PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ.೨೮ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ನಿಯೋಜಿತ ಆಭ್ಯರ್ಥಿ ರಾಜಶೇಖರ ಅಂಗಡಿ(ಹಲಗೇರಿ) ತಮ್ಮ ಬೆಂಬಲಿಗರೊಂದಿಗೆ,  ರವಿವಾರ ಯಲಬುರ್ಗಾ ತಾಲ್ಲೂಕಿನ ತಳಕಲ್ ಗ್ರಾಮಕ್ಕೆ ಭೇಟಿ ನೀಡಿ ಕಸಾಪ ಆಜೀವ ಸದಸ್ಯರನ್ನು ಭೇಟಿಯಾಗಿ ಮತಯಾಚಿಸಿದರು. ಕಳೆದ ಬಾರಿಯ ಕಸಾಪ ಚುನಾವಣೆಯಲ್ಲಿಯೂ ತಳಕಲ್ ಭಾಗದ ಕಸಾಪ ಆಜೀವ ಸದಸ್ಯರು ತಮಗೆ ಉತ್ತಮ ಬೆಂಬಲ ವ್ಯಕ್ತಪಡಿಸಿದ್ದನ್ನು ಸ್ಮರಿಸಿದ ರಾಜಶೇಖರ ಅಂಗಡಿ, ಈ ಬಾರಿ ನನ್ನನ್ನು ಗೆಲುವಿನ ದಡ ಸೇರಿಸಲು ಈ ಬೆಂಬಲ ಮತ್ತಷ್ಟು ಹೆಚ್ಚಳವಾಗಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿಯೇ ಯಲಬುರ್ಗಾ ತಾಲ್ಲೂಕು ಶೈಕ್ಷಣಿಕವಾಗಿ,ಸಾಂಸ್ಕೃತಿಕವಾಗಿ,ಸಾಹಿತ್ಯಿಕವಾಗಿ ಸಾಕಷ್ಟು ಕೃಷಿ ಮಾಡಿದ ಪ್ರದೇಶವಾಗಿದೆ. ಹೊಸ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸಲು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆನಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಿರಂತರ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಹೆಬ್ಬಯಕೆ ನನಗಿದೆ. ನಾಡು ನುಡಿಯ ಕೈಂಕರ್ಯದಲ್ಲಿ ಕಳೆದ ೨೦ ವರ್ಷಗಳಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಹಿಂದಿನ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿರುವ ನನಗೆ ಈ ಬಾರಿ ಫೆ.೨೮ ರಂದು ನಡೆಯಲಿರುವ  ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ  ಸ್ಥಾನದ ಚುನಾವಣೆಯಲ್ಲಿ ನನಗೆ ಮತ ನೀಡಿ ಆಶೀರ್ವದಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ತಳಕಲ್ ಗ್ರಾಮದ ಪ್ರಮುಖರಾದ ಶಿವಣ್ಣ ರಾಯರೆಡ್ಡಿ, ಶಿವಣ್ಣ ಮೂಲಿಮನಿ ಮತ್ತಿತರರ ಮನೆಗಳಿಗೆ ಭೇಟಿ ನೀಡಿ ಬೆಂಬಲ ಕೋರಿದರು. ತಳಕಲ್ ಹೊರವಲಯದಲ್ಲಿರುವ ಅಳ್ಳಿಬೆಂಚಿ ಉಡುಚಮ್ಮ ದೇವಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಿವಲಿಂಗಪ್ಪ ಪಟ್ಟೇದ,ಫಕೀರಪ್ಪ ವಾಲ್ಮೀಕಿ,ಶಿವಕುಮಾರ ಹೆಳವರ,ವಿರೂಪಾಕ್ಷಪ್ಪ ವಾರದ, ಶಂಕ್ರಪ್ಪ ಗುಡಗೇರಿ, ಮಲಿಕ್ ಸಾಬ ನೂರಬಾಷ, ಜಗದೀಶ ಕರ್ಕಿಹಳ್ಳಿ, ಭರಮಪ್ಪ  ಗೋರಿ ಮತ್ತಿತರರು ಭಾಗವಹಿಸಿದ್ದರು.
28 Dec 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top