ಕೊಪ್ಪಳ ಜ ೩೦ ಕಳೆದ ಬಾರಿ ಅತ್ಯಲ್ಪ ಮತದಿಂದ ಸೋಲು ಅನುಭವಿಸಿದ ರಾಜಶೇಖರ ಅಂಗಡಿ ಈ ಬಾರಿ ಗೆಲ್ಲುವುದು ಸೂರ್‍ಯ ನಿತ್ಯ ಉದಯಿಸಿದಷ್ಟೆ ನಿಶ್ಚಿತ ಎಂದು ಸಹಕಾರ ಮಹಾ ಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಕಸಾಪ ಅಭ್ಯರ್ಥಿ ರಾಜಶೇಖರ ಅಂಗಡಿ ಪರವಾಗಿ ಕೊಪ್ಪಳ ಹಾಗು ಯಲಬುರ್ಗಾ ತಾಲೂಕಿನ ತಳಕಲ್ಲಿನಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಉತ್ತಮ ಸಂಘಟಕನಾದ ರಾಜಶೇಖರ ಅಂಗಡಿ ೨ ದಶಕಗಳ ಕಾಲ ಕಸಾಪದೊಂದಿಗೆ ನಿಕಟ ಸಂಬಂಧ ಹೊಂದಿದ್ದು ಕಸಾಪ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅನುಭವವಿದೆ. ಕಳೆದ ಬಾರಿ ಸ್ಪರ್ಧಿಸಿದ್ದಾಗ ಅತ್ಯಲ್ಪ ಮತಗಳ ಹಿನ್ನಡೆ ಅನುಭವಿಸಿದ್ದು ಈಗ ಈ ಹಿನ್ನಡೆಗೆ ಕಾರಣವನ್ನು ಅರ್ಥ ಮಾಡಿಕೊಂಡು ಮತ್ತೆ ಕನ್ನಡದ ಸೇವೆ ಸಿದ್ದನಾಗಿದ್ದಾನೆ. ನಮ್ಮ ಬಣದ ಒಮ್ಮತದ ಅಭ್ಯರ್ಥಿಯಾಗಿರುವ ರಾಜಶೇಖರ ಪರವಾಗಿ ಜಿಲ್ಲೆಯಾದ್ಯಂತ ಅಜೀವ ಸದಸ್ಯರ ಒಲವು ಇದ್ದು ಈ ಅಲೆಯಿಂದಾಗಿ ರಾಜಶೇಖರ ಅತ್ಯಧಿಕ ಮತಗಳಿಂದ ಆಯ್ಕೆಯಾಗುತ್ತಾನೆ ಎಂದು ಶೇಖರಗೌಡ ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಹಿರೇಸಿಂದೋಗಿ. ತಿಗರಿ, ಬೆಟಗೇರಿ, ಅಳವಂಡಿ ಘಟ್ಟರಡ್ಡಿಹಾಳ ಹಾಗು ತಳಕಲ್ಲಿನಲ್ಲಿ ಪ್ರಚಾರ ಮಾಡಿದ್ದ ಅಜೀವ ಸದಸ್ಯರಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಭ್ಯರ್ಥಿ ರಾಜಶೇಖರ ಅಂಗಡಿ, ಹನುಮಂತಪ್ಪ ಅಂಡಗಿ, ದೇವೆಂದ್ರಪ್ಪ ಕುರಡಗಿ.ನಾಗಪ್ಪ ಸವಡಿ. ಸುರೇಶ ದಾಸರಡ್ಡಿ, ಗವಿಸಿದ್ದೇಶ ಹುಡೇಜಾಲಿ, ವಿರೇಶ ಸಜ್ಜನ, ವಿರೇಶ ಲಕ್ಷ್ಯಾನಿ, ಸಂಗಮೇಶ ಡಂಬಳ,. ಸುರೇಶ ಅರಕೇರಿ, ಶರಣಪ್ಪ ಮಳಗಿ ರಾಮಚಂದ್ರ ಗೊಂಡಬಾಳ, ಶಿವಲಿಂಗಪ್ಪ ಪಟ್ಟೇದ,. ಶಿವಣ್ಣ ಮೂಲಿಮನಿ. ಮಲಕಸಾಬ, ಫಕೀರಪ್ಪ ವಜ್ರಬಂಡಿ. ಈಶಪ್ಪ ಮಳಗಿ ಸೇರಿದಂತೆ ಅನೇಕ ಅಜೀವ ಸದಸ್ಯರು ಉಪಸ್ಥಿತರಿದ್ದರು.

0 comments:
Post a Comment
Click to see the code!
To insert emoticon you must added at least one space before the code.