PLEASE LOGIN TO KANNADANET.COM FOR REGULAR NEWS-UPDATES

ನೀರಿನ ಮೂಲಗಳಾದ ಕೆರೆ, ಕಾಲುವೆ, ಹಳ್ಳ ಮುಂತಾದವುಗಳನ್ನು ಸ್ವಚ್ಛವಾಗಿರಿಸಿದರೆ ಮಳೆಗಾಲದಲ್ಲಿ ನೀರು ಇಂಗುವಂತೆ ಮಾಡಲು ಸಹಕಾರಿಯಾಗುತ್ತದೆ. ಅಲ್ಲದೇ ಅಂತರ್ಜಲವು ಹೆಚ್ಚುವಂತೆ ಸಹಿತ ಮಾಡಿದಂತಾಗುತ್ತದೆ. ಪರಿಸರವನ್ನು ಪರಿಶುದ್ದವಾಗಿಟ್ಟುಕೊಂಡರೆ ಸಕಾಲದಲ್ಲಿ ಮಳೆಯ ಜೊತೆಗೆ ಸಮೃದ್ದವಾದ ಬೆಳೆಯನ್ನು ಸಹಿತ ಬೆಳೆಯಬಹುದು. ಇಂದಿನ ಜಾಗತಿಕ ತಾಪಮಾನ ಹೆಚ್ಚಳವಾಗದಂತೆ ಹಾಗೂ ನೀರಿನ ಅಹಾಕಾರವನ್ನು ತಡೆಗಟ್ಟಬಹುದು. ಗ್ರಾ.ಪಂ ವತಿಯಿಂದ ಉಚಿತವಾಗಿ ದೊರಕುವ ಸಸ್ಯಗಳನ್ನು ಪಡೆದುಕೊಂಡು ಗೌಟಾನಾ ಜಾಗದಲ್ಲಿ ಬೆಳೆಸಬೇಕೆಂದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ ಕೊಪ್ಪಳ ಹಾಗೂ ಶ್ರೀ ಕೂಡಲಸಂಗಮೇಶ್ವರ ವಿದ್ಯಾಭಿವೃದ್ದಿ ಸಂಸ್ಥೆ (ರಿ) ಬೇವೂರ ಇವರುಗಳ ಸಹಯೋಗದಲ್ಲಿ ಸರಕಾರಿ ಪ್ರೌಢ ಶಾಲೆ ಬೇವೂರಿನಲ್ಲಿ ಹಮ್ಮಿಕೊಂಡ ನೀರಿನ ಮೂಲಗಳ ಸ್ವಚ್ಛತಾ ಕಾರ್ಯಗಾರದ ಕಾರ್ಯಕ್ರಮವನ್ನು ಉಧ್ಘಾಟಿಸಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಕುಮಾರಿ. ಮಂಜುಳಾ ದೇವಿ ಹೂಗಾರ ಕರೆ ನೀಡಿದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಡಿ.ಕೆ.ಗೊಂದಿಯವರು ಇಂದಿನ ಜೀವನದಲ್ಲಿ ನೀರು ಅತ್ಯಂತ ಅಮೂಲ್ಯವಾದ ಹಾಗೂ ಜೀವಿಗಳು ಬದುಕುಳಿಯಲು ಬೇಕೇ ಬೇಕು. ಜಲಚರ ಜೀವಗಳಿಂದ ಮೊದಲುಗೊಂಡು ವನ್ಯ ಜೀವಗಳವರೆಗೆ, ಸಸ್ಯಕಾಶಿ ಮತ್ತು ಮಾನವರ ಉಳಿವಿಗೆ ನೀರಿನ ಅವಶ್ಯಕತೆ ಇದೆ. ಆದ್ದರಿಂದ ನೀರಿನ ಮೂಲಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಮಾತ್ರ ಅಂತರ್ಜಲ ಹೆಚ್ಚುತ್ತದೆ. ಇದರಿಂದ ನೀರನ್ನು ಚಕ್ರೀಯ ಸಮ ಸಂಗತಿಯಲ್ಲಿ ಪುನಃ ಬಳಸಬಹುದೆಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಭಿಪ್ರಾಯ ಪಟ್ಟರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀಕಾಂತ.ಜಿ. ವಹಿಸಿದ್ದರು.ವಿರುಪಣ್ಣ ಜನಾದ್ರಿ, ಶ್ರೀಮತಿ ಸುನಿತಾ ಜತ್ತಿ ಹಾಗೂ ಹನುಮಂತ ಮುಂತಾದವರು ವೇದಿಕೆಯ ಮೇಲಿದ್ದರು. ವಿರೇಶ ಗುಳಕಿ ನಿರೂಪಿಸಿದರೆ, ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದೀಕ್ಷಿತರವರು ಕಾರ್ಯಕ್ರಮವನ್ನು ವಂದಿಸಿದರು.

30 Dec 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top