.jpg)
ಕೊಪ್ಪಳ : ಕವಿತೆ ಬುದ್ದಿ , ಭಾವ, ಭಾಷೆಯಲ್ಲಿ ಮಿಂದು ಬರಬೇಕು, ಆಗ ಕವನಗಳಿಗೆ ಮೆರಗು ಬರುತ್ತದೆ. ಸಶಕ್ತ ಶಬ್ದಗಳನ್ನು ಉಪಯೋಗಿಸಿಕೊಂಡು ಕಾವ್ಯ ರಚನೆ ಮಾಡಬೇಕು. ಶಬ್ದಗಳು ನೇರವಾಗಿ ಹೃದಯಕ್ಕೆ ತಟ್ಟುವಂತಿರಬೇಕು. ಕವನ ರಚನೆಗೆ ಬೇಕಾದ ಶಬ್ದ ಸಂಪತ್ತು ಸತತ ಓದಿನಿಂದ ಬರುತ್ತದೆ. ಹೀಗಾಗಿ ಕವಿಗಳು ಅಧ್ಯಯನ ಶೀಲರಾಗಬೇಕು. ಭಾಷೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಹೇಳಿದರು. ಅವರ ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೧ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮನಸ್ಸು ಮುಟ್ಟುವ, ಮನಸ್ಸಿನ ಕದತಟ್ಟುವ ಭಾಷೆಯೇ ಕಾವ್ಯ . ಇದನ್ನು ಸಶಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಕಾವ್ಯ ಎಂದರೇನು, ಸಾಹಿತ್ಯ ಎಂದರೇನು ಎನ್ನುವಂತಹ ನೂರಾರು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸಮಾಜವನ್ನು ತೆರೆದಿಡುವ , ಸರಿದಾಗಿ ಯಾವುದೆಂದು ತೋರುವುದು ಕಾವ್ಯದ ಕೆಲಸವಾಗಬೇಕು. ತಿದ್ದುವದು ಸಾಧ್ಯವಾಗದಿದ್ದರೂ, ಸರಿದಾರಿ ತೋರುವ ಕೆಲಸ ಸಾಹಿತ್ಯ ಮಾಡಬೇಕು ಎಂದರು.
ಕವಿಸಮಯದಲ್ಲಿ ಇತ್ತೀಚಿಗೆ ನಿಧನರಾದ ಪಂಡಿತ ಪುಟ್ಟರಾಜ ಗವಾಯಿಗಳ ಆತ್ಮಕ್ಕೆ ಶಾಂತಿಯನ್ನು ಕೋರಿ ೧ ನಿಮಿಷ ಮೌನ ಆಚರಿಸಲಾಯಿತು. ನಂತರ ಅವರ ಬಗ್ಗೆ ಮುನಿಯಪ್ಪ ಹುಬ್ಬಳ್ಳಿ, ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಶಿ.ಕಾ.ಬಡಿಗೇರ- ಹಾಯ್ಕುಗಳನ್ನು, ವೀರಣ್ಣ ಹುರಕಡ್ಲಿ- ಗದುಗಿನ ಗಂದರ್ವ, ಶಿವಪ್ರಸಾದ ಹಾದಿಮನಿ- ನಾವೆಂಥ ಜನ, ಮಹೇಶ ಬಳ್ಳಾರಿ= ಭವತಿ ಭಿಕ್ಷಾಂದೇಹಿ, ಡಾ.ಮಹಾಂತೇಶ ಮಲ್ಲನಗೌಡರ- ಗುರು ಪುಟ್ಟರಾಜ, ಪುಷ್ಪಲತಾ ಏಳುಬಾವಿ- ಹುಡುಕಾಟ, ಜಡೆಯಪ್ಪ ಎನ್.- ಬಡತನ, ಎ.ಪಿ.ಅಂಗಡಿ- ನಾವು ಸೈನಿಕರು, ಜಿ.ಎಸ್.ಬಾರಕೇರ- ಡಾ.ಪುಟ್ಟರಾಜ ಗವಾಯಿ, ಸಿರಾಜ್ ಬಿಸರಳ್ಳಿ- ಸಾಕಿಯ ಪದ್ಯ, ಲಕ್ಷ್ಮೀ- ಶಿಕ್ಷಕಿ, ಅನ್ನದ ಬೆಲೆ, ವಿಠ್ಠಪ್ಪ ಗೋರಂಟ್ಲಿ- ಪುಟ್ಟನಾದವನೇ ದೊಡ್ಡವನಾಗುವನು, ಮೆಹಮೂದಮಿಯಾ-ಚಲನಶೀಲತ್ವ, ಕೆಂಚಪ್ಪ ಹಾಲವರ್ತಿ- ಯಾರಿಗಾಗಿ, ಮುನಿಯಪ್ಪ ಹುಬ್ಬಳ್ಳಿ- ಮಹಾತ್ಯಾಗಿ ಕವನಗಳನ್ನು ವಾಚನ ಮಾಡಿದರು.
ಮುನಿಯಪ್ಪ ಹುಬ್ಬಳ್ಳಿ ಕವನಗಳ ಕುರಿತು ಮಾತನಾಡಿದರು. ನಂತರ ಮಹಾಕಾವ್ಯಗಳಲ್ಲಿನ ಬಂಡಾಯದ ಬಗ್ಗೆ ಮಾತನಾಡಿದರು. ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ನಾಗರಾಜ ಬೆಣಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿ.ಕಾ.ಬಡಿಗೇರ ಸ್ವಾಗತಿಸಿ ಮಹೇಶ ಬಳ್ಳಾರಿ ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
0 comments:
Post a Comment
Click to see the code!
To insert emoticon you must added at least one space before the code.