PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಸಾಕಷ್ಟು ವಿರೋಧದ ನಡುವೆಯು ಕರ್ನಾಟಕ ಸರಕಾರ ಗೋಹತ್ಯೆ ಮತ್ತು ಜಾನುವಾರು ರಕ್ಷಣೆ ಕಾಯ್ದೆ ೧೯೬೪ಕ್ಕೆ ತಿದ್ದುಪಡಿ ಮಾಡಿ ಜಾನುವಾರು ಹತ್ಯೆ ನಿಷೇದ ಹಾಗೂ ಸಂರಕ್ಷಣಾ ಕಾಯ್ದೆ ೨೦೧೦ನ್ನು ವಿಧಾನಸಭೆಯಲ್ಲಿ ಅಂಗೀಕಾರ ಪಡೆದು ರಾಜ್ಯಪಾಲರ ಅನುಮೋದನೆಗೆ ತರುವ ತರಾತುರಿಯಲ್ಲಿದೆ.ಶೇ.೮೦ರಷ್ಟು ಜನರ ಆಹಾರ ಹಕ್ಕನ್ನು ಕಿತ್ತುಕೊಂಡು ಅನ್ಯಾಯ ಮಾಡಿದಂತಾಗುತ್ತದೆ. ಇದಕ್ಕೆ ರಾಜ್ಯಪಾಲರು ಅನುಮೋದಿಸಬಾರದು ಎಂದು ಆಗ್ರಹಿಸಿ ಕೊಪ್ಪಳದ ಆಹಾರ ಹಕ್ಕು ರಕ್ಷಣೆ ಹೋರಾಟ ವೇದಿಕೆ ಮತ್ತು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟ ನಗರದಲ್ಲಿಂದು ಪ್ರತಿಭಟನೆ ಮತ್ತು ರಾಜ್ಯ ಸರಕಾರದ ಪ್ರತಿಕೃತಿ ದಹನ ಕಾರ್‍ಯಕ್ರಮ ಹಮ್ಮಿಕೊಂಡಿತ್ತು.
ಸಾಹಿತ್ಯಭವನದಿಂದ ಆರಂಭಗೊಂಡ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಸರಕಾರದ ಪ್ರತಿಕೃತಿಯನ್ನು ರಸ್ತೆಗುಂಟ ಎಳೆದುಕೊಂಡು ಸರಕಾರಕ್ಕೆ ದಿಕ್ಕಾರ ಕೂಗಿದರು. ಅಲ್ಪಸಂಖ್ಯಾತರು ಮತ್ತು ದಲಿತರ, ಹಿಂದುಲಿದ ವರ್ಗದವರ ಆಹಾರವನ್ನು ಕಸಿದುಕೊಂಡು ಅವರ ಮೇಲೆ ದಬ್ಬಾಳಿಕೆ ನಡೆಸಲು ಹವಣಿಸುತ್ತಿರುವ ಈ ಕಾನೂನಿಂದಾಗಿ ಸಮಾಜದಲ್ಲಿ ಇಲ್ಲದ ಅಪರಾಧಿಗಳನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಇದನ್ನು ರಾಜ್ಯಪಾಲರು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು. ಬಸ್ ನಿಲ್ದಾಣದ ಎದುರು ಪ್ರತಿಕೃತಿ ದಹನದ ನಂತರ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ವಿಠ್ಠಪ್ಪ ಗೋರಂಟ್ಲಿ, ಎಐಟಿಯುಸಿಯ ಬಸವರಾಜ ಶೀಲವಂತರ, ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆಯ ಮೈಲಪ್ಪ ಬಿಸರಳ್ಳಿ, ಆಹಾರ ಹಕ್ಕು ರಕ್ಷಣೆ ಹೋರಾಟ ವೇದಿಕೆಯ ಸೈಯದ್ ಗೌಸ್ ಪಾಷಾ, ಹೋರಾಟಗಾರ ಹೇಮರಾಜ ವೀರಾಪೂರ ಇನ್ನಿತರರು ಮಾತನಾಡಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಹನುಮಂತಪ್ಪ ಮ್ಯಾಗಳಮನಿ, ಸಿರಾಜ್ ಬಿಸರಳ್ಳಿ, ಬಸವರಡ್ಡಿ ಶಿವನಗೌಡ್ರ, ರಾಜು ಎಂ.ಬೆಲ್ಲದ ಡಿಎಸ್ ಎಸ್ ಮುಖಂಡರು, ನಾಗರಾಜ ಚಲುವಾದಿ ದಲಿತ ಸೇವಾ ಸಮಿತಿ, ಶಂಕ್ರಪ್ಪ ವಾಲ್ಮಿಕಿ ದಲಿತ ಸೇವಾ ಸಮಿತಿ, ನನ್ನೂಸಾಬ ನೀಲಿ ಎ ಐಕೆ ಎಸ್,ಸುಂಕಪ್ಪ ಕದರಿ ಗಾಂಧಿನಗರ ಸ್ಲಂವಾಸಿಗಳ ಹಿತರಕ್ಷಣಾ ಸಮಿತಿ, ಗಾಳೆಪ್ಪ ಮುಂಗೋಲಿ ಎ ಐ ವಾಯ್ ಎಫ್, ಟಿಯುಸಿಐನ ಬಸವರಾಜ್ ನರೇಗಲ್, ಮಖಬೂಲ್ ರಾಯಚೂರ ಅಟೋ ಯುನಿಯನ್, ಶಿವಾನಂದ ಹೊದ್ಲೂರ ವೀರಕನ್ನಡಿಗ ಸಂಘ, ಅಬ್ದುಲ್ ಗಫಾರ್ ಸಾಬ ಬೇಪಾರಿ, ಪೀರಸಾಬ ಬೆಳಗಟ್ಟಿ, ಅಬ್ದುಲ್ ವಹಾಬ್ , ನೂರುಲ್ಲಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
14 Jul 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top