ಕೊಪ್ಪಳ ಏ. ೦೭ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಐ.ಇ.ಸಿ ಕಾರ್ಯಕ್ರಮದಡಿ ರೋಜಗಾರ ದಿನವನ್ನು ತಳಕಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಎಸ್.ಸಿ ಕಾಲೋನಿಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳಬಹುದಾದ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಾದ ನಮ್ಮ ಹೊಲ ನಮ್ಮ ದಾರಿ, ಕೃಷಿ ಕಣ, ಆಟದ ಮೈದಾನ ಅಂಗನವಾಡಿ ಕಟ್ಟಡಗಳು, ಚೆಕ್ ಡ್ಯಾಮ್ ನಿರ್ಮಾಣ ಸ್ಮಶಾನ ಅಭಿವೃದ್ಧಿ ಪಡಿಸುವುದು, ಚರಂಡಿ ನಿರ್ಮಾಣ ಸೇರಿದಂತೆ ದನದ ದೊಡ್ಡಿ, ಕುರಿ ದೊಡ್ಡಿ, ವೈಕ್ತಿಕ ಇಂಗುಗುಂಡಿ, ಎರೆಹುಳು ಸಾಕಾಣಿಕೆ ತೊಟ್ಟಿ, ಆಶ್ರಯ ಯೋಜನೆಯಡಿ ನಿರ್ಮಿಸಿಕೊಳ್ಳುವ ಮನೆಗಳಿಗೆ ಹೆಚ್ಚುವರಿಯಾಗಿ ಉದ್ಯೋಗ ಖಾತರಿ ಯೋಜನೆಯಿಂದ ೯೦ ಮಾನವ ದಿನಗಳ ಅವಕಾಶವಿರುತ್ತದೆ. ಅಲ್ಲದೆ ಸಮುದಾಯ ಕಾಮಗಾರಿಗಳಲ್ಲಿ ಕೂಲಿಕಾರರು ತಮ್ಮನ್ನು ತೊಡಗಿಸಿಕೊಂಡು ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಅಶೋಕ ರಾಂಪೂರ, ಕಾಯಕ ಬಂಧುಗಳು, ಗ್ರಾ.ಪಂ ಸಿಬ್ಬಂಧಿಗಳು, ಐ.ಇ.ಸಿ. ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.