PLEASE LOGIN TO KANNADANET.COM FOR REGULAR NEWS-UPDATES


ವಿಧಾನಸೌಧದಲ್ಲಿ ಥೇಟ್ ಗೂಂಡಾಗಳಂತೆ ವರ್ತಿಸಿ, ಕರ್ನಾಟಕ ಸಮಸ್ತ ಜನತೆಗೆ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡ ಸಚಿವ ಶ್ರೀರಾಮುಲು, ಜನಾರ್ಧನರೆಡ್ಡಿಉ, ಕರುಣಾಕರಡ್ಡಿ ಇವರುಗಳನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಹಾಗೂ ಶಾಸಕ ಸುರೇಶ ಬಾಬು ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಕೊಪ್ಪಳದ ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ಕಂಡರಿಯದಂಥ ಕೆಟ್ಟ ರೀತಿಯಲ್ಲಿ ಗಣಿಕಳ್ಳರು ನಡೆದುಕೊಂಡಿದ್ದಾರೆ. ಜನರ ಸಮಸ್ಯೆಗಳ ಹಾಗೂ ಬೇಕು ಬೇಡಗಳ ಕುರಿತಂತೆ ಗಂಭೀರವಾಗಿ ಚಿಂತಿಸಿ ತೀರ್‍ಮಾನ ತೆಗೆದುಕೊಳ್ಳಬೇಕಾದ ಸಚಿವರುಗಳೇ , ವಿಧಾನಸೌದದಲ್ಲಿ ಕಾಲ್ಕೆದರಿ ಜಗಳಕ್ಕಿಳಿದರೆ, ಜನಸಾಮಾನ್ಯರ ಗತಿ ಅದೇನಾದಿತು ನೀವೇ ಲೆಕ್ಕ ಹಾಕಿ. ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಂಬಿಕೆಗಳಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಗೂಂಡಾ ಸಚಿವರನ್ನು ಸಂಪುಟದಿಂದ ಕೈಬಿಡಬೇಕು . ಶಾಸಕ ಸುರೇಶ ಬಾಬು ವಿರುದ್ದ ಕ್ರಮಕೈಗೊಳ್ಳುವ ಮೂಲಕ ವಿಧಾನಸೌದದ ಘನತೆಯನ್ನು ಎತ್ತಿ ಹಿಡಿಯಬೇಕು, ಕರ್ನಾಟಕದಲ್ಲಿನ ಶಾಂತಿ ನೆಮ್ಮದಿಗೆ ಭಂಗ ತರುವ ಬಳ್ಳಾರಿಯ ಗಣಿಗಳ್ಳರನ್ನು ಸಂಪುಟದಿಂದ ಕೈಬಿಡದಿದ್ದಲ್ಲಿ ನಂಬಿಕೆದ್ರೋಹ ಸರಕಾರದ ವಿರುದ್ದ ಜನ ಬೀದಿಗಿಳಿಯಬೇಕಾಗುತ್ತದೆಂದು ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

ಬಸವರಾಜ ಶೀಲವಂತರ ಕಾರ್‍ಯದರ್ಶಿ ಸಿಪಿಐ ಜಿಲ್ಲಾ ಮಂಡಳಿ,ಕೊಪ್ಪಳ, ವಿಠ್ಠಪ್ಪ ಗೋರಂಟ್ಲಿ ,ಮೈಲಪ್ಪ ಬಿಸರಳ್ಳಿ, ಹೆಚ್ ಆರ್ ಎಫ್‌ಡಿ ಎಲ್ -ಕೆ ಜಿಲ್ಲಾ ಸಂಚಾಲಕರು, ಎಸ್.ಎ.ಗಫಾರ್ ಜಿಲ್ಲಾ ಪ್ರದಾನ ಕಾರ್‍ಯದರ್ಶಿ ಎ ಐಟಿಯುಸಿ ಕೊಪ್ಪಳ, ಶರಣಪ್ಪ ಎಂ.ಕೊತಬಾಳ, ಗಾಳೆಪ್ಪ ಮುಂಗೋಲಿ ಎ ಐವಾಯ್‌ಎಫ್ ಮುಖಂಡರು, ಹನುಮಂತಪ್ಪ ಮ್ಯಾಗಳಮನಿ, ಶಿವಾನಂದ ಹೊದ್ಲೂರ, ಮಕಬೂಬ ರಾಯಚೂರ , ನನ್ನುಸಾಬ ನೀಲಿ, ಹುಸೇನ್ ಪಾಷಾ

14 Jul 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top