PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ನಗರದ ಮೂರಾರ್ಜಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬುಡ್ಡೆಪ್ಪ ಎನ್ನುವ ವಿದ್ಯಾರ್ಥಿ ರೈಲಿನಡಿ ಸಿಕ್ಕು ಸಾವನ್ನಪ್ಪಿದ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಬಾಲಕನ ಪೋಷಕರು ಶಾಲೆಯ ಪ್ರಾಂಶುಪಾಲ, ಸಿಬ್ಬಂದಿ ಮತ್ತು ಶಿಕ್ಷಕರ ಮೇಲೆ ಹಲ್ಲೆ ಮಾಡಿದ್ದಾರೆ.

ಶಾಲೆಯಲ್ಲಿಯ ವಿಪರೀತ ಕಿರುಕುಳದಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ವಿವಿದ ಸಂಘಟನೆಗಳವರು ಮತ್ತು ಬಾಲಕನ ಪೋಷಕರು ಆರೋಪಿಸಿ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಕ್ತ ಬಂದೋಬಸ್ತ ವ್ಯವಸ್ಥೆ ಮಾಡಿದರು.

ವಸತಿ ಶಾಲೆಯಲ್ಲಿ ಗಂಡು ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದರಿರುವುದರಿಂದ ಎಲ್ಲರೂ ಬಯಲಿಗೆ ಹೋಗುತ್ತಾರೆ. ಹೀಗೆ ಹೋದಾಗ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆಯಾದರೂ, ಬಾಲಕ ಆತ್ಮಹತ್ಯೆಯ ಉದ್ದೇಶದಿಂದಲೇ ರೈಲಿನಡಿ ಬಿದ್ದಿದ್ದಾನೆ ಎಂದೂ ಹೇಳಲಾಗುತ್ತಿದೆ.

ಶೌಚಾಲಯದ ವ್ಯವಸ್ಥೆ ಮಾಡಲು ಸಿದ್ದರಿಲ್ಲದ ಕಟ್ಟಡದಲ್ಲಿಯೇ ಇರುವ ಅನಿವಾರ್ಯ ಪರಿಸ್ಥಿತಿ ಇದೆಯೇ? ನಗರದಲ್ಲಿ ಎಲ್ಲಿಯೂ ಕಟ್ಟಡಗಳಿಲ್ಲವೇ? ಸಂಬಂಧಿಸಿದವರು ಪರಿಶೀಲಿಸಲಿ.

27 Jul 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top