ಕೊಪ್ಪಳ : ಕವಿಯಾದವನು ನಿರಾಶಾವಾದಿಯಾಗಬಾರದು ಸಮಾಜದಲ್ಲಿ ಕೆಟ್ಟದರ ಜೊತೆಗೆ ಒಳ್ಳೆಯದು ಯಾವತ್ತೂ ಇರುತ್ತದೆ. ಆಶಾವಾದಿ ಕವಿ ಉತ್ತಮ ಸಮಾಜ ನಿರ್ಮಾಪಕನಾಗುತ್ತಾನೆ ಎಂದು ಸರಕಾರಿ ಅಭಿಯೋಜಕ ಮತ್ತು ಸರಕಾರಿ ವಕೀಲರಾದ ಬಿ.ಎಸ್.ಪಾಟೀಲರು ಹೇಳಿದರು.ಅವರು ಕವಿಸಮೂಹ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವನಗಳ ವಿಮರ್ಶೆ ಮಾಡುತ್ತ ಮಾತನಾಡುತ್ತಿದ್ದರು.
ಕುಲಾಂತರಿ ಎಂಬ ವಿಷಯದ ಮೇಲೆ ಕವನ ಮಂಡಿಸಿದ ವಿವಿದ ಕವಿಗಳ ಕವನಗಳ ವಿಮರ್ಶೆ ಮಾಡಿದ ಅವರು ಬಿ.ಎಸ್.ಪಾಟೀಲರು ಕುಲಾಂತರಿ ತಳಿಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ನೀ ಮನಸು ಮಾಡಿದರೆ ಜಡೆಯಪ್ಪ, ಕುಲಾಂತರಿ-ಮಹೇಶ ಬಳ್ಳಾರಿ,ಬಸವಣ್ಣ- ಗವಿಸಿದ್ದಪ್ಪ ಬಾರಕೇರ, ಕಲ್ಯಾಣದ ಬೆಳಕು-ಶ್ರೀನಿವಾಸ ಚಿತ್ರಗಾರ, ನಾನು -ಡಾ.ಮಹಾಂತೇಶ ಮಲ್ಲನಗೌಡರ, ಬಡವಾಗುತಿದೆ ನಿಸರ್ಗ- ಪುಷ್ಪಲತಾ ಏಳುಬಾವಿ, ಸ್ನೇಹ- ಮಂಜುಳಾ, ವರ್ತಮಾನ ಕುಲಾಂತರಿ-ವೀರಣ್ಣ ಹುರಕಡ್ಲಿ, ದಂಡು-ಸಿರಾಜ್ ಬಿಸರಳ್ಳಿ, ಕುಲಾಂತರಿ- ವಿಠ್ಠಪ್ಪ ಗೋರಂಟ್ಲಿ ಇವು ಆಯಾ ಕವಿಗಳು ವಾಚಿಸಿದ ಕವನಗಳು. ಕುಲಾಂತರಿ ತಳಿಗಳ ಬಗ್ಗೆ , ಕುಲಾಂತರಿಯ ಬಗ್ಗೆ ವಿರೋಧವಿಲ್ಲ. ಅದು ಹೀಗಿರುವ ರೂಪ ಬದಲಿಸಿಕೊಂಡು ರೈತರಿಗೆ , ಜನರಿಗೆ ಉಪಯೋಗವಾಗುವಂತೆ ಬಂದರೆ ಸ್ವಾಗತವಿದೆ ಎಂದು ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಮಹೇಶ ಬಳ್ಳಾರಿ ರಚಿಸಿದ್ದ ಕುಲಾಂತರಿ ಎಂಬ ಕವಿತೆಯು ವಾರದ ಕವಿತೆಯಾಗಿ ಆಯ್ಕೆಗೊಂಡು. ಎಲ್ಲರಿಂದ ಮೆಚ್ಚುಗೆ ಪಡೆಯಿತು. ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ಹುಸೇನ್ ಪಾಷಾ,ಶಿ.ಕಾ.ಬಡಿಗೇರ ಇನ್ನಿತರರು ಭಾಗವಹಿಸಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
0 comments:
Post a Comment
Click to see the code!
To insert emoticon you must added at least one space before the code.