ಕೊಪ್ಪಳ ಸೆ.: ನೇಕಾರಿಕೆ ಕೈ-ಕಸುಬು ಉಳಿಸಲು ಸರ್ಕಾರ ಚೈತನ್ಯದಂತಹ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ನೇಕಾರಿಕೆಯಲ್ಲಿ ನಿರತರಾಗಿರುವವರು ಇದರ ಸೌಲಭ್ಯವನ್ನು ಪಡೆದುಕೊಂಡು, ಅದರ ಪುನರುಜ್ಜೀವನಕ್ಕೆ ಶ್ರಮಿಸುವಂತಾಗಬೇಕು ಎಂದು ಶಾಸಕ ಸಂಗಣ್ಣ ಕರಡಿ ಅವರು ಕರೆ ನೀಡಿದ್ದಾರೆ.
ಭಾಗ್ಯನಗರದ ನೇಕಾರ ಕಾಲೋನಿಯಲ್ಲಿ ಚೈತನ್ಯ ಯೋಜನೆಯಡಿ ಮಂಜೂರಾಗಿರುವ ಸಾಲ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಇಂದು ಅವರು ಮಾತನಾಡುತ್ತಿದ್ದರು. ನೇಕಾರಿಕೆ ಅಳಿವು ಉಳಿವಿನ ಪ್ರಶ್ನೆ ನಮ್ಮ ಮುಂದಿದೆ. ಇದರ ಉತ್ತೇಜನಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆಯಾದರೂ ನೇಕಾರರಿಗೆ ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲ. ಆಧುನಿಕ ಯುಗದಲ್ಲಿ ಯಾಂತ್ರೀಕೃತ ಮಗ್ಗಗಳು ಅಸ್ತಿತ್ವಕ್ಕೆ ಬಂದಿರುವುದರಿಂದ ಕೈಕಸುಬು ಮಾಡುವ ನೇಕಾರರ ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ. ಇದನ್ನು ಉತ್ತೇಜಿಸಲು ಸರ್ಕಾರ ಚೈತನ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಶೇ. ೫೦ ರಷ್ಟು ಸಾಲ ಮತ್ತು ಶೇ. ೫೦ ರಷ್ಟು ಸಹಾಯಧನವನ್ನು ಇದು ಒಳಗೊಂಡಿದೆ. ಇಂತಹ ಸೌಲಭ್ಯಗಳನ್ನು ಪಡೆದುಕೊಂಡು ನೇಕಾರರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಭಾಗ್ಯನಗರದಲ್ಲಿ ನೇಕಾರರ ಭವನ ನಿ"ಸುವ ಕೆಲಸ ನಡೆದಿದ್ದು, ಅದು ಅರ್ಧದಲ್ಲಿಯೇ ನಿಂತು ಹೋಗಿದೆ. ಅದಕ್ಕೆ ಪುನಃ ಚಾಲನೆ ನೀಡಲಾಗುವುದು. ಬೇಕಾದ ಹಣದ ನೆರವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಾಲ ಪಡೆದುಕೊಂಡಿರುವಂತಹ ನೇಕಾರರು, ಪ್ರಾಮಾಣಿಕವಾಗಿ ಮರುಪಾವತಿಯನ್ನೂ ಕೂಡ ಮಾಡುವುದು ಅಗತ್ಯವಾಗಿದೆ. ಇದರಿಂದ ಸರ್ಕಾರ ಇನ್ನುಳಿದವರಿಗೂ ಸಹಾಯ ಒದಗಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ನೀಡಿರುವ ಸಾಲವನ್ನು ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಸಂಗಣ್ಣ ಕರಡಿ ಅವರು ಕರೆ ನೀಡಿದರು.
ಇನ್ನೂ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ಆಸಕ್ತ ನೇಕಾರರು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅವರು ಕರೆನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ "ಠ್ಠಪ್ಪ ಗೋರಂಟ್ಲಿಯವರು ಮಾತನಾಡಿ, ನೇಕಾರರ ಸಮಸ್ಯೆಗಳನ್ನು ಸಭೆಯ ಮುಂದೆ ತೆರೆದಿಟ್ಟರು. ಸಭೆಯಲ್ಲಿ ಸ್ಥಳೀಯ ಮುಖಂಡರುಗಳಾದ ಜಿ.ಕೆ. ದಾನಪ್ಪ, ಬಸಣ್ಣ ನರಗುಂದ, ಹುಲಿಗೆಮ್ಮ ತಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮವ್ವ ಅಡ್ಡೆದಾರ ಕಾರ್ಯಕ್ರಮದ ಅಧ್ಯಕ್ಷತೆ ವ"ಸಿದ್ದರು. ರಮೇಶ್ ಹ್ಯಾಟಿ ಸ್ವಾಗತಿಸಿ, ವಂದಿಸಿದರು. ಮೂರು ಜನ ಫಲಾನುಭ"ಗಳಿಗೆ ಸಾಂಕೇತಿಕವಾಗಿ ಚೆಕ್‌ಗಳನ್ನು ಈ ಸಂದರ್ಭದಲ್ಲಿ "ತರಿಸಲಾತು.
0 comments:
Post a Comment
Click to see the code!
To insert emoticon you must added at least one space before the code.