು ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ಸಾಹಿತ್ಯ ಭವನದಲ್ಲಿ ಎ.ಜಿ.ಎಸ್.ಕೆ.ಸೊಸೈಟಿಯ ಮಿಲೇನಿಯಂ ಇನ್ಸ್‌ಟ್ಯೂಟ್ಯ ಆಪ್ ಮಾನ್ಯಜ್‌ಮೆಂಟ್‌ನ ವಾರ್ಷಿಕ ಉತ್ಸವದ ಅಮಾರಂಭದ ಉದ್ಘಾಟನೆ ನೇರವೇರಿಸಿ ಆಶೀರ್ವಚನ ನೀಡುತ್ತಿದ್ದರು.
ಮುಂಂದುವರೆದು ಮಾತನಾಡಿದ ಅವರು ಒಳ್ಳೆಯ ಮನುಷ್ಯನಾಗುವುದು ಮುಖ್ಯ. ಈ ದಿಶೆಯಲ್ಲಿ ಶಿಕ್ಷಕರು ಪ್ರಾಧ್ಯಾಪಕರು ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ ಕಲಿಸಿ ಈ ದೇಶದ ಒಳ್ಳೆಯ ನಾಗರಿಕರನ್ನಾಗಿ ನಿರ್ಮಾಣ ಮಾಡಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು. ಬದುಕಿನಲ್ಲಿ ಸೋಲಿನ ಸಂದರ್ಭದಲ್ಲಿ ಹೇಗೆ ಬದುಕಬೇಕೆಂದು ಕಲಿಸಬೇಕು. ಸೋಲು-ಗೆಲವಿನ ಸಮಾನವಾಗಿ ಸ್ವೀಕರಿಸುವ ಮನೋಬಾವ ಬೆಳೆಸಬೇಕು. ಶ್ರೀಮಂತರಾಗಲು ಶಿಕ್ಷಣ ಕಲಿಯುವ ಉದ್ದೇಶ ಇಟ್ಟುಕೊಳ್ಳಬಾರದು. ವಿಧ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವಂತ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಬೇಕೆಂದು ಶ್ರೀ ಗಳು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಎಂ.ಎಂ.ಪಾಟೀಲ್, ಬಳ್ಳಾರಿಯ ಡಾ.ಜಯಣ್ಣ, ವಿ.ಪಿ.ದುಗ್ಗಪ್ಪ, ನವೀನ ಗುಳಗಣ್ಣನವರ, ಗಂಗಾವತಿಯ ಬಿ.ಪ್ರಾಣೇಶ, ನರಸಿಂಹ ಜೋಷಿ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಆರ್. ನವಲಿಹಿರೇಮಠ, ಬಸವರಾಜ ಪುರದ, ಪ್ರಭು ಹೆಬ್ಬಾಳ,ಎಸ್.ಬಿ.ಪಾಟೀಲ್, ಸೇರಿದಂತೆ ಸಂಸ್ಥೆಯ ಕಾರ್ಯದರ್ಶಿ ಗಿರೀಶ ಕಣವಿ ಪಾಲ್ಗೋಂಡಿದರು. ಕಾರ್ಯಕ್ರಮದ ನಂತರ ಬಿ.ಪ್ರಾಣೇಶ್ ಹಾಗೂ ನರಸಿಂಹ ಜೋಷಿಯವರಿಂದ ನಗೆ ಹನಿ ಕಾರ್ಯಕ್ರಮ ಹಾಗೂ ಎಂ.ಬಿ.ಎ. ಬಿಬಿಎಂ. ವಿದ್ಯಾರ್ಥಿ ವೃಂದದಿಂದ ಸಾಂಸ್ಖೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.

0 comments:
Post a Comment
Click to see the code!
To insert emoticon you must added at least one space before the code.