

ಕೊಪ್ಪಳ: ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಕಥೆಗಳನ್ನು ಬರೆಯಬೇಕು, ಸಮಾಜವನ್ನು ಎಚ್ಚರಿಸುವ ಕೆಲಸ ಕತೆಗಳಲ್ಲಿ ನಡೆಯಬೇಕು. ಸಾಹಿತ್ಯ ಸಮಾಜದ ಪ್ರತಿಬಿಂಬದಂತೆ ಹಾಗಾಗಿ ಅದನ್ನು ಬಹಳ ಎಚ್ಚರಿಕೆಯಿಂದ , ಜವಾಬ್ದಾರಿಯಿಂದ ರಚಿಸಬೇಕು ಎಂದು ಜಯಸುತೆ ಕಾವ್ಯನಾಮದಿಂದ ಖ್ಯಾತರಾಗಿರುವ ಶ್ರೀಮತಿ ಸ್ನೇಹಲತಾ ಜೋಷಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಎನ್ ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೩೫ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮ ತಂದೆಯವರು ನನ್ನ ಮೇಲೆ ಬಹಳ ಪ್ರಭಾವಿ ಬೀರಿದ್ದು ಅವರೂ ಸಹ ಸಾಹಿತಿಗಳಾಗಿದ್ದರಿಂದ ಬಾಲ್ಯದಿಂದಲೇ ಸಾಹಿತ್ಯದತ್ತ ಸೆಳೆತ ಉಂಟಾಗಿತ್ತು. ನಂತರದ ದಿನಗಳಲ್ಲಿ ಕಥೆ,ಕಾದಂಬರಿ, ಕವನಗಳನ್ನು ಬರೆಯಲು ಅವರೇ ಸ್ಪೂರ್ತಿ ಎಂದು ಅವರು ಹೇಳಿದರು.
ಈ ಸಲದ ಕವಿಸಮಯದಲ್ಲಿ ಹೊಸ ಪ್ರಯೋಗ ಹಮ್ಮಿಕೊಳ್ಳಲಾಗಿತ್ತು. ಈ ಸಲ ಕಥಾವಾಚನ ನಡೆಸಲಾಯಿತು. ಸ್ವರಚಿತ ಕಥೆಗಳನ್ನು ಕತೆಗಾರರು ವಾಚನ ಮಾಡಿದರು. ನಂತರ ಅತಿಥಿಗಳು ಆ ಕತೆಗಳ ಬಗ್ಗೆ ಮಾತನಾಡಿದರು. ಕಥೆಗಳ ಕುರಿತ ಚರ್ಚೆ ನಡೆಯಿತು. ಮಹೇಶ ಬಳ್ಳಾರಿ- ರಘುಪತಿ ರಾಘವ ರಾಜಾರಾಮ, ಶಿವಪ್ರಸಾದ ಹಾದಿಮನಿ-ತ್ಯಾಗ, ಪುಷ್ಪಲತಾ ಏಳುಬಾವಿ- ಅದೃಷ್ಟದ ರಾಣಿ, ಅರುಣಾ ನರೇಂದ್ರ- ರಮ್ಯಾ - ರಮೇಶ ಕಥೆಗಳನ್ನು ವಾಚನ ಮಾಡಿದರು. ಸ್ನೇಹಲತಾ ಜೋಷಿಯವರೂ ತಮ್ಮ ಕಥೆ ನಿಗೂಢದ ಸಾರಾಂಶ ಹೇಳಿದರು.
ಕಾರ್‍ಯಕ್ರಮದಲ್ಲಿ ವೀರಣ್ಣ ಹುರಕಡ್ಲಿ, ಮಲ್ಲಿಕಾರ್ಜುನ ಎಚ್. ವಾಗೀಶ ಪಾಟೀಲ್, ಎನ್.ಜಡೆಯಪ್ಪ, ಶಿವಾನಂದ ಹೊದ್ಲೂರ, ಬಸವರಾಜ ಶೀಲವಂತರ, ಸುಮತಿ ಹಿರೇಮಠ, ಸುದೀಂದ್ರ,ಸಮೀರ್ ಜೋಷಿ ಹಾಗೂ ಇನ್ನಿತರರು ಭಾಗವಹಿಸಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ ಮಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.
0 comments:
Post a Comment
Click to see the code!
To insert emoticon you must added at least one space before the code.