ಕೊಪ್ಪಳ. ಫೆ. ೧. ಕೊಪ್ಪಳ-ಕಿನ್ನಾಳ, ಕೊಪ್ಪಳ-ಭಾಗ್ಯನಗರ ಹಾಗೂ ರೈಲ್ವೆ ಸ್ಷೇಷನ್ ರಸ್ತೆ ಡಾಂಬರೀಕರಣಕ್ಕೆ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಒತ್ತಾಸಿದ್ದಾರೆ.
ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕರೂ ಆಗಿರುವ ಮಂಜುನಾಥ ಜಿ. ಗೊಂಡಬಾಳ, ದಲಿತ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ದ್ಯಾಮಣ್ಣ ಮ್ಯಾದನೇರಿ, ಜಿಲ್ಲಾ ಉಪಾಧ್ಯಕ್ಷ ಮನೋಜಕುಮಾರ, ಸುರೇಶ ಕಿನ್ನಾಳ, ಭೀಮನಗೌಡ ಮಾಲಿಪಾಟೀಲ್ ಇತರರು ಪ್ರಕಟಣೆ ಮೂಲಕ ನಗರಸಭೆ ಹಾಗೂ ಜಿಲ್ಲಾ ಪಂಚಾಯತಗಳನ್ನು ಒತ್ತಾಸಿದ್ದಾರೆ. ಅದೇ ರೀತಿ ಕಿನ್ನಾಳ ಗೇಟ್ ೬೫ ಕ್ಕೆ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣ ಮಾಡಬೇಕು ಎಂದು "ಭಾಗೀಯ ರೈಲ್ವೆ ಇಲಾಖೆಯನ್ನು ಒತ್ತಾಸಿದ್ದಾರೆ. ಕಿನ್ನಾಳ ಗೇಟ್ ನಂ. ೬೫ ಕ್ಕೆ ಕಲ್ಯಾಣ ನಗರ, ಭಾಗ್ಯನಗರ, ಚಿಲವಾಡಗಿ, ಕಿನ್ನಾಳ, ಮಂಗಳೂರು "ಗೆ ಅನೇಕ ಊರುಗಳಿಗೆ ಸಂಪರ್ಕ ಏರ್ಪಡುತ್ತಿದ್ದು ಇದಕ್ಕೆ ಸೇತುವೆ ತುಂಬಾ ಅಗತ್ಯವಾಗಿದೆ ಆದ್ದರಿಮದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೇನೆ ಒತ್ತಾಸಿದೆ. ಅಲ್ಲದೇ ಈ ಕುರಿತು ಸೂಕ್ತ ಹೋರಾಟವನ್ನು ಸಹ ಮಾಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.