PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಜ.೨೫ : ಮತದಾರರು ಆಮಿಷಕ್ಕೆ ಒಳಗಾಗಿ ಮತಚಲಾಸಬಾರದು ಪ್ರಾಮಾಣಿಕ ನಿರಪೇಕ್ಷಿತರಾಗಿ ಮತಚಲಾಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಅವರು ಸಾರ್ವಜನಿಕರಿಗೆ ಕರೆನೀಡಿದ್ದಾರೆ.
ಜಿಲ್ಲಾ ಚುನಾವಣೆ ಕಚೇರಿಂದ ಸಾಹಿತ್ಯ ಭವನದಲ್ಲಿ. ಏರ್ಪಡಿಸಿಲಾಗಿದ್ದ ರ್‍ಟ್ರಾಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಇಂದು ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದಲ್ಲಿ. ಪ್ರಜ್ಞಾವಂತ ನಾಗರೀಕರ ಸಕ್ರೀಯ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಚುನಾತ ಪ್ರತಿ ನಿಧಿಗಳು ಜನಸಾಮಾನ್ಯರ ವಿಶ್ವಾಸಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಜನಸಾಮಾನ್ಯರು ಚುನಾತ ಪ್ರತಿನಿಧಿಗಳುನ್ನು ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಹಿಂದೆ ಸರಿಯುತ್ತಿದ್ದಾರೆ. ಕಡಿಮೆ ಮತದಾನವಾಗುತ್ತಿರುವುದರಿಂದ ಅಲ್ಪಮತ ಸರ್ಕಾರ ಅಸ್ತಿತ್ವಕ್ಕೆ ಬಂದು ಜನರ ಅಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗುತ್ತಿವೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಧೆಯೇ ಕುಸಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿದೆ. ವೈದ್ಯರು ಶಿಕ್ಷಕರು ಅಧ್ಯಾಪರು ಉನ್ನತ ಹುದ್ದೆಯಲ್ಲಿರುವರು ಮತ ಚಲಾಸಿದೆ ದೂರ ಉಳಿದು ಬಿಡುತ್ತಾರೆ, ಮತದಾರರು ಕೂಡ ಯಾವುದೇ ಅಶೆ ಆಮಿಷಗಳಿಗೆ ಒಳಗಾಗಿ ಮತಚಲಾಸುಬಾರದು ಪ್ರಾಮಾಣಿಕ ನಿರಪೇಕ್ಷಿತರಾಗಿ ಫಲಾಪೇಕ್ಷೆ ಇಲ್ಲದೆ ಮತಚಲಾಸಿ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಕರೆ ನೀಡಿದರು .
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಅವರು ಮಾತನಾಡಿ ಪ್ರಜಾತಂತ್ರ ವ್ಯವಸ್ಧೆಯಲ್ಲಿ ಜನಪರ ಆಡಳಿತ ಇರಬೇಕು, ಒಮ್ಮೆ ಚುನಾಯಿತರಾದ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿ ಕೊಳ್ಳುವ ಅಧಿಕಾರ ಮತದಾರರಿಗೆ ಇರುವುದಿಲ್ಲ, ಉತ್ತಮ ಗುಣ ನಡತೆ ಸಚ್ಚಾರಿತ್ರ್ಯವುಳ್ಳವರನ್ನೇ ಮತದಾರರು ಆರಿಸಿಕಳುಹಿಸಬೇಕು, ಆತ್ಮವನ್ನು. ಸ್ವಾಭಿಮಾನವನ್ನು ಮತದಾರರು ಮಾರಿಕೊಳ್ಳಬಾರದು, ಪ್ರಜಾತಂತ್ರ ವ್ಯವಸ್ಧೆಯಲ್ಲಿ ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳಲು ಬರುತ್ತಿಲ್ಲವೆಂದು ಪರಕೀಯರು ಅಡಿಕೊಳ್ಳುತ್ತಿದ್ದಾರೆ. ಭಾರತ ಸತ್ತರೆ ಯಾರು ಬದುಕಿಸುತ್ತಾರೆ ಎಂದು ಅವರು ವಿಷಾದಿಸಿದರು.
ಸರ್ಕಾರಿ ಪದವಿ ಮಹಾ ವಿದ್ಯಾಲಯದ ಉಪನ್ಯಾಸಕ ಪ್ರಭುನಾಯಕ ವಿಶೇಷ ಉಪನ್ಯಾಸ ನೀಡಿದರು, ಸಹಾಯಕ ಆಯುಕ್ತ ಶರಣಬಸಪ್ಪ. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ,ಬಿ ದೊಡ್ಡಮನಿ. ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಅಕಳವಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು,
ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಅವರು ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು ಇದೇ ಸಂದರ್ಭದಲ್ಲಿ ಬೂಥ್ ಮಟ್ಟದ ಅಧಿಕಾರಿಗಳಿಗೆ ಹಾಗೂ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸಿದರು. ದಿನಾಚರಣೆ ನಿಮಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾತು. ತಹಶೀಲ್ದಾರ್ ವಿಜಯ ಕುಮಾರ್ ಹೊನಕೇರಿ ಅವರು ಸ್ವಾಗತಿಸಿ ವಂದಿಸಿದರು.

25 Jan 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top