ಕೊಪ್ಪಳ : ನಗರದಲ್ಲಿ ಮೂಲ ಭೂತಸೌಲಭ್ಯಗಳಿಗಾಗಿ ಪ್ರತಿಭಟನೆ ಮಾಡುವವರು, ಘೇರಾವ್ ಮಾಡುವರು, ದಿಕ್ಕಾರ ಕೂಗುವರೇ ಹುಷಾರಾಗಿರಿ ! ನಿಮ್ಮನ್ನು ಬಂಧಿಸಿ ಕೈಕೊಳ ಸಮೇತ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ರಸ್ತೆ ಅಗಲೀಕರಣ ಸಂಬಂಧ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಲಯಕ್ಕೆ ಕೈಕೊಳ ಸಮೇತ ಹಾಜರು ಪಡಿಸಲಾಗಿದೆ. ಈ ಘಟನೆಯನ್ನು ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಟನೆಗಳವರು ಖಂಡಿಸಿದ್ದಾರೆ. ಕ್ರಿಮಿನಲ್ ಗಳಂತೆ ಕರವೇ ಕಾರ್ಯಕರ್ತರನ್ನು ನಡೆಸಿಕೊಂಡಿರುವುದು ಜಿಲ್ಲೆಯ ವಿವಿದೆಡೆ ಪ್ರತಿಭಟನೆ, ಧರಣಿ,ಪ್ರತಿಕೃತಿ ದಹನ ಗಳು ನಡೆದಿವೆ.
ಕರವೇ ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ ಸೇರಿದಂತೆ 15 ಜನರನ್ನು ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಕ್ಕೆ ಹಾಜರು ಪಡಿಸಿದಾಗ ಕೈಕೊಳ ತೊಡಿಸಲಾಗಿತ್ತು. ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ.
0 comments:
Post a Comment
Click to see the code!
To insert emoticon you must added at least one space before the code.