PLEASE LOGIN TO KANNADANET.COM FOR REGULAR NEWS-UPDATES



ಕಲ್ಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗ ಪ್ರತಿ ವರ್ಷ ನೀಡುವ ಕಾಯಕ ಸಮ್ಮಾನ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಯವರಿಗೆ ಪ್ರದಾನ ಮಾಡಲಾಯಿತು.ಸಾಹಿತ್ಯ, ಪತ್ರಿಕೋಧ್ಯಮ, ರಂಗಭೂಮಿ ಸೇವೆ, ಸಂಘಟನೆ, ಸಮಾಜ ಸೇವೆಗಳಲ್ಲಿ ವಿಠ್ಠಪ್ಪ ಗೋರಂಟ್ಲಿಯವರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ೧೨-೧೨-೨೦೧೦ ರಂದು ಕನ್ನಡ ಭವನ, ಸರದಾರ ವಲ್ಲಭಬಾಯಿ ಪಟೇಲ್ ವೃತ್ತ , ಕಲ್ಬುರ್‍ಗಿಯಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಡಾ.ಲತಾ ರಾಜಶೇಖರನ್ ಪ್ರಶಸ್ತಿ ಪ್ರದಾನ ಮಾಡಿದರು . ಅಧ್ಯಕ್ಷತೆಯನ್ನು ಹಿರಿಯ ಕವಿ ಜರಗನಹಳ್ಳಿ ಶಿವಶಂಕರ ವಹಿಸಿಕೊಂಡಿದ್ದರು. ಕೃಷ್ಣಾ ಸುಬೇದಾರ್, ದೌಲತರಾಯ್ ಪಾಟೀಲ್ ಮಾಹೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
14 Dec 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top