PLEASE LOGIN TO KANNADANET.COM FOR REGULAR NEWS-UPDATES

ವಿಶ್ವದ ಹಿರಿಯಜ್ಜ, ಶತಾಯುಷಿ ಯಸುತರೊ ಕ್ಯೊಡಿ ಅವರು ಮಂಗಳವಾರ ಜಪಾನ್‌ನಲ್ಲಿ ನಿಧನರಾಗಿದ್ದಾರೆ. ಕ್ಯೊಡಿ ಅವರು 112 ವರ್ಷ, 312 ದಿನ ಬದುಕಿದ್ದರು. ರೈಟ್‌ ಸಹೋದರರು ವಿಮಾನ ಆವಿಷ್ಕಾರಕ್ಕೆ ಮುನ್ನುಡಿ ಬರೆಯುವ ಕೆಲವೇ ತಿಂಗಳುಗಳ ಹಿಂದೆ ಅಂದರೆ, 1903, ಮಾರ್ಚ್‌ 13 ರಂದು ಜಪಾನಿನ ತ್ಸುರ್ಗಾ ಫುಕುಯಿ ಪ್ರಾಂತ್ಯದಲ್ಲಿ ಕ್ಯೊಡಿ ಜನಿಸಿದ್ದರು. ಕ್ಯೂಡಿ ಅವರಿಗೆ 7 ಮಕ್ಕಳು, 9 ಮೊಮ್ಮಕ್ಕಳು ಇದ್ದಾರೆ. ಜಪಾನಿನವರೇ ಆದ ವಿಶ್ವದ ಹಿರಿಯ ವ್ಯಕ್ತಿ, ಶತಾಯುಷಿ ಸಕಾರಿ ಮೊಮೊಯಿ ಕಳೆದ ಜುಲೈನಲ್ಲಿ ಮೃತಪಟ್ಟಿದ್ದರು. ಮೊಮೊಯಿರವರು 112 ವರ್ಷ, 150 ದಿನಗಳ ಕಾಲ ಬದುಕಿದ್ದರು. ಗಿನ್ನಿಸ್‌ ವಿಶ್ವದಾಖಲೆ ವೆಬ್‌ಸೈಟ್‌ ಪ್ರಕಾರ ಸದ್ಯ ಬದುಕಿರುವ ವಿಶ್ವದ ಹಿರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಅಮೆರಿಕದ ಸೂಸನ್ನಾ ಮುಷಟ್‌ ಜೋನ್ಸ್‌ ಮುಂಚೂನಿಯಲ್ಲಿದ್ದು ಅವರಿಗೆ 116 ವರ್ಷ ವಯಸ್ಸಾಗಿದೆ.

20 Jan 2016

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top